ಸಿ0ದಗಿ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರ ಗ್ರಾಮದ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ವಿವಿಧ ಜಾತಿಯ ವನ್ಯಜೀವಿ ಮತ್ತು ಪ್ರಾಣಿಗಳ ಅಂಗಾ0ಗಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಐಪಿಎಸ್, ಎಡಿಜಿಪಿ, ಸಿಐಡಿ, ಕೆ.ವಿ, ಶರತ್‌ಚಂದ್ರ್, ಹುಬ್ಬಳ್ಳಿ ಡಿವೈಎಸ್‌ಪಿ ಮುತ್ತಣ್ಣ ಸರ್ವಗೋಳ ಹಾಗೂ ಸಿಐಡಿ ಅರಣ್ಯ ಘಟಕದ ಮಾರ್ಗದರ್ಶನದಲ್ಲಿ ಬೆಳಗಾವಿ ಅರಣ್ಯ ಸಂಚಾರಿ ದಳದ ಸಿಐಡಿ ಪಿಎಸ್‌ಐ ರೋಹಿಣಿ ಪಾಟೀಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರ ಗ್ರಾಮದ ಬಸ್ ನಿಲ್ದಾಣದ ಬಳಿ ವಿವಿಧ ಜಾತಿಯ ವನ್ಯಜೀವಿ ಮತ್ತು ಪ್ರಾಣಿಗಳ ಅಂಗಾ0ಗಗಳ ಸಾಗಾಟ ಮಾಡುತ್ತಿರುವ ವೇಳೆ ಪೊಲೀಸರು ದಾಳಿಗೈದಿರುವ ಘಟನೆ ಬುಧವಾರ ನಡೆದಿದೆ. ಆರೋಪಿಯಿಂದ 807-ಉಡದ ಶಿಶ್ನಗಳು, 116 ಇಂದ್ರಜಾಲಗಳು, 02 ಕಾಡ ಬೆಕ್ಕಿನ ಪಾದಗಳು, 02 ಕಾಡ ಬೆಕ್ಕು ಉಗುರುಗಳು, ೦3 ಕರಡಿಯ ಉಗುರುಗಳು, 28 ನೀರು ಪಕ್ಷಿಗಳ ಕಾಲುಗಳು, 02 ಉಡದ ಕಾಲುಗಳು, 73 ಗೂಬೆಯ ಪುಕ್ಕಗಳು, 04 ಕರಡಿಯ ಹಲ್ಲುಗಳು, 32 ಮುಂಗಸಿಯ ಕಾಲುಗಳು, 07 ಮುಂಗುಸಿಯ ದವಡೆಗಳು, 16 ಮುಂಗುಸಿಯ ಚರ್ಮದಿಂದ ಮಾಡಿದ ಉಂಡೆಗಳು, ೨೬ ಕಾಡು ಹಂದಿಯ ಹಲ್ಲುಗಳು, 03 ಅಪರಿಚಿತ ಕಾಡು ಪ್ರಾಣಿಯ ಉಗುರುಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಸಿಐಡಿ ಅರಣ್ಯ ಸಂಚಾರಿ ದಳವು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಾರಾಷ್ಟ್ರದ ಅಸವಲದಾರಾ ಗ್ರಾಮದ ಪವನ್ ಜಾಫರ್ ಭೋಸಲೆ ಬಂಧಿತ ಆರೋಪಿಯಾಗಿದ್ದಾನೆ. ಈ ಮೇಲ್ಕಂಡ್ ಆರೋಪದ ಮೇಲೆ ಆರೋಪಿಯ ವಿರುದ್ಧ ಬೆಳಗಾವಿಯ ಪೊಲೀಸ್ ಅರಣ್ಯ ಸಂಚಾರಿ ದಳದವರು, ಡಬ್ಲೂಎಲ್‌ಓಆರ್ ನಂ.02/2023 ಕಲಂ 09,39,40,44, 48(A) 49(B), 50,ಸಹ ಕಲಂ 55 ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ-1972ರ ಸ್ಕೆಡ್ಯೂಲ್-1 ಮತ್ತು 2ರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment