ದೇವರಹಿಪ್ಪರಗಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ಮಹನೀಯರ ಜಯಂತಿಗಳಂದು ಎಲ್ಲ ಸಮುದಾಯದವರು ಭಾಗವಹಿಸುವಂತಾಗಬೇಕು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ಹೇಳಿದರು.
ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ಜರುಗಿದ ರಾಣಿ ಚನ್ನಮ್ಮಳ ೨೪೫ ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದು ಎಲ್ಲ ಸ್ವಾತಂತ್ರ್ಯ ಹೋರಾಟಗಾರರು, ಶರಣರು, ಮಹನೀಯರನ್ನು ಒಂದೊಂದು ಸಮುದಾಯಕ್ಕೆ ಸೀಮಿತಗೊಳಿಸುತ್ತಿರುವುದು ಖೇದಕರ. ಇಂಥ ರೂಢಿ ಬದಲಾಗಿ ಎಲ್ಲರೂ ಭಾಗವಹಿಸುವಂತಾಗಬೇಕು ಎಂದರು.
ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ಪಾಟೀಲ ಹಾಗೂ ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಗುರುರಾಜ್ ಆಕಳವಾಡಿ ಮಾತನಾಡಿ, ಮೈಸೂರಿನ ರಾಜವಂಶಸ್ಥರಿಗೆ ಸರ್ಕಾರದಿಂದ ದೊರೆಯುವ ಗೌರವ ಹಾಗೂ ಸಮ್ಮಾನ ಕಿತ್ತೂರು ಚನ್ನಮ್ಮ ವಂಶಸ್ಥರಿಗೂ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ ಪ್ರಕಾಶ ಸಿಂದಗಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಕಾಶೀನಾಥ ಬಜಂತ್ರಿ, ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ, ಬಾಬುಗೌಡ ಪಾಟೀಲ(ಜಿಡ್ಡಿಮನಿ), ಕುಮಾರಸ್ವಾಮಿ ಹಿರೇಮಠ, ಬಂಡೆಪ್ಪ ಬಿರಾದಾರ(ದಿಂಡವಾರ), ಸೋಮು ದೇವೂರ, ರಾಜು ಹಳ್ಳದಗೆಣ್ಣೂರ, ಸತೀಶ ಪಾಟೀಲ, ರಾಮನಗೌಡ ಪಾಟೀಲ, ಕಾಸು ಕಡ್ಲೇವಾಡ, ಬಸವರಾಜ ಇಂಡಿ, ಮಡು ದಿಂಡವಾರ ಹಾಗೂ ಸಮುದಾಯದ ಪ್ರಮುಖರು ಇದ್ದರು.
ಸ್ವಾತಂತ್ರ್ಯಯೋಧರನ್ನು ಸಮುದಾಯಕ್ಕೆ ಸೀಮಿತಗೊಳಿಸುವುದು ಸಲ್ಲದು
Related Posts
Add A Comment