ಮುದ್ದೇಬಿಹಾಳ: ರಾಜ್ಯದಲ್ಲಿ ಬಿಜೆಪಿ ಸರಕಾರದಿಂದ ಜನಸಾಮಾನ್ಯರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎಂಬುದನ್ನು ಜನರು ಈಗಾಗಲೇ ಅರ್ಥೈಸಿಕೊಂಡಿದ್ದಾರೆ. ಅಲ್ಲದೇ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ(ಅಪ್ಪಾಜಿ) ಪುತ್ರಿ ಪಲ್ಲವಿ ನಾಡಗೌಡ ಹೇಳಿದರು.
ಪಟ್ಟಣದ ವಿದ್ಯಾನಗರ, ಗಣೇಶನಗರ ಬಡಾವಣೆಗಳಲ್ಲಿ ತಮ್ಮ ತಂದೆಯ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ ೩೫ ವರ್ಷಗಳಿಂದ ನಮ್ಮ ತಂದೆಯವರಾದ ಸಿ.ಎಸ್.ನಾಡಗೌಡ ಅವರು ಸ್ವಚ್ಛ ಹಾಗೂ ಸನ್ನಡೆ ರಾಜಕಾರಣ ನಡೆಸುವ ಮೂಲಕ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಅನುದಾನ ತಂದು ಉತ್ತಮ ಜನರಪರ ಆಡಳಿತ ಕೊಟ್ಟಿದ್ದಾರೆ. ಮತಕ್ಷೇತ್ರದಲ್ಲಿ ನಿರಾವರಿ, ವಿದ್ಯುತ್ ಮತ್ತು ಪಟ್ಟಣ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಬಹುಹಳ್ಳಿ ಕುಡಿಯುವ ನೀರು ಯೋಜನೆಯಡಿಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಹಲವಾರು ಯೋಜನೆಗಳನ್ನು ತಂದಿದ್ದೇ ನಮ್ಮ ತಂದೆಯವರಾದ ನಾಡಗೌಡರು. ಆದರೆ ಕಾಂಗ್ರೆಸ್ ಸರಕಾರದ ಅಧಿಕಾರದಲ್ಲಿ ನಾಡಗೌಡರು ತಂದಿರುವ ಅನುದಾನವನ್ನು ಇಂದಿನ ಬಿಜೆಪಿ ಶಾಸಕರು ತಾವು ತಂದಿದ್ದೇನೆ ಎಂದು ಹೇಳಿ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಪೊಳ್ಳು ಆಶ್ವಾಸನೆಗೆ ಮತ್ತು ಆಸೆ ಆಮಿಷಗಳಿಗೆ ಜನರು ಬಲಿಯಾಗದೇ ಉತ್ತಮ ಜನಪರ ಕಾಳಜಿ ಹೊಂದಿದ ಸಾಮಾಜಿಕ ನ್ಯಾಯವೊದಗಿಸುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಇದೊಂದು ಬಾರಿ ನನ್ನ ತಂದೆ ಸಿ.ಎಸ್.ನಾಡಗೌಡ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಹಲವಾರು ಜನ ಮಹಿಳಾ ಕಾರ್ಯಕರ್ತರು ಹಾಗೂ ೨೫ ಕ್ಕೂ ಹೆಚ್ಚು ಜನ ಯುವ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಿಗೇರಿ, ಸುಜಾತಾ ಶಿಂಧೆ, ತಾಲೂಕಾ ಬ್ಲಾಕ್ ಮಹಿಳಾ ಅಧ್ಯಕ್ಷೆ ಶೋಭಾ ಶೆಳ್ಳಗಿ, ಪುರಸಭೆ ಸದಸ್ಯೆ ಪ್ರೀತಿ ದೇಗಿನಾಳ, ತಾಲೂಕಾ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದರಫಿಕ ಶಿರೋಳ, ಅಶ್ವಿನಿ ದೇಶಪಾಂಡೆ, ಕಮಲಾ ಭಜಂತ್ರಿ, ನೀಲಮ್ಮಾ ಚಲವಾದಿ, ಬಾಬಾ ಪಟೇಲ, ಲಕ್ಷಣ ಚವ್ಹಾಣ, ನಿಸಾರ ಮಮದಾಪೂರ, ಅಬ್ದುಲ್ ಮುಲ್ಲಾ, ಇಬ್ರಾಹಿಂ ಮುಲ್ಲಾ, ಬಾಬು ಬೋಗಾರ, ಅಶೋಕ ಬೂದಿಹಾಳ, ರಾಜು ಆಲೂರ, ಅಬೂಬ್ಕರ ಬಾಗವಾನ, ಅನೀಲ ಹರನಶಿಕಾರಿ, ಸುಭಾಷ್, ಯೂಸುಫ್ ವಾಲಿಕಾರ, ಅಬ್ದುಲ್ ನಾಗರಳ, ಅನ್ವರ ಬಾಗವಾನ, ಉಮೇಶ ಕುಂಬಾರ, ದಾದಾಫೀರ ಮೊಕಾಶಿ, ವಿಜಯಕುಮಾರ ಕೊಟ್ಟರು, ಅನೀಲ ಕಳ್ಳಿಮನಿ, ಜಗದೀಶ ದೊಡ್ಡಮನಿ, ಆರೀಫ ವಾಲಿಕಾರ, ಹರೀಶ ವಿಜಯಕರ, ವಿನಾಯಕ ಚಿನಿವಾರ, ಶಿವುಕುಮಾರ ಬಳವಾಟ, ಸಚೀನ ಹಿರೇಮಠ, ವಿನೋದ ದೋತ್ರೆ, ಸೇರಿದಂತೆ ಹಲವರು ಇದ್ದರು.
Subscribe to Updates
Get the latest creative news from FooBar about art, design and business.
ಬಿಜೆಪಿ ಅಭ್ಯರ್ಥಿಯ ಆಸೆ, ಆಮಿಷಗಳಿಗೆ ಬಲಿಯಾಗದಿರಿ :ಪಲ್ಲವಿ ನಾಡಗೌಡ
Related Posts
Add A Comment