ಇಂಡಿ: ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಲಿಂ. ಶ್ರೀ ಶಂಕರಲಿAಗೇಶ್ವರ ಮಹಾರಥೋತ್ಸವ ಅಂಗವಾಗಿ ಜಾನುವಾರ ಜಾತ್ರೆ ಆಯೋಜಿಸಲಾಗಿತ್ತು.
ಅಂದಾಜು ೧೫೦೦ ಕ್ಕೂ ಹೆಚ್ಚು ಜಾನುವಾರಗಳನ್ನು ರೈತರು ಇಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕೆ ತಂದಿದ್ದರು. ಈ ಪ್ರದರ್ಶನದಲ್ಲಿ ಉತ್ತಮ ರಾಸುಗಳಿಗೆ ಇಲ್ಲಿನ ಕಮರಿಮಠದ ವತಿಯಿಂದ ಉತ್ತಮ ಬಹುಮಾನ ನೀಡಲಾಯಿತು.
ಈ ಜಾನುವಾರ ಜಾತ್ರೆಯಲ್ಲಿ ನೆರೆಯ ಬರಗುಡಿ ಗ್ರಾಮದ ಮಾದಣ್ಣ ಸೋಮನಿಂಗ ಕೆಳಗಿನಮನಿ ಎಂಬ ರೈತರ ೨ ಹಲ್ಲಿನ ಕಿಲಾರಿ ಹೋರಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಈ ಹೋರಿಗೆ ಬಂಥನಾಳದ ಪೂಜ್ಯ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳು ೫ ತೊಲಿ ಬೆಳ್ಳಿಯನ್ನು ಬಹುಮಾನ ರೂಪದಲ್ಲಿ ನೀಡಿ ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ೮ ಜಾನುವಾರಗಳಿಗೆ ಪ್ರಥಮ, ೮ ದ್ವಿತೀಯ, ೮ ತೃತೀಯ ಬಹುಮಾನ ಕೂಡ ವಿತರಿಸಿ ಎತ್ತುಗಳ ಮಾಲಿಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಮರಿಮಠದ ಸೇವಾ ಸಮಿತಿಯ ಸದಸ್ಯರು, ಸ್ಥಳಿಯ ಹಾಗೂ ಸುತ್ತಲ ಗ್ರಾಮದ ಭಕ್ತರು ಉಪಸ್ಥಿತರಿದ್ದರು.
Related Posts
Add A Comment