ಚೆನ್ನಮ್ಮ ಜಯಂತಿಗೆ ಬಾರದ ಅಧಿಕಾರಿಗಳು | 38 ಇಲಾಖೆಯ ಅಧಿಕಾರಿಗಳು | ಸಾರ್ವಜನಿಕರ ಆಕ್ರೋಶ
ಇಂಡಿ: ಅ.೨೩ ರಂದು ತಾಲೂಕಾ ಆಡಳಿತದಿಂದ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆಯುವ ಕಿತ್ತೂರ ರಾಣಿ ಚೆನ್ನ,ಮ್ಮನವರ ಜಯಂತಿಗೆ ತಾಲೂಕಿನ ೩೮ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾದ ನಿಮಿತ್ಯ ಪಂಚಮಸಾಲಿ ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ತಾಲೂಕು ಆಡಳಿತ ಸೌಧದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.
ಸಮಾಜ ಕಲ್ಯಾಣ ಇಲಾಖೆಯಿಂದ ಬಿ.ಜೆ.ಇಂಡಿ ಮತ್ತು ಪೋಲಿಸ ಇಲಾಖೆಯಿಂದ ಎಂ.ಎಂ.ಡಪ್ಪಿನ ಮಾತ್ರ ಹಾಜರಿದ್ದರು. ಕಂದಾಯ ಉಪವಿಬಾಗಾಧಿಕಾರಿಗಳು ರಜೆಯ ಮೇಲಿರುವ ನಿಮಿತ್ಯ ತಹಸೀಲ್ದಾರರು ಬೆಳಗ್ಗೆ ೧೦ ಗಂಟೆಗೆ ಜಯಂತಿ ಆಚರಿಸಲು ಈ ಮೊದಲು ಪೂರ್ವಭಾವಿ ಸಭೆಯಲ್ಲಿ ತಿಳಿಸಲಾಗಿತ್ತು.
ಅದಲ್ಲದೆ ತಹಸೀಲ್ದಾರರು ಕರೆದ ಪೂರ್ವಭಾವಿ ಸಭೆಗೂ ಯಾವೊಬ್ಬ ಅಧಿಕಾರಿಗಳು ಬಂದಿರಲಿಲ್ಲ. ಮತ್ತು ತಾಲೂಕಿನಲ್ಲಿ ಬರಗಾಲ ಇರುವದರಿಂದ ಜಯಂತಿಯನ್ನು ಸರಳವಾಗಿ ಆಚರಿಸಲು ಚರ್ಚಿಸಲಾಗಿತ್ತು. ಮತ್ತು ತಹಸೀಲ್ದಾರರು ಎಲ್ಲ ಅಧಿಕಾರಿಗಳು ಬರುವಂತೆ ತಿಳಿಸುವದಾಗಿ ಸಮಜಾಯಿಸಿ ಉತ್ತರ ನೀಡಿದ್ದರು. ಹೀಗಾಗಿ ಸೋಮವಾರ ಬೆಳಗ್ಗೆ ೧೦ ಗಂಟೆಯಾದರೂ ತಹಸೀಲ್ದಾರ ಸೇರಿದಂತೆ ಯಾವೊಬ್ಬ ಅಧಿಕಾರಿ ಬರದೇ ಇರದ ಕಾರಣ ಇಲಾಖೆ ಸಿಬ್ಬಂದಿ ತಹಸೀಲ್ದಾರರು ಸಿಬ್ಬಂದಿಗೆ ಜಯಂತಿ ಆಚರಿಸಲು ಹೇಳಿದ್ದಾರೆ ಎಂದು ಸಿಬ್ಬಂದಿ ತಿಳಿಸಿ ಜಯಂತಿ ಆಚರಿಸಲು ಮುಂದಾದಾಗ ಸಮಾಜದ ಮುಖಂಡರು ಅಧಿಕಾರಿಗಳು ಬರುವವರೆಗೆ ಜಯಂತಿ ಆಚರಣೆ ಬೇಡ ಎಂದು ಪಟ್ಟು ಹಿಡಿದರು. ಆದಾಗ್ಯೂ ಅಲ್ಲಿನ ಸಿಬ್ಬಂದಿ ಫೋಟೋ ಪೂಜೆ ನೆರವೇರಿಸಿದರು. ಅದಕ್ಕೆ ವಿರೋಧ ವ್ಯಕ್ತ ಪಡಿಸಿದ ಸಾರ್ವಜನಿಕರು ಪ್ರತಿಭಟನೆಗೆ ಮುಂದಾದರು.
ಕಿತ್ತೂರ ಚೆನ್ನಮ್ಮ ಜಯಂತಿಗೆ ಇಲಾಖೆಯ ಯಾವೊಬ್ಬ ಅಧಿಕಾರಿ ಬರದೇ ಇರುವದರಿಂದ ಚೆನ್ನಮ್ಮಗೆ ಅವಮಾನ ಮಾಡಿದ್ದಾರೆ ಎಂದು ಅಧಿಕಾರಿಗಳು ಬರುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಪಂಚಮಸಾಲಿ ತಾಲೂಕು ಅಧ್ಯಕ್ಷ ವಿ.ಎಚ್.ಬಿರಾದಾರ ಮಾತನಾಡಿದರು.
ಅದಕ್ಕೆ ತಹಸೀಲ್ದಾರರು ಉತ್ತರ ನೀಡಿ, ಅನ್ಯ ಕೆಲಸದ ನಿಮಿತ್ಯ ಹೋಗಿರುವದರಿಂದ ತಾನು ಕ್ಷಮೆ ಕೇಳುವದಿಲ್ಲ ಎಂದು ಸಭೆಯಿಂದ ನಿರ್ಗಮಿಸಿದರು.
ತಾಲೂಕಾ ಕರವೇ ಅಧ್ಯಕ್ಷ ಬಾಳು ಮುಳಜಿ, ಸೋಮು ದೇವರ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಶರಣಗೌಡ ಬಂಡಿ, ಶರಣು ಜೋಗುರ, ಆನಂದ ದೇವರ, ಕಾರ್ಯದರ್ಶಿ ಶಿವಾನಂದ ಚಾಳಿಕಾರ, ದೇವರ, ಪ್ರಕಾಶ ಬಿರಾದಾರ, ಮಲ್ಲಿಕಾರ್ಜುನ ಹಾವಿನಾಳಮಠ, ಶ್ರೀಶೈಲ ಕೊರಳ್ಳಿ, ಅರವಿಂದ ಪಾಟೀಲ ಮತ್ತಿತರಿದ್ದರು.