ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಗಳಿಬ್ಬರನ್ನು ಗೂಂಡಾ ಕಾಯ್ದೆಯಡಿ ಗೋಲಗುಂಬಜ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಬಡಿಕಮಾನ ರಸ್ತೆಯ ಫರ‍್ಹಾನ್ ಅಹ್ಮದಸಾಹೇಬ ಅಬ್ದುಲ ಅಜೀಜ್ ಅಹಮದಿ ಹಾಗೂ ಯೋಗಾಪೂರ ಕಾಲನಿಯ ಸಿದ್ದಪ್ಪ ಅಲಿಯಾಸ್ ಸಿದ್ದು ಶ್ಯಾಪೇಟಿ ತಂ. ಗುರುಪಾದ ಮೂಡಲಗಿ ಮೂಡಂಗಿ ಎಂಬುವರನ್ನು ಬಂಧಿಸಿದ್ದಾರೆ.
ಆರೋಪಿಗಳು ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅವರ ಚಟುವಟಿಕೆಗಳನ್ನು ನಿಯಂತ್ರಿಸಲು ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಗೂಂಡಾ ಕಾಯ್ದೆಯಡಿ ಬಂಽಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಅವರು 2025 ಡಿ. 23 ರಂದು ಬಂಧನ ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರೂ ರೌಡಿಗಳನ್ನು ಬಂಧಿಸಿ ಕಲಬುರಗಿಯ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

