Subscribe to Updates
Get the latest creative news from FooBar about art, design and business.
Author: editor.udayarashmi@gmail.com
Udayarashmi kannada daily newspaper
Udayarashmi kannada daily newspaper
ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನ ಆಚರಣೆ ವಿಜಯಪುರ: ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟçವಾಗಿ ವಿಶ್ವದ ಗಮನ ಸೆಳೆಯುತ್ತಿದೆ. ಸಂವಿಧಾನದಲ್ಲಿ ಎಲ್ಲ ಆದರ್ಶಗಳನ್ನು ಅಳವಡಿಸುವ ಮೂಲಕ ಜನತೆಗೆ ಸಮಾನತೆಯನ್ನು ಒದಗಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು. ಚುನಾವಣಾ ನೀತಿ ಸಂಹಿತೆ ಜಾರಿಯಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ, ಅರ್ಥಪೂರ್ಣವಾಗಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು. ಬೆಳಿಗ್ಗೆ ೯ ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿಗಳು ಮಾತನಾಡಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಇಡೀ…
ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಿಗೆ 5 ಜನ ವೆಚ್ಚ ವೀಕ್ಷಕರು ಹಾಗೂ 4 ಜನ ಸಾಮಾನ್ಯ ವೀಕ್ಷಕರನ್ನು ಭಾರತ ಚುನಾವಣಾ ಆಯೋಗ ನೇಮಕ ಮಾಡಿದ್ದು, ಈ ವೀಕ್ಷಕರಿಗೆ ಲೈಸನ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.ವೆಚ್ಚ ವೀಕ್ಷಕರ ವಿವರ :ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ಮತಕ್ಷೇತ್ರದ ವೆಚ್ಚ ವೀಕ್ಷಕರಾಗಿ ಶ್ರೀಮತಿ ಗೋಲಾಪ್ ಪ್ರಜ್ಞಾ ರಾಜೇಂದ್ರ (ಮೊ:7588182953) ಅವರನ್ನು ನೇಮಕ ಮಾಡಲಾಗಿದ್ದು, ಲೈಸನ್ ಅಧಿಕಾರಿಗಳಾಗಿ ಪರಶುರಾಮ ಚಲವಾದಿ (ಮೊ:9110888518), ಶೀಘ್ರಲಿಪಿಗಾರರನ್ನಾಗಿ ರಾಜಕುಮಾರ ಚವ್ಹಾಣ (ಮೊ:9902103931), ವಾಹನ ಚಾಲಕ ಶಿವಪ್ಪ ಪೂಜಾರಿ (ಮೊ:9900559373) ಹಾಗೂ ಗನ್‌ಮ್ಯಾನ್ ಚನ್ನು ಗುರು ಶೆಟ್ಟಿ (ಮೊ:82174-26633) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.ಬಸವನಬಾಗೇವಾಡಿ ಮತ್ತು ಬಬಲೇಶ್ವರ ಮತಕ್ಷೇತ್ರದ ವೆಚ್ಚ ವೀಕ್ಷಕರಾಗಿ ಹರ್ಮಾ ಧರ್ಮೇಂದ್ರಕುಮಾರ (ಮೊ:9925460500) ಅವರನ್ನು ನೇಮಕ ಮಾಡಲಾಗಿದ್ದು, ಲೈಸನ್ ಅಧಿಕಾರಿಗಳಾಗಿ ಲಕ್ಷö್ಮಣ ಮೋರೆ (ಮೋ:9980098836), ಟೈಪಿಸ್ಟ್ ಪ್ರಭಾಕರ…
ವಿಜಯಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿನ ಪುತ್ಥಳಿಗೆ ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ನಗರ ಶಾಸಕರು ತಮ್ಮ ಅವಧಿಯಲ್ಲಿ ನಿರ್ಮಾಣ ಮಾಡಲಾದ ಅತ್ಯಾಕರ್ಷಕ ಅಂಬೇಡ್ಕರ್ ಪುತ್ಥಳಿಗೆ, ಜಯಂತಿ ಅಂಗವಾಗಿ ಮಾಲಾರ್ಪಣೆ ಸಲ್ಲಿಸಿ, ಜಗತ್ತಿಗೆ ಮಾದರಿಯಾದ ಸಂವಿಧಾನದ ಕೊಡುಗೆ ನೀಡಿರುವ ಅಂಬೇಡ್ಕರ ಅವರ ವಿಚಾರದಾರೆಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದಲ್ಲದೆ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ಶೋಷಿತ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕ ಅಂಬೇಡ್ಕರರು ಎಂದು ಹೇಳಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪರಶುರಾಮಸಿಂಗ್ ರಜಪುತ, ಸದಸ್ಯರಾದ ಮಡಿವಾಳ ಯಾಳವಾರ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ರಾಜಶೇಖರ ಕುರಿಯವರ ಸೇರಿದಂತೆ ದಲಿತ ಮುಖಂಡರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.ಪ್ರಚಾರ ಕಾರ್ಯಾಲಯದಲ್ಲಿ ಜಯಂತಿ ಆಚರಣೆನಗರ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ರಾ ಪಾಟೀಲ ಯತ್ನಾಳ ಅವರ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.ಬಿಜೆಪಿ…
ವಿಜಯಪುರ: ನಗರದ ವೀಣಾ ಕೋತವಾಲ ಅವರು ಬೆಂಗಳೂರಿನಲ್ಲಿ ಏರ್ಪಡಿಸಿದ ಜಗನ್ನಾಥ ದಾಸ ವಿರಚಿತ ಹರಿ ಕಥಾಮೃತಸಾರ ಕೃತಿಯನ್ನು ಸಂಪೂರ್ಣ ಬಾಯಿಪಾಠ ಒಪ್ಪಿಸಿದ್ದಕ್ಕಾಗಿ ಅವರಿಗೆ ದಾಸಪ್ರಿಯ ಪ್ರಶಸ್ತಿ ಲಭಿಸಿದೆ.ಬೆಂಗಳೂರಿನ ಶ್ರೀ ವ್ಯಾಸಮಧ್ವ ಸಂಶೋಧನ ಪ್ರತಿಷ್ಠಾನದವರು ಏರ್ಪಡಿಸಿದ ಹರಿಕಥಾಮೃತಸಾರ ಕಂಠಪಾಠ ಹಾಗೂ ಎಲ್ಲ ಸಂಧಿಗಳ ತಾರತಮ್ಯ ಹಾಗೂ ಪ್ರಶ್ನೋತ್ತರಗಳಿಗೆ ಉತ್ತರಿಸಿ ದಾಸಪ್ರಿಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಶ್ರೀ ಉತ್ತರಾಧಿಮಠದ ಮಠಾಧೀಶ ಸತ್ಯಾತ್ಮತೀರ್ಥರಿಂದ ಪ್ರಶಸ್ತಿ ಪ್ರಧಾನ ಹಾಗೂ ಬಹುಮಾನವನ್ನು ವೀಣಾ ಕೋತವಾಲ ಪಡೆದುಕೊಂಡಿದ್ದಾರೆ.
ಇಂಡಿ: ಎಲ್ಲ ಧರ್ಮಗಳ ನಡುವೆ ಸೌಹಾರ್ದತೆ ಬೆಳೆಸುವ ಆಶಯದಿಂದ ಮುಸ್ಲಿಂ ಬಾಂಧವರಿಗೆ ಇಪ್ತಾರ್ ಕೂಟ ಆಯೋಜಿಸಿದ್ದು ತುಂಬಾ ಸಂತಸ ತಂದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಹೇಳಿದರು. ಪಟ್ಟಣದ ಅಂಜುಮನ್ ಮೈದಾನದಲ್ಲಿ ಡಾ.ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಆಶ್ರಯದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ಶ್ರಾವಣ ಮಾಸ ಹಿಂದೂಗಳಿಗೆ ಹಾಗೂ ರಂಜಾನ್ ತಿಂಗಳು ಮುಸ್ಲಿಂ ಸಮಾಜದವರಿಗೆ ಪವಿತ್ರವಾದ ದಿನಗಳು. ಎಲ್ಲರಲ್ಲಿ ಹರಿಯುವ ರಕ್ತ ಒಂದೇ, ಎಲ್ಲರಲ್ಲಿನ ಸಹೋದರತ್ವ ಭಾವನೆ ಕಂಡು ಬದುಕಬೇಕು. ಧರ್ಮ ಮತ್ತು ಆಚರಣೆಗಳು ಭಿನ್ನವಾಗಿದ್ದರೂ ನಾವೆಲ್ಲರೂ ಮನುಷ್ಯರು ಎಂಬ ಸಂದೇಶ ಸಾರಲು ರೋಜಾದಲ್ಲಿ ಇರುವ ಮುಸ್ಲಿಮರನ್ನು ಫೌಂಡೇಶನ್ ವತಿಯಿಂದ ಸತ್ಕರಿಸಿದ್ದು ಶ್ಲಾಘನೀಯ ಎಂದು ಹೇಳಿದರು. ಧರ್ಮಗುರು ಮೌಲಾನಾ ಜಿಯಾವುಲ್ಲಾ ಹಕ್, ಎಸ್ ಎಂ ಪಾಟೀಲ ಗಣಿಯಾರ, ಫೌಂಡೇಶನ್ ಅಧ್ಯಕ್ಷ ಅಸ್ಪಾಕ್ ಕೋಕಣಿ, ಕಾರ್ಯದರ್ಶಿ ಭಾಷಾ ಬೋರಾಮಣಿ, ರಮ್ಜಾನ್ ವಾಲೀಕಾರ, ಮೈನುದ್ದೀನ್ ಶೇಕ್, ಕಾಲಿಂ ಪಟೇಲ್, ಶಬ್ಬೀರ್ ಮುಲ್ಲಾ, ಹುಸೇನ್ ಮಕಾನದಾರ, ಸಲಾವುದ್ದೀನ್ ಪಠಾಣ್,ಮಹಮದ್…
ಇಂಡಿ: ಹೋರಾಟ ಮಾಡದಿದ್ದರೆ ಪರವಾಗಿಲ್ಲ, ಆದರೆ ಮಾರಾಟವಾಗಬೇಡಿ ಎಂದು ಬಂಜಾರ ಸಮುದಾಯದ ಮುಖಂಡರಿಗೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹೇಶ ನಾಯಕ ಶುಕ್ರವಾರ ಹೇಳಿದರು. ಪಟ್ಟಣದ ಖಾಸಗಿ ಹೊಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಬಂಜಾರ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ. ಇಡೀ ಭಾರತದಲ್ಲಿ ಅತೀ ಕಡು ಬಡತನದಲ್ಲಿ ಬಂಜಾರ ಸಮುದಾಯವಿದೆ. ಇಂತಹ ಕಡುಬಡತದಿಂದಾಗಿ ಬೇರೆ ಧರ್ಮಕ್ಕೆ ಬದಲಾವಣೆ ಯಾಗುವುದು, ಮಕ್ಕಳ ಮಾರಾಟ ಮಾಡುವಂತ ಸ್ಥಿತಿ, ಪರಿಸ್ಥಿತಿ ಎರಡು ಕಾಣುತ್ತಿವೆ. ಈ ಎಲ್ಲಾ ಚಟುವಟಿಕೆ ಗಮನಿಸಿದ್ರೆ ಸಮುದಾಯದ ಪರಿಸ್ಥಿತಿ ಶೋಚನೀಯವಾಗಿದೆ. ಆದರೆ ಇತ್ತೀಚೆಗೆ ನಿರ್ದಿಷ್ಟವಾಗಿ ಒಳ ಮೀಸಲಾತಿ ಸಂಚನ್ನು ರೂಪಿಸಿ ಬಂಜಾರ ಸಮುದಾಯವನ್ನು ತುಳಿಯುವ ಲೆಕ್ಕದಲ್ಲಿ ಕೈ ಹಾಕಿದ್ದನ್ನು ತೀವ್ರವಾಗಿ ಖಂಡಿಸುತ್ತೆನೆ ಎಂದು ಹೇಳಿದರು.ಅದಲ್ಲದೇ ಬೇರೆ ಪಕ್ಷಗಳು ಸಹ ಬಂಜಾರ ಸಮುದಾಯ ಮುಖಂಡರ, ನಾಯಕರ ಹಾಗೂ ಸಮುದಾಯದ ಉಪಯೋಗ ಮತ್ತು ಲಾಭವನ್ನು ಪಡೆದುಕೊಂಡು, ಕೆಲವೊಂದು ವಿಚಾರ ಬಂದಾಗ ತುಳಿಯುವ ಕೈ ಬಿಡುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಮಾನದಲ್ಲಿ…
ದೇವರಹಿಪ್ಪರಗಿ: ತಾಲ್ಲೂಕು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯವಾದ ಜಮೀನನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶರಾದ ಎಚ್.ಪಿ.ಸಂದೇಶ ಭೇಟಿ ನೀಡಿ ಪರಿಶೀಲಿಸಿದರು.ಪಟ್ಟಣಕ್ಕೆ ಶುಕ್ರವಾರ ನ್ಯಾಯಾಧೀಶರಾದ ಎಚ್.ಪಿ.ಸಂದೇಶ ವಿಜಯಪುರ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ನಲವಡೆ ಅವರೊಂದಿಗೆ ಆಗಮಿಸಿ ಪಟ್ಟಣದಲ್ಲಿ ನ್ಯಾಯಾಲಯದ ನೂತನ ಕಟ್ಟಡಕ್ಕೆ ಲಭ್ಯವಿರುವ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರಂಭದಲ್ಲಿ ವಿಜಯಪುರ ರಸ್ತೆಯಲ್ಲಿರುವ ಸರ್ವೆ ನಂ ೧೮೧, ಹಾಗೂ ೨೦೩ ನಂತರ ಹೊಸನಗರದ ದನದ ಸಂತೆ ಜರುಗುವ ಸ್ಥಳ ಸರ್ವೆ ನಂ ೦೭, ಸಿಂದಗಿ ರಸ್ತೆಯ ಸರ್ವೆ ನಂ ೮೦೪ ಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊನೆಗೆ ಸರ್ವೆ ನಂ ೨೦೩ಕ್ಕೆ ಪುನಃ ಭೇಟಿ ನೀಡಿ ತಹಶೀಲ್ದಾರರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸರ್ವೆ ನಂ ೨೦೩ ಜಮೀನು ತಹಶೀಲ್ದಾರ ಕಚೇರಿ ನಿರ್ಮಾಣಕ್ಕೆ ಮೀಸಲಾಗಿಟ್ಟಿರುವ ಕುರಿತು ತಹಶೀಲ್ದಾರ ಕವಿತಾ. ಆರ್. ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಸಿಂದಗಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ನಾಗೇಶ ಮೊಗೆರಾ ಸ್ಥಳೀಯ ಪ್ರಮುಖರೊಂದಿಗೆ ಚರ್ಚಿಸಿ…
ಇಂಡಿ: ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಲಿಂ. ಶ್ರೀ ಶಂಕರಲಿAಗೇಶ್ವರ ಮಹಾರಥೋತ್ಸವ ಅಂಗವಾಗಿ ಜಾನುವಾರ ಜಾತ್ರೆ ಆಯೋಜಿಸಲಾಗಿತ್ತು.ಅಂದಾಜು ೧೫೦೦ ಕ್ಕೂ ಹೆಚ್ಚು ಜಾನುವಾರಗಳನ್ನು ರೈತರು ಇಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕೆ ತಂದಿದ್ದರು. ಈ ಪ್ರದರ್ಶನದಲ್ಲಿ ಉತ್ತಮ ರಾಸುಗಳಿಗೆ ಇಲ್ಲಿನ ಕಮರಿಮಠದ ವತಿಯಿಂದ ಉತ್ತಮ ಬಹುಮಾನ ನೀಡಲಾಯಿತು.ಈ ಜಾನುವಾರ ಜಾತ್ರೆಯಲ್ಲಿ ನೆರೆಯ ಬರಗುಡಿ ಗ್ರಾಮದ ಮಾದಣ್ಣ ಸೋಮನಿಂಗ ಕೆಳಗಿನಮನಿ ಎಂಬ ರೈತರ ೨ ಹಲ್ಲಿನ ಕಿಲಾರಿ ಹೋರಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಈ ಹೋರಿಗೆ ಬಂಥನಾಳದ ಪೂಜ್ಯ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳು ೫ ತೊಲಿ ಬೆಳ್ಳಿಯನ್ನು ಬಹುಮಾನ ರೂಪದಲ್ಲಿ ನೀಡಿ ಆಶೀರ್ವದಿಸಿದರು.ಇದೇ ಸಂದರ್ಭದಲ್ಲಿ ೮ ಜಾನುವಾರಗಳಿಗೆ ಪ್ರಥಮ, ೮ ದ್ವಿತೀಯ, ೮ ತೃತೀಯ ಬಹುಮಾನ ಕೂಡ ವಿತರಿಸಿ ಎತ್ತುಗಳ ಮಾಲಿಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಮರಿಮಠದ ಸೇವಾ ಸಮಿತಿಯ ಸದಸ್ಯರು, ಸ್ಥಳಿಯ ಹಾಗೂ ಸುತ್ತಲ ಗ್ರಾಮದ ಭಕ್ತರು ಉಪಸ್ಥಿತರಿದ್ದರು.
