Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಲಿಂ. ಶ್ರೀ ಶಂಕರಲಿAಗೇಶ್ವರ ಮಹಾರಥೋತ್ಸವ ಅಂಗವಾಗಿ ಜಾನುವಾರ ಜಾತ್ರೆ ಆಯೋಜಿಸಲಾಗಿತ್ತು.ಅಂದಾಜು ೧೫೦೦ ಕ್ಕೂ ಹೆಚ್ಚು ಜಾನುವಾರಗಳನ್ನು ರೈತರು ಇಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕೆ ತಂದಿದ್ದರು. ಈ ಪ್ರದರ್ಶನದಲ್ಲಿ ಉತ್ತಮ ರಾಸುಗಳಿಗೆ ಇಲ್ಲಿನ ಕಮರಿಮಠದ ವತಿಯಿಂದ ಉತ್ತಮ ಬಹುಮಾನ ನೀಡಲಾಯಿತು.ಈ ಜಾನುವಾರ ಜಾತ್ರೆಯಲ್ಲಿ ನೆರೆಯ ಬರಗುಡಿ ಗ್ರಾಮದ ಮಾದಣ್ಣ ಸೋಮನಿಂಗ ಕೆಳಗಿನಮನಿ ಎಂಬ ರೈತರ ೨ ಹಲ್ಲಿನ ಕಿಲಾರಿ ಹೋರಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಈ ಹೋರಿಗೆ ಬಂಥನಾಳದ ಪೂಜ್ಯ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳು ೫ ತೊಲಿ ಬೆಳ್ಳಿಯನ್ನು ಬಹುಮಾನ ರೂಪದಲ್ಲಿ ನೀಡಿ ಆಶೀರ್ವದಿಸಿದರು.ಇದೇ ಸಂದರ್ಭದಲ್ಲಿ ೮ ಜಾನುವಾರಗಳಿಗೆ ಪ್ರಥಮ, ೮ ದ್ವಿತೀಯ, ೮ ತೃತೀಯ ಬಹುಮಾನ ಕೂಡ ವಿತರಿಸಿ ಎತ್ತುಗಳ ಮಾಲಿಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಮರಿಮಠದ ಸೇವಾ ಸಮಿತಿಯ ಸದಸ್ಯರು, ಸ್ಥಳಿಯ ಹಾಗೂ ಸುತ್ತಲ ಗ್ರಾಮದ ಭಕ್ತರು ಉಪಸ್ಥಿತರಿದ್ದರು.
ಮುದ್ದೇಬಿಹಾಳ : ಪವಿತ್ರ ರಂಜಾನ್ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತç ಚಿಕಿತ್ಸೆ ಶಿಬಿರವನ್ನು ಏ18 ರಂದು ಹಮ್ಮಿಕೊಂಡಿದ್ದು ಅಗತ್ಯವಿದ್ದವರು ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಸಮಾಜ ಸೇವಕ ಅಯೂಬ್ ಮನಿಯಾರ್ ಹೇಳಿದರು.ಪಟ್ಟಣದ ದಾನೇಶ್ವರಿ ಪೆಟ್ರೋಲ್ ಪಂಪ್ ನ ಎದುರು ಇರುವ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.ವಿಜಯಪುರ ರಸ್ತೆಯಲ್ಲಿರುವ ಮನಿಯಾರ್ ಕಾಂಪ್ಲೆಕ್ಸ್ ನಲ್ಲಿ ಹೆಸರು ನೊಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಏ17 ರಂದು ಸಂಜೆ 4 ಗಂಟೆಯವರೆಗೆ ಹೆಸರು ನೊಂದಾಯಿಸಬಹುದು. ಏ18 ರಂದು ಪಟ್ಟಣದ ಸ್ಟೇಟ್ ಬ್ಯಾಂಕ್ ಹತ್ತಿರ ಇರುವ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಗುವದು. ತಪಾಸಣೆ ಬಳಿಕ ಕನ್ನಡಕದ ಅವಶ್ಯಕತೆ ಇರುವವರಿಗೆ ಕನ್ನಡಕ ಒದಗಿಸಲಾಗುವದು. ಶಸ್ತçಚಿಕಿತ್ಸೆಗೆ ಆಯ್ಕೆಯಾದವರನ್ನು ಏ19 ರಂದು ಬೆಳೆಗ್ಗೆ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತç ಚಿಕಿತ್ಸೆ ಮಾಡಿಸಲಾಗುತ್ತದೆ. ವಾಹನದ ವ್ಯವಸ್ಥೆ ಕೂಡ ನಾವೇ ಮಾಡುತ್ತೇವೆ. ಫಲಾನುಭವಿಗಳ ಆರೈಕೆಗಾಗಿ ಜೊತೆಗೆ ಒಬ್ಬರು ಬಂದರೆ ಸಾಕು ಎಂದರು.ಈ…
ಸಿಂದಗಿ: ತಾಲೂಕಿನ ಚಾಂದಕವಟೆ ಗ್ರಾಮದ ಜಮೀನೊಂದರಲ್ಲಿ ಪತ್ನಿಯನ್ನು ಕ್ರೂರವಾಗಿ ಹತ್ಯೆಗೈದ ಪತಿ ಅಪರಾಧಿ ಎಂದು ಸಾಬೀತಾಗಿದ್ದು, ೩ನೆಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ೧ಲಕ್ಷ ರೂ. ದಂಡ ವಿಧಿಸಲಾಗಿದೆ. ಗುರುಬಾಳ ಗುರಪ್ಪ ಕನ್ನಾಳಗೆ ನ್ಯಾಯಾಧೀಶರಾದ ಸುಭಾಶ ಸಂಕದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಈ ಕುರಿತು ಕೊಲೆಯಾದ ಶೀಲವಂತಿ ಅವಳ ತಾಯಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದರು. ಬಳಿಕ ಅಂದಿನ ಸಿಪಿಐ ರವಿ ವಕ್ಕುಂದ, ಎಎಸ್‌ಐ ಎಂ.ಜಿ. ಬಿರಾದಾರ ಇವರ ತಂಡ ಸೇರಿ ತನಿಖೆ ಮಾಡಿ ಸಾಕ್ಷಿಗಳನ್ನು ಕೋರ್ಟ್ಗೆ ಸಲ್ಲಿಸಿದರು. ಇದಕ್ಕೆ ಸಂಬAಧಿಸಿದAತೆ ವಿಚಾರಣೆ ಮಾಡಿದ ಜಿಲ್ಲಾ ನ್ಯಾಯಾಲಯ ಗುರುಬಾಳನನ್ನು ಅಪರಾಧಿ ಎಂದು ಆದೇಶಿಸಿ ಜೀವಾವಧಿ ಶಿಕ್ಷೆಯನ್ನು ಏ.೧೩. ೨೦೨೩ ರಂದು ಪ್ರಕಟಿಸಿದೆ.ಐಪಿಸಿ ೩೦೨ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಜೊತೆಗೆ ೧ಲಕ್ಷ ರೂ. ದಂಡ ವಿಧಿಸಲಾಗಿದೆ. ಐಪಿಸಿ ೨೦೧ರ ಅಡಿಯಲ್ಲಿ ೭ವರ್ಷ ಜೈಲು ಶಿಕ್ಷೆ ಹಾಗೂ ೧೦ ಸಾವಿರ ರೂ., ಐಪಿಸಿ ೫೦೬(೨) ಅಡಿಯಲ್ಲಿ ೨ವರ್ಷ…
ಚುನಾವಣೆಗಾಗಿ ಸಕಲ ಪೊಲೀಸ್ ಬಂದೋಬಸ್ತ್ :ಎಸ್ಪಿ ಆನಂದಕುಮಾರ ವಿಜಯಪುರ: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬAಧಿಸಿದAತೆ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಹಲವು ಪ್ರರಣಗಳು ದಾಖಲಾಗಿವೆ.ಆರ್ ಪಿ ಆಕ್ಟ್ ೧೨೭ ಎ ರಡಿ ನಿಗದಿತ ಘೋಷಣೆ ಮಾಡದ ಕರಪತ್ರ ಮುದ್ರಣಕ್ಕೆ ಒಂದು ಕೇಸ್ ಮತದಾರರ ಆಮೀಷ ಒಡ್ಡಿದಕ್ಕೆ ಸಂಬAಧಿಸಿದAತೆ ಎರಡು ಕೇಸ್‌ಗಳನ್ನು ಸೇರಿದಂತೆ ಎಂಸಿಸಿ ಅಡಿ ೬ ಕೇಸ್‌ಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ ಡಿ ಆನಂದ ಕುಮಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಚುನಾವಣೆಗಾಗಿ ಸಕಲ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲೆಗೆ ೫ ಸಶಸ್ತç ಸೇನಾ ಪಡೆಗಳು ತುಕಡಿಗಳು ಆಗಮಿಸಿವೆ. ಇನ್ನೂ ೧೩ ಸೇನಾ ತುಕಡಿಗಳು ಜಿಲ್ಲೆಗೆ ಬರಲಿದ್ದು, ಒಟ್ಟಾರೆಯಾಗಿ ೩೦ ಕೇಂದ್ರ ಮೀಸಲು ಪಡೆಯ ಜಿಲ್ಲೆಯ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಿದೆ.…
ಮುದ್ದೇಬಿಹಾಳ : ತಾಲೂಕಿನ ಮಲಗಲದಿನ್ನಿ ಗ್ರಾಮದ ಹೊಲವೊಂದರಲ್ಲಿ ಅಕ್ರಮವಾಗಿ ಬೆಳೆದ ಗಾಂಜಾ ಬೆಳೆಯ ಮೇಲೆ ಪೊಲೀಸರು ದಾಳಿ ನಡೆಸಿ ಅಕ್ರಮ ಗಾಂಜಾ ಮತ್ತು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಬಸವರಾಜ ಮಲ್ಲೇಶಪ್ಪ ಬಿರಾದಾರ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ನೇತೃತ್ವದ ತಂಡ ದಾಳಿ ನಡೆಸಿ ಗಿಡದ ಸಮೇತ ಒಟ್ಟು ೩೬.೮೨೦ ಕೆಜಿ ಯಷ್ಟು ಅಕ್ರಮ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.ದಾಳಿಯಲ್ಲಿ ಪಿಎಸ್‌ಐ ಆರೀಫ್ ಮುಶಾಪುರಿ ಸಿಬ್ಬಂದಿಗಳಾದ ಗೋವಿಂದ ಗೆಣ್ಣೂರ, ವಿರೇಶ ಹಾಲಗಂಗಾಧರಮಠ, ಮಲ್ಲನಗೌಡ ಬೋಳರೆಡ್ಡಿ, ಚಿದಾನಂದ ಸುರಗಿಹಳ್ಳಿ, ಶ್ರೀಕಾಂತ ಬಿರಾದಾರ, ನರಸಿಂಹ ಚೌದರಿ, ಶಿವರಾಜ ನಾಗರೆಡ್ಡಿ, ಮಾಳಪ್ಪ ನಾಲತವಾಡ, ರವಿ ಲಮಾಣಿ ಇದ್ದರು.
ಸಿ0ದಗಿ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರ ಗ್ರಾಮದ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ವಿವಿಧ ಜಾತಿಯ ವನ್ಯಜೀವಿ ಮತ್ತು ಪ್ರಾಣಿಗಳ ಅಂಗಾ0ಗಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಐಪಿಎಸ್, ಎಡಿಜಿಪಿ, ಸಿಐಡಿ, ಕೆ.ವಿ, ಶರತ್‌ಚಂದ್ರ್, ಹುಬ್ಬಳ್ಳಿ ಡಿವೈಎಸ್‌ಪಿ ಮುತ್ತಣ್ಣ ಸರ್ವಗೋಳ ಹಾಗೂ ಸಿಐಡಿ ಅರಣ್ಯ ಘಟಕದ ಮಾರ್ಗದರ್ಶನದಲ್ಲಿ ಬೆಳಗಾವಿ ಅರಣ್ಯ ಸಂಚಾರಿ ದಳದ ಸಿಐಡಿ ಪಿಎಸ್‌ಐ ರೋಹಿಣಿ ಪಾಟೀಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರ ಗ್ರಾಮದ ಬಸ್ ನಿಲ್ದಾಣದ ಬಳಿ ವಿವಿಧ ಜಾತಿಯ ವನ್ಯಜೀವಿ ಮತ್ತು ಪ್ರಾಣಿಗಳ ಅಂಗಾ0ಗಗಳ ಸಾಗಾಟ ಮಾಡುತ್ತಿರುವ ವೇಳೆ ಪೊಲೀಸರು ದಾಳಿಗೈದಿರುವ ಘಟನೆ ಬುಧವಾರ ನಡೆದಿದೆ. ಆರೋಪಿಯಿಂದ 807-ಉಡದ ಶಿಶ್ನಗಳು, 116 ಇಂದ್ರಜಾಲಗಳು, 02 ಕಾಡ ಬೆಕ್ಕಿನ ಪಾದಗಳು, 02 ಕಾಡ ಬೆಕ್ಕು ಉಗುರುಗಳು, ೦3 ಕರಡಿಯ ಉಗುರುಗಳು, 28 ನೀರು ಪಕ್ಷಿಗಳ ಕಾಲುಗಳು, 02 ಉಡದ ಕಾಲುಗಳು, 73 ಗೂಬೆಯ ಪುಕ್ಕಗಳು, 04 ಕರಡಿಯ ಹಲ್ಲುಗಳು, 32…
ವಿಜಯಪುರ ಜಿಲ್ಲೆಯ 8 ಕ್ಷೇತ್ರಗಳು | ಮುದ್ದೇಬಿಹಾಳ-1 | ದೇವರಹಿಪ್ಪರಗಿ-1 | ಬಸವನಬಾಗೇವಾಡಿ-1 | ಬಬಲೇಶ್ವರ-1 | ವಿಜಯಪುರ ನಗರ-2 | ನಾಗಠಾಣ-4 | ಇಂಡಿ-4 | ಸಿಂದಗಿ-3 ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸಲು ಮೊದಲನೇ ದಿನವಾದ ಏಪ್ರಿಲ್ ೧೩ ಗುರುವಾರದಂದು ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ.26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ 01, 27-ದೇವರಹಿಪ್ಪರಗಿ ಮತಕ್ಷೇತ್ರದಿಂದ 01, 28-ಬಸವನಬಾಗೇವಾಡಿ ಮತಕ್ಷೇತ್ರದಿಂದ 01, 29-ಬಬಲೇಶ್ವರ ಮತಕ್ಷೇತ್ರದಿಂದ 01, 30-ಬಿಜಾಪುರ ನಗರ ಮತಕ್ಷೇತ್ರದಿಂದ 2, 31-ನಾಗಠಾಣ (ಎಸ್‌ಸಿ) ಮತಕ್ಷೇತ್ರದಿಂದ 4, 32-ಇಂಡಿ ಮತಕ್ಷೇತ್ರದಿಂದ 04 ಹಾಗೂ 33-ಸಿಂದಗಿ ಮತಕ್ಷೇತ್ರದಿಂದ ೦3 ನಾಮಪತ್ರಗಳು ಸೇರಿದಂತೆ ಒಟ್ಟು 17 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ.ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ ಅಪ್ಪಾಜಿ ಅಲಿಯಾಸ ಚನ್ನಬಸವರಾಜ ನಾಡಗೌಡ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್), ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದಿಂದ ಶಿವಾನಂದ ಯಡಹಳ್ಳಿ (ಕೆಆರ್‌ಎಸ್), ಬಸವನಬಾಗೇವಾಡಿ ವಿಧಾನ ಸಭಾ ಮತಕ್ಷೇತ್ರದಿಂದ ಶಿವಾನಂದ ಪಾಟೀಲ (ಭಾರತೀಯ ರಾಷ್ಟಿçÃಯ ಕಾಂಗ್ರೆಸ್)…
ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ರಾ ಪಾಟೀಲ ಯತ್ನಾಳ ಅವರ, ಚುನಾವಣಾ ಪ್ರಚಾರ ಕಾರ್ಯಾಲಯವನ್ನು ಗುರುವಾರ ಉದ್ಘಾಟಿಸಲಾಯಿತು.ಹಿಂದೂಗಳ ಆರಾಧ್ಯದೈವ ಗೋ ಮಾತೆಗೆ ಪೂಜೆ ಸಲ್ಲಿಸಿ, ಹಣ್ಣು, ಸಿಹಿ ತಿನಿಸಿ, ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯಾಲಯದಲ್ಲಿ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.ಬಾಳೆದಿಂಡು, ತೆಂಗಿನ ಪರಕಿ, ಹೂಗಳಿಂದ ಅಲಂಕಾರಗೊಳಿಸಲಾದ ಕಾರ್ಯಾಲಯ ಕೇಸರಿಮಯವಾಗಿ ಕಂಗೋಳಿಸುತ್ತಿದೆ. ರಂಗೋಲಿಯಲ್ಲಿ ಅರಳಿದ ಕಮಲದ ಹೂ ಕಣ್ಮನ ಸೆಳೆಯಿತು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ವಿಡಿಎ ಅಧ್ಯಕ್ಷ ಪರಶುರಾಮ ರಜಪುತ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಮುಖಂಡರಾದ ವಿವೇಕಾನಂದ ಡಬ್ಬಿ, ಪ್ರಕಾಶ ಅಕ್ಕಲಕೋಟ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಕಾರ್ಯಕರ್ತರು, ಅಭಿಮಾನಿಗಳು ಮತ್ತಿತರರು ಇದ್ದರು.
ಮುದ್ದೇಬಿಹಾಳ: ರಾಜ್ಯದಲ್ಲಿ ಬಿಜೆಪಿ ಸರಕಾರದಿಂದ ಜನಸಾಮಾನ್ಯರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎಂಬುದನ್ನು ಜನರು ಈಗಾಗಲೇ ಅರ್ಥೈಸಿಕೊಂಡಿದ್ದಾರೆ. ಅಲ್ಲದೇ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ(ಅಪ್ಪಾಜಿ) ಪುತ್ರಿ ಪಲ್ಲವಿ ನಾಡಗೌಡ ಹೇಳಿದರು.ಪಟ್ಟಣದ ವಿದ್ಯಾನಗರ, ಗಣೇಶನಗರ ಬಡಾವಣೆಗಳಲ್ಲಿ ತಮ್ಮ ತಂದೆಯ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.ಕಳೆದ ೩೫ ವರ್ಷಗಳಿಂದ ನಮ್ಮ ತಂದೆಯವರಾದ ಸಿ.ಎಸ್.ನಾಡಗೌಡ ಅವರು ಸ್ವಚ್ಛ ಹಾಗೂ ಸನ್ನಡೆ ರಾಜಕಾರಣ ನಡೆಸುವ ಮೂಲಕ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಅನುದಾನ ತಂದು ಉತ್ತಮ ಜನರಪರ ಆಡಳಿತ ಕೊಟ್ಟಿದ್ದಾರೆ. ಮತಕ್ಷೇತ್ರದಲ್ಲಿ ನಿರಾವರಿ, ವಿದ್ಯುತ್ ಮತ್ತು ಪಟ್ಟಣ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಬಹುಹಳ್ಳಿ ಕುಡಿಯುವ ನೀರು ಯೋಜನೆಯಡಿಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಹಲವಾರು ಯೋಜನೆಗಳನ್ನು ತಂದಿದ್ದೇ ನಮ್ಮ ತಂದೆಯವರಾದ ನಾಡಗೌಡರು. ಆದರೆ ಕಾಂಗ್ರೆಸ್ ಸರಕಾರದ ಅಧಿಕಾರದಲ್ಲಿ ನಾಡಗೌಡರು ತಂದಿರುವ ಅನುದಾನವನ್ನು ಇಂದಿನ ಬಿಜೆಪಿ ಶಾಸಕರು…
ಸಿಂದಗಿ: ರಾಜ್ಯ ವಿಧಾನಸಭೆ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ನಾಮಪತ್ರ ಸಲ್ಲಿಕೆ ಮೊದಲ ದಿನ ಬಿಜೆಪಿ, ಕಾಂಗ್ರೆಸ್ ಮತ್ತು ಬಿಎಸ್‌ಪಿ ಯಿಂದ ತಲಾ ಒಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆಯಾಗಿವೆ.ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ೨೦೨೩ರ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆಯ ವೇಳಾಪಟ್ಟಿಯಂತೆ ಅಭ್ಯರ್ಥಿಗಳು ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಸಹಾಯಕ ಚುನಾವಣಾಧಿಕಾರಿಗಳಾದ ತಹಶೀಲ್ದಾರ ನಿಂಗಪ್ಪ ಬಿರಾದಾರ, ತಹಶೀಲ್ದಾರ ಸುರೇಶ ಇದ್ದರು. ಬಿಜೆಪಿ ಘೋಷಿತ ಅಭ್ಯರ್ಥಿ ಹಾಲಿ ಶಾಸಕ ರಮೇಶ ಭೂಸನೂರ ಅವರು ನಾಮ ಪತ್ರ ಸಲ್ಲಿಸಿದರು.ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ನ್ಯಾಯವಾದಿ ಅರವಿಂದ ಕನ್ನೂರ, ಪೀರು ಕೆರೂರ ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ಇದ್ದರು. ಬಿಎಸ್‌ಪಿ ಘೋಷಿತ ಅಭ್ಯರ್ಥಿ ದಸ್ತಗೀರ ಮುಲ್ಲಾ ಅವರು ನಾಮಪತ್ರ ಸಲ್ಲಿಸಿದರು. ಇದೇ ವೇಳೆ ರಮೇಶ ಖಾನಾಪೂರ, ಚಂದ್ರಶೇಖರ ದೇವೂರ, ರಸುಲಸಾಬ ಆಲಮೇಲ ಇದ್ದರು. ಕಾಂಗ್ರೆಸ್ ಸಿಂದಗಿ ಮತಕ್ಷೇತ್ರಕ್ಕೆ ಇನ್ನೂ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ.…
