ಚುನಾವಣೆಗಾಗಿ ಸಕಲ ಪೊಲೀಸ್ ಬಂದೋಬಸ್ತ್ :ಎಸ್ಪಿ ಆನಂದಕುಮಾರ
ವಿಜಯಪುರ: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬAಧಿಸಿದAತೆ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಹಲವು ಪ್ರರಣಗಳು ದಾಖಲಾಗಿವೆ.
ಆರ್ ಪಿ ಆಕ್ಟ್ ೧೨೭ ಎ ರಡಿ ನಿಗದಿತ ಘೋಷಣೆ ಮಾಡದ ಕರಪತ್ರ ಮುದ್ರಣಕ್ಕೆ ಒಂದು ಕೇಸ್ ಮತದಾರರ ಆಮೀಷ ಒಡ್ಡಿದಕ್ಕೆ ಸಂಬAಧಿಸಿದAತೆ ಎರಡು ಕೇಸ್‌ಗಳನ್ನು ಸೇರಿದಂತೆ ಎಂಸಿಸಿ ಅಡಿ ೬ ಕೇಸ್‌ಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ ಡಿ ಆನಂದ ಕುಮಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಚುನಾವಣೆಗಾಗಿ ಸಕಲ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲೆಗೆ ೫ ಸಶಸ್ತç ಸೇನಾ ಪಡೆಗಳು ತುಕಡಿಗಳು ಆಗಮಿಸಿವೆ. ಇನ್ನೂ ೧೩ ಸೇನಾ ತುಕಡಿಗಳು ಜಿಲ್ಲೆಗೆ ಬರಲಿದ್ದು, ಒಟ್ಟಾರೆಯಾಗಿ ೩೦ ಕೇಂದ್ರ ಮೀಸಲು ಪಡೆಯ ಜಿಲ್ಲೆಯ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಿದೆ. ಸಾರ್ವಜನಿಕರು ನಿರ್ಭಿತಿಯಿಂದ ಮತದಾನ ಮಾಡುವ ನಿಟ್ಟಿನಲ್ಲಿ ಪೊಲೀಸ್ ಸೂಕ್ತ ಬಂದೊಬಸ್ತ ಕಲ್ಪಿಸಲಾಗಿದೆ. ಎಂದರು.
ಜಿಲ್ಲೆಯಲ್ಲಿ ಯಾವುದೇ ರೀತಿಯ ಭಯದ ವಾತಾವರಣ ಇಲ್ಲ, ಮುಕ್ತವಾಗಿ ಚುನಾವಣೆ ನಡೆಸಲು ಎಲ್ಲ ಅಗತ್ಯ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ವಿಜಯಪುರ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಉಪಸ್ಥಿತರಿದ್ದರು.