ಸಿಂದಗಿ: ತಾಲೂಕಿನ ಚಾಂದಕವಟೆ ಗ್ರಾಮದ ಜಮೀನೊಂದರಲ್ಲಿ ಪತ್ನಿಯನ್ನು ಕ್ರೂರವಾಗಿ ಹತ್ಯೆಗೈದ ಪತಿ ಅಪರಾಧಿ ಎಂದು ಸಾಬೀತಾಗಿದ್ದು, ೩ನೆಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ೧ಲಕ್ಷ ರೂ. ದಂಡ ವಿಧಿಸಲಾಗಿದೆ. ಗುರುಬಾಳ ಗುರಪ್ಪ ಕನ್ನಾಳಗೆ ನ್ಯಾಯಾಧೀಶರಾದ ಸುಭಾಶ ಸಂಕದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಕುರಿತು ಕೊಲೆಯಾದ ಶೀಲವಂತಿ ಅವಳ ತಾಯಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದರು. ಬಳಿಕ ಅಂದಿನ ಸಿಪಿಐ ರವಿ ವಕ್ಕುಂದ, ಎಎಸ್‌ಐ ಎಂ.ಜಿ. ಬಿರಾದಾರ ಇವರ ತಂಡ ಸೇರಿ ತನಿಖೆ ಮಾಡಿ ಸಾಕ್ಷಿಗಳನ್ನು ಕೋರ್ಟ್ಗೆ ಸಲ್ಲಿಸಿದರು. ಇದಕ್ಕೆ ಸಂಬAಧಿಸಿದAತೆ ವಿಚಾರಣೆ ಮಾಡಿದ ಜಿಲ್ಲಾ ನ್ಯಾಯಾಲಯ ಗುರುಬಾಳನನ್ನು ಅಪರಾಧಿ ಎಂದು ಆದೇಶಿಸಿ ಜೀವಾವಧಿ ಶಿಕ್ಷೆಯನ್ನು ಏ.೧೩. ೨೦೨೩ ರಂದು ಪ್ರಕಟಿಸಿದೆ.
ಐಪಿಸಿ ೩೦೨ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಜೊತೆಗೆ ೧ಲಕ್ಷ ರೂ. ದಂಡ ವಿಧಿಸಲಾಗಿದೆ. ಐಪಿಸಿ ೨೦೧ರ ಅಡಿಯಲ್ಲಿ ೭ವರ್ಷ ಜೈಲು ಶಿಕ್ಷೆ ಹಾಗೂ ೧೦ ಸಾವಿರ ರೂ., ಐಪಿಸಿ ೫೦೬(೨) ಅಡಿಯಲ್ಲಿ ೨ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ಅಪರಾಧಿಗೆ ವಿಧಿಸಿದ ದಂಡದ ಮೊತ್ತವನ್ನು ಮಕ್ಕಳಿಗೆ ಪರಿಹಾರ ನೀಡಲು ಆದೇಶಿಸಲಾಗಿದೆ.
Related Posts
Add A Comment