ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪರಿಷ್ಕರಿಸಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ)ಗಳು ಮನೆ-ಮನೆ ಭೇಟಿ, ಪರಿಶೀಲನೆ ಪ್ರಕ್ರಿಯೆ ಆ.೧೭ ರವರೆಗೆ ನಡೆಯಲಿದೆ. ಆ.೧೭ರಂದು ಮತಗಟ್ಟೆಗಳ ಪುನಾರಚನೆ ಹಾಗೂ ಸರಿಹೊಂದಿಸುವ ಕಾರ್ಯ ನಡೆಯಲಿದೆ. ಕರಡು ಮತದಾರರ ಪಟ್ಟಿಯನ್ನು ಆ.೨೪ ರಂದು ಪ್ರಕಟಿಸುವಂತೆ ಆಯೋಗ ಸೂಚಿಸಿದೆ. ಆಗಸ್ಟ್ ೨೮ ರಿಂದ ಸೆಪ್ಟೆಂಬರ್ ೨೩ರ ಅವಧಿಯವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಆಗಸ್ಟ್ ೨೪ ರಿಂದ ಅಕ್ಟೊಬರ್ ೨೨ರವರೆಗೆ ನೋಟಿಸ್ ಹಂತ ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಲು ಸೂಚಿಸಿದೆ. ಅಕ್ಟೋಬರ್ ೨೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದೆಂದು ಆಯೋಗ ಸೂಚಿಸಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
