ಉದಯರಶ್ಮಿ ದಿನಪತ್ರಿಕೆ
ಇಂಡಿ: ಕೆಲವರು ಬಡತನಕ್ಕಾಗಿ ಮನೆಯಲ್ಲಿ ದೊಡ್ಡವರ ಜೊತೆ ಚಿಕ್ಕವರ ಮದುವೆ ಮಾಡುತ್ತಿದ್ದರು. ಮತ್ತು ಮನೆಯಲ್ಲಿರುವ ಸಂಬಂಧಿಗಳ ಜೊತೆ ಚಿಕ್ಕವಯಸ್ಸಿನಲ್ಲಿಯೇ ಮದುವೆ ಮಾಡುವದು ಬೇಡ, ಬಾಲ್ಯ ವಿವಾಹ ಸಮಾಜಕ್ಕೆ ಒಂದು ಪಿಡುಗು ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ನಗರದ ಶ್ರೀ ಶಾಂತೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ಸರಕಾರದ ಕೇಂದ್ರ ಸಂವಹನ ಇಲಾಖೆ ವಿಜಯಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶ್ರೀ ಶಾಂತೇಶ್ವರ ಪದವಿ ಪುರ್ವ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಬಾಲ ವಿವಾಹ ಮುಕ್ತ ಭಾರತ ಅಭಿಯಾನ ಮತ್ತು ವಂದೇ ಮಾತರಂ ೧೫೦ ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹ ತಡೆಗೆ ಗ್ರಾಮೀಣ ಮಟ್ಟದಲ್ಲಿ ೧೨ ಜನ ಮತ್ತು ನಗರ ಮಟ್ಟದಲ್ಲಿ ೯ ಜನ ಅಧಿಕಾರಿ ಇದ್ದಾರೆ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ವಂದೇ ಮಾತರಂ ಸಂದೇಶ ಸಾರಾಂಶ ಈಗಿನ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇದೆ, ಹಾಡು ಬಂಕಿಮ ಚಂದ್ರ ಬರೆದಿದ್ದು ತ್ಯಾಗ ಬಲಿದಾನದ ಸಂಕೇತ ಎಂದರು.
ಮಹಿಳಾ ಮತ್ತು ಮಕ್ಕಳ ಅಧಿಕಾರಿ ಗೀತಾ ಗುತ್ತರಗಿಮಠ ಮಾತನಾಡಿದರು.
ಕೇಂದ್ರ ಸಂವಹನ ಇಲಾಖೆ ಅಧಿಕಾರಿ ಸಿ.ಕೆ.ಸುರೇಶ, ಗಾಂಧಿ ನಿಲೇಶ ಬೇನಾಳ ಬಸವರಾಜ ಗೊರನಾಳ, ಲಲಿತಾ ಮಾದರ ಮಾತನಾಡಿದರು.
ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಭಿಮಣ್ಣ ಕವಲಗಿ, ಶಿವಯೋಗಪ್ಪ ಚನಗೊಂಡ, ದತ್ತಾ ಕುಲಕರ್ಣಿ, ನಂದಿಪ ರಾಠೋಡ ಮತ್ತಿತರಿದ್ದರು.

