ವಿಜಯಪುರ: ನಗರದ ವೆಂಕಟೇಶ ನಗರ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಜರುಗಿತು.
ಶ್ರೀ ಮಹಾಲಕ್ಷ್ಮಿ ಕ್ಷೇಮಾಭಿವೃದ್ದಿ ಸಂಘ ವಿಜಯಪುರ ಮತ್ತು ವೆಂಕಟೇಶ ನಗರ ಬಡಾವಣೆಯ ಹಾಗೂ ಸುತ್ತಮುತ್ತಲಿನ ಸದ್ಭಕ್ತರಿಂದ ಹಮ್ಮಿಕೊಂಡ ಜಾತ್ರೆಯಲ್ಲಿ ಬೆಳಿಗ್ಗೆ ಪೂಜೆ ನಂತರ ಲಕ್ಷ್ಮೀದೇವಿಯ ಪಲ್ಲಕ್ಕಿ ಬಡಾಣೆಯ ಓಣಿ, ಕುಂಭ ಮೇಳದಲ್ಲಿ ಹೆಚ್ಚಿನ ಸುಮಂಗಲೆಯರು ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕರಡಿ ಮಜಲು, ಶ್ರೀ ವೀರಭದ್ರ ಪುರವಂತರು ಹಾಗೂ ಗೊಂಬೆ ಕುಣಿತ ಇತರೆ ಕಲಾ ತಂಡಗಳೊಂದಿಗೆ ಪಲ್ಲಕ್ಕಿ ಶ್ರೀ ಮುರಗಮ್ಮ ದೇವಸ್ಥಾನ, ಶ್ರೀ ಲಕ್ಕಮ್ಮ ದೇವಸ್ಥಾನದ ಮೂಲಕ ಮರಳಿ ಅದೇ ಮಾರ್ಗದಿಂದ ಲಕ್ಷ್ಮೀ ದೇವಸ್ಥಾನದವರೆಗೆ ಸಂಚರಿಸಿತು.
ಜಾತ್ರಾ ಮಹೋತ್ಸವಕ್ಕೆ ಮಹಾನಗರ ಪಾಲಿಕೆ ಸದಸ್ಯ ಕುಮಾರ ಗಡಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದಶರಥ ನಾವಿ, ಸಂಗು ಕನ್ನಲ್, ಅಶೋಕ ಶಿವಶರಣ, ವಿರೂಪಾಕ್ಷ ಕತ್ನಳ್ಳಿ, ಶ್ರೀಮಂತ ಕವಲಗಿ, ಶೋಭಾ ಕೊಣ್ಣೂರ, ಭಾರತಿ ನಾವಿ, ಶೈಲಾ ವಾಲಿಕಾರ, ಬಾಗುಬಾಯಿ ರಾಠೋಡ, ಸುಮಿತ್ರಾ ಶಿವಶರಣರ, ಶಾರದಾ ಶಿವಶರಣರ, ಬಾಬು ಬಾಗೇವಾಡಿ, ನಾಗಮ್ಮ ವಾಲಿಕಾರ, ಬಸಮ್ಮ ಶಿವಶರಣರ, ರೇಣುಕಾ ವಣರೊಟ್ಟಿ ವಿಜಯಲಕ್ಷ್ಮಿ ಬಾವೂರ, ಶ್ರೀ ಮಹಾಲಕ್ಷ್ಮಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಬಸವರಾಜ ಶಿವಶರಣರ, ಉಪಾಧ್ಯಕ್ಷ ದಾವು ಕೇಸು ರಾಠೋಡ, ಕಾರ್ಯದರ್ಶಿ ಚಂದ್ರಶೇಖರ ಮೈಲಿಕರ, ಖಜಾಂಚಿ ಹರಿದಾಸ ವಾಲಿಕಾರ ಸೇರಿದಂತೆ ಸದಸ್ಯರಾದ ಸಂತೋಷ ಮೈಲಿಕರ, ರಂಗಪ್ಪ ಕಾಮರಡ್ಡಿ, ರುದ್ರಪ್ಪ ಪಟ್ಟಣ, ಗಿರಿಮಲ್ಲಪ್ಪ ಕವಟಗಿ, ಮಾಮಲ್ಲಪ್ಪ ಶಾಬಾದಿ, ಶ್ರೀನಿವಾಸ ಬೆಳಮಕರ ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.
Related Posts
Add A Comment