ವಿಜಯಪುರ ಜಿಲ್ಲೆಯ 8 ಕ್ಷೇತ್ರಗಳು | ಮುದ್ದೇಬಿಹಾಳ-1 | ದೇವರಹಿಪ್ಪರಗಿ-1 | ಬಸವನಬಾಗೇವಾಡಿ-1 | ಬಬಲೇಶ್ವರ-1 | ವಿಜಯಪುರ ನಗರ-2 | ನಾಗಠಾಣ-4 | ಇಂಡಿ-4 | ಸಿಂದಗಿ-3
ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸಲು ಮೊದಲನೇ ದಿನವಾದ ಏಪ್ರಿಲ್ ೧೩ ಗುರುವಾರದಂದು ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ.
26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ 01, 27-ದೇವರಹಿಪ್ಪರಗಿ ಮತಕ್ಷೇತ್ರದಿಂದ 01, 28-ಬಸವನಬಾಗೇವಾಡಿ ಮತಕ್ಷೇತ್ರದಿಂದ 01, 29-ಬಬಲೇಶ್ವರ ಮತಕ್ಷೇತ್ರದಿಂದ 01, 30-ಬಿಜಾಪುರ ನಗರ ಮತಕ್ಷೇತ್ರದಿಂದ 2, 31-ನಾಗಠಾಣ (ಎಸ್‌ಸಿ) ಮತಕ್ಷೇತ್ರದಿಂದ 4, 32-ಇಂಡಿ ಮತಕ್ಷೇತ್ರದಿಂದ 04 ಹಾಗೂ 33-ಸಿಂದಗಿ ಮತಕ್ಷೇತ್ರದಿಂದ ೦3 ನಾಮಪತ್ರಗಳು ಸೇರಿದಂತೆ ಒಟ್ಟು 17 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ.
ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ ಅಪ್ಪಾಜಿ ಅಲಿಯಾಸ ಚನ್ನಬಸವರಾಜ ನಾಡಗೌಡ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್), ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದಿಂದ ಶಿವಾನಂದ ಯಡಹಳ್ಳಿ (ಕೆಆರ್‌ಎಸ್), ಬಸವನಬಾಗೇವಾಡಿ ವಿಧಾನ ಸಭಾ ಮತಕ್ಷೇತ್ರದಿಂದ ಶಿವಾನಂದ ಪಾಟೀಲ (ಭಾರತೀಯ ರಾಷ್ಟಿçÃಯ ಕಾಂಗ್ರೆಸ್) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬಬಲೇಶ್ವರ ವಿಧಾನ ಸಭಾ ಮತಕ್ಷೇತ್ರದಿಂದ ಬಸಪ್ಪ ಹೊನವಾಡ (ಜನತಾದಳ (ಜಾತ್ಯಾತೀತ)), ಬಿಜಾಪುರ ನಗರ ವಿಧಾನ ಸಭಾ ಮತಕ್ಷೇತ್ರದಿಂದ ಕಲ್ಲಪ್ಪ ರೇವಣಸಿದ್ದಪ್ಪ ಕಡೇಚೂರ (ಪಕ್ಷೇತರ) ಹಾಗೂ ಮಲ್ಲಿಕಾರ್ಜುನ ಭೀಮಪ್ಪ/ರೇಣುಕಾ ಕೆಂಗನಾಳ (ಪಕ್ಷೇತರ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಾಗಠಾಣ ಮತಕ್ಷೇತ್ರದಿಂದ ಕವಿತಾ ವಿ.ಕಟಕಧೋಂಡ (ರಾಣಿ ಚೆನ್ನಮ್ಮ ಪಾರ್ಟಿ), ಅರುಣಾ ಗಂಗಾರಾಮ ಕಟಕಧೋಂಡ (ಪಕ್ಷೇತರ), ವೇಂಕಟೇಶ್ವರ ಮಹಾಸ್ವಾಮೀಜಿ ಕಟಕಧೋಂಡ (ಭಾರತೀಯ ಜನತಾ ಪಾರ್ಟಿ) ಹಾಗೂ ವೇಂಕಟೇಶ್ವರ ಮಹಾಸ್ವಾಮೀಜಿ ಕಟಕಧೋಂಡ (ಹಿಂದೂಸ್ತಾನ ಜನತಾ ಪಾರ್ಟಿ) ಅವರು ನಾಮಪತ್ರ ಸಲ್ಲಿಸಿದ್ದಾರೆ.

ಇಂಡಿ ವಿಧಾನಸಭಾ ಮತಕ್ಷೇತ್ರದಿಂದ ಯಶವಂತರಾಯಗೌಡ ಪಾಟೀಲ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್)೦೨ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬಸವರಾಜ ಪಾಟೀಲ ಉರ್ಫ ಗೌಡರ (ಜನತಾದಳ ಜಾತ್ಯಾತೀತ) ಹಾಗೂ ಅಶೋಕ ಜಾಧವ (ಕರ್ನಾಟಕ ರಾಷ್ಟç ಸಮಿತಿ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಸಿಂದಗಿ ವಿಧಾನಸಭಾ ಮತಕ್ಷೇತ್ರದಿಂದ ಭೂಸನೂರ ರಮೇಶ ಬಾಳಪ್ಪ (ಭಾರತೀಯ ಜನತಾ ಪಾರ್ಟಿ), ಅಶೋಕ ಮಲ್ಲಪ್ಪ ಮನಗೂಳಿ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್) ಹಾಗೂ ದಸ್ತಗೀರ ಬಾಷಾ ಮಕಾನದಾರ (ಬಹುಜನ ಸಮಾಜ ಪಾರ್ಟಿ) ಅವರು ನಾಮತ್ರ ಸಲ್ಲಿಸಿದ್ದಾರೆ.