ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ ಅವರು ಜನವರಿ ೨ ರಿಂದ ೫ರವರೆಗೆ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಜನವರಿ ೧ ರಂದು ಸಂಜೆ ೬:೩೫ಕ್ಕೆ ಬೆಂಗಳೂರಿನಿಂದ ರೈಲಿನ ಮೂಲಕ ಹೊರಟು, ಜ.೨ರ ಬೆಳಿಗ್ಗೆ ವಿಜಯಪುರಕ್ಕೆ ಆಗಮಿಸುವ ಅವರು, ಬೆಳಿಗ್ಗೆ ೧೧ ಗಂಟೆಯಿಂದ ಸರ್ಕಾರಿ ಕಚೇರಿಗಳ ಪರಿಶೀಲನೆ ನಡೆಸುವರು.
ಅಂದು ಮಧ್ಯಾಹ್ನ ೩ ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಸರ್ಕಾರಿ ಕಚೇರಿ ಪರಿಶೀಲನೆ ನಡೆಸಲಿದ್ದಾರೆ. ಜ.೩ ಹಾಗೂ ೪ರಂದು ಪರಿಶೀಲನೆ ನಡೆಸುವರು. ಜ.೫ರ ಬೆಳಿಗ್ಗೆ ೭:೩೦ಕ್ಕೆ ಜೇವರ್ಗಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
