Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಾನ್ಯ ಮುಖ್ಯಮಂತ್ರಿಗಳಿಗೆ ಡಾ.ಪಟ್ಟಣ ಬಹಿರಂಗ ಪತ್ರ

‘ಬ್ರೇಕ್ ಫ್ರೀ ಇಂಡಿಯಾ’ ಸ್ಕ್ಯಾನ್ ಮಾಡಿ ಆರೋಗ್ಯ ಸ್ಥಿತಿ ತಿಳಿಯಿರಿ

ಪತ್ರಕರ್ತರ 400 ಅರ್ಜಿಗಳಿಗೆ ವಾರ್ತಾ ಇಲಾಖೆ ಅಸ್ತು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜಾನಪದ ಕಲೆಗಳ ಉಳಿವಿಗೆ ಯುವಜನತೆ ಮುಂದಾಗಲಿ :ಕಂಬಾಗಿ
(ರಾಜ್ಯ ) ಜಿಲ್ಲೆ

ಜಾನಪದ ಕಲೆಗಳ ಉಳಿವಿಗೆ ಯುವಜನತೆ ಮುಂದಾಗಲಿ :ಕಂಬಾಗಿ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಬಾಗಲಕೋಟೆ (ಜಮಖಂಡಿ): ಗ್ರಾಮೀಣ ಬದುಕಿನ ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಜಾನಪದ ಕಲೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಸಂಪತ್ತಾಗಿದ್ದು, ಅವುಗಳ ಸಂರಕ್ಷಣೆ ಹಾಗೂ ಬೆಳವಣಿಗೆಯಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸಬೇಕು ಎಂದು ಸಮಾಜಮುಖಿ ಚಿಂತಕ ಕಂಬಾಗಿ ಸುರೇಶ್ ಕರೆ ನೀಡಿದರು.
ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ದುರ್ಗಾದೇವಿ ವಾರದ ಅಂಗವಾಗಿ ಆಯೋಜಿಸಲಾದ “ಗೀ ಗೀ ಪದ” ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆಯ ವೇಗದಲ್ಲಿ ಅನೇಕ ಜಾನಪದ ಕಲಾಪ್ರಕಾರಗಳು ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಗ್ರಾಮೀಣ ಬದುಕಿನ ಅನುಭವ, ಜನಜೀವನದ ಮೌಲ್ಯಗಳು ಹಾಗೂ ಜನಪದ ಜ್ಞಾನವನ್ನು ಒಳಗೊಂಡಿರುವ ಇಂತಹ ಕಲಾಪ್ರಕಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಾನಪದ ಗಾಯಕಿ ಪೂರ್ಣಿಮಾ ಹಂದಿಗುಂದ, “ಗೀ ಗೀ ಪದ” ಕೇವಲ ಮನರಂಜನೆಯ ಮಾಧ್ಯಮವಲ್ಲ. ಅದು ರೈತರ ಬದುಕು, ಸಾಮಾಜಿಕ ಕಳಕಳಿ, ಇತಿಹಾಸ ಹಾಗೂ ಜನರ ಭಾವನೆಗಳನ್ನು ಜೀವಂತವಾಗಿ ಕಟ್ಟಿಕೊಡುವ ಮೌಖಿಕ ಸಾಹಿತ್ಯದ ಅಪರೂಪದ ಪರಂಪರೆಯಾಗಿದೆ. ಇಂತಹ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಹಿರಿಯ ಗೀ ಗೀ ಪದ ಕಲಾವಿದರು ಹಾಗೂ ಜಾನಪದ ತಜ್ಞರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮವು ಜಾನಪದ ಗೀತೆಗಳು, ಗೀ ಗೀ ಪದಗಳ ಗಾಯನ ಹಾಗೂ ಗ್ರಾಮೀಣ ಸಾಂಸ್ಕೃತಿಕ ವೈಭವದ ಮೂಲಕ ನೆರೆದಿದ್ದ ಜನರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ರಾವಾಸಾಬ ದಳವಾಯಿ, ಶಿವಲಿಂಗಪ್ಪ ಕುಂಬಾರ, ಕಂಬಾಗಿ ಸುರೇಶ್, ಪೂರ್ಣಿಮಾ ಹಂದಿಗುಂದ, ರಾಜು ಪಾಟೀಲ, ಗಣಪತಿ ಕೋತ, ಬಸವರಾಜ ತಳವಾರ, ಬಾಳುಗೌಡ ಪಾಟೀಲ, ಬಾಳು ಗುರವ, ಬಸಪ್ಪ ಬಾಲಪ್ಪನವರ, ಗ್ಯಾಂಗಯ್ಯ ಮಠದ, ಅಪ್ಪಾಸಾಬ ದಳವಾಯಿ, ರಾಜು ಕವಟಗಿ, ರಾವಸಾಬ ಪಾಟೀಲ, ರಾವಸಾಬ ಕುಂಬಾರ, ಈರಪ್ಪ ಬೋರ್ಯಾಳ, ಶಿವಲಿಂಗಪ್ಪ ಬಿರಾದಾರ, ಗುರಬಾಳು ಕಿತ್ತೂರು ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಾನ್ಯ ಮುಖ್ಯಮಂತ್ರಿಗಳಿಗೆ ಡಾ.ಪಟ್ಟಣ ಬಹಿರಂಗ ಪತ್ರ

‘ಬ್ರೇಕ್ ಫ್ರೀ ಇಂಡಿಯಾ’ ಸ್ಕ್ಯಾನ್ ಮಾಡಿ ಆರೋಗ್ಯ ಸ್ಥಿತಿ ತಿಳಿಯಿರಿ

ಪತ್ರಕರ್ತರ 400 ಅರ್ಜಿಗಳಿಗೆ ವಾರ್ತಾ ಇಲಾಖೆ ಅಸ್ತು

ಉಚಿತವಾಗಿ ಆರೋಗ್ಯ ಸೇವೆ ಒದಗಿಸುವ ಗುರಿ :ಕಟಕದೋಂಡ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಾನ್ಯ ಮುಖ್ಯಮಂತ್ರಿಗಳಿಗೆ ಡಾ.ಪಟ್ಟಣ ಬಹಿರಂಗ ಪತ್ರ
    In (ರಾಜ್ಯ ) ಜಿಲ್ಲೆ
  • ‘ಬ್ರೇಕ್ ಫ್ರೀ ಇಂಡಿಯಾ’ ಸ್ಕ್ಯಾನ್ ಮಾಡಿ ಆರೋಗ್ಯ ಸ್ಥಿತಿ ತಿಳಿಯಿರಿ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತರ 400 ಅರ್ಜಿಗಳಿಗೆ ವಾರ್ತಾ ಇಲಾಖೆ ಅಸ್ತು
    In (ರಾಜ್ಯ ) ಜಿಲ್ಲೆ
  • ಉಚಿತವಾಗಿ ಆರೋಗ್ಯ ಸೇವೆ ಒದಗಿಸುವ ಗುರಿ :ಕಟಕದೋಂಡ
    In (ರಾಜ್ಯ ) ಜಿಲ್ಲೆ
  • ಜಾನಪದ ಕಲೆಗಳ ಉಳಿವಿಗೆ ಯುವಜನತೆ ಮುಂದಾಗಲಿ :ಕಂಬಾಗಿ
    In (ರಾಜ್ಯ ) ಜಿಲ್ಲೆ
  • ದ್ವಿಭಾಷಾ ನೀತಿ ಕನ್ನಡ ಭಾಷೆ ಉಳಿವಿಗೆ ಮಾರಕ :ಕುಲಕರ್ಣಿ
    In (ರಾಜ್ಯ ) ಜಿಲ್ಲೆ
  • ಚೆಕ್ ಬೌನ್ಸ್ ಪ್ರಕರಣ: ₹೨.೧೦ ಲಕ್ಷ ದಂಡ-ಜೈಲು ಶಿಕ್ಷೆ
    In (ರಾಜ್ಯ ) ಜಿಲ್ಲೆ
  • ನಗರ ಸೌಂದರ್ಯೀಕರಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ-ಪಾಲಿಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
  • ಎಸ್ಐಆರ್: ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ
    In (ರಾಜ್ಯ ) ಜಿಲ್ಲೆ
  • ಎರಡು ದಶಕಗಳಿಂದ ಕಗ್ಗತ್ತಲಲ್ಲಿ ಕಡಕೋಳ ಸರ್ಕಾರಿ ಪ್ರೌಢ ಶಾಲೆ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.