Author: editor.udayarashmi@gmail.com

ವಿಜಯಪುರ: ‌ಜಿಲ್ಲೆಯ ಮದಬಾವಿಯಲ್ಲಿ ಸೋಮವಾರ ಭಕ್ತ ಕನಕದಾಸರ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು.ಇದಕ್ಕೂ ಮುನ್ನ ಕನಕದಾಸರ ಮೂರ್ತಿಯನ್ನು ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ಮಹಿಳೆಯರಿಂದ ಕುಂಬಮೇಳ ಜರುಗಿತು. ವಿವಿಧ ವಾದ್ಯ ಮತ್ತು ಗೊಂಬೆ ಕುಣಿತ, ಕೋಲಾಟ, ಡೊಳ್ಳಿನ ವಾದ್ಯದೊಂದಿಗೆ ಸಾದು ಮುತ್ಯಾನ ಕಟ್ಟೆಯಿಂದ ಯಲ್ಲಪ್ಪ ಮುತ್ಯಾನ ಗುಡಿಯವರೆಗೆ ಭಕ್ತ ಕನಕದಾಸರ ಮೂರ್ತಿಯಮೆರವಣಿಗೆ ಜರುಗಿತು. ನಂತರ ಮೂರ್ತಿಯ ಕುಂಬಾಭಿಷೇಕ ಮತ್ತು ಪುಷ್ಪಾರ್ಚನೆ ಕೂಡ ಜರುಗಿತು.ಈ ಸಂದರ್ಭದಲ್ಲಿ ಗ್ರಾಮದಹಾಲುಮತ ಸಮಾಜ ಮುಖಂಡ ನಿಂಗಪ್ಪ ಪೂಜಾರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ರೀತಿ ರಾಮನಗೌಡ ಬಗಲಿ, ಔದಪ್ಪ ಪೂಜಾರಿ, ರಮೇಶ ಸಿಂದಗಿ, ಭೂತಾಳಿ ಹಿರೇಕುರುಬರ ಅವರನ್ನು ಕೂಡ ಸನ್ಮಾನಿಸಲಾಯಿತು.ಕಾರ್ಯಕ್ರಮದ ಸಾನಿದ್ಯವನ್ನು ಸಿದ್ದರಾದ ನಂದನೂರಿ ಮಹಾಸ್ವಾಮಿಗಳು ಮತ್ತು ಅತಿಥಿಗಳಾಗಿ ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಉಪಸ್ಥಿತರಿದ್ದರು.

Read More

ದೇವರಹಿಪ್ಪರಗಿ: ಹಿಟ್ಟಿನಹಳ್ಳಿ ಎಲ್.ಟಿ ಜಗದಂಬಾ ಪ್ರೌಢಶಾಲೆಯ ವಿದ್ಯಾರ್ಥಿನೀಯರು ವಿಭಾಗಮಟ್ಟದ ಪುಟ್‌ಬಾಲ್ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ತಾಲ್ಲೂಕಿನ ಹಿಟ್ಟಿನಹಳ್ಳಿ ಎಲ್.ಟಿಯ ಜಗದಂಬಾ ಪ್ರೌಢಶಾಲೆಯ ವಿದ್ಯಾರ್ಥಿನೀಯರು ವಿಜಯಪುರ ಸೈನಿಕಶಾಲೆಯಲ್ಲಿ ಜರುಗಿದ ವಿಭಾಗೀಯ ಮಟ್ಟದ ಪುಟ್‌ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ತಂಡದ ಗೆಲುವಿನಲ್ಲಿ ಆಟಗಾರ್ತಿಯರಾದ ಕವಿತಾ ರಾಠೋಡ, ಕೀರ್ತಿ ರಾಠೋಡ, ರಮ್ಯಾ ಜಾಧವ, ಕಾವೇರಿ ರಾಠೋಡ, ಶ್ರೇಯಾ ಪವಾರ, ರೇಖಾ ರಾಠೋಡ, ಅಂಜಲಿ ನಾಯಕ ರವರು ಪ್ರಮುಖ ಪಾತ್ರವಹಿಸಿದ್ದು, ಇದೇ ದಿ: ೧೮ ರಂದು ಬೆಂಗಳೂರಿನಲ್ಲಿ ಜರುಗುವ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ತಂಡದ ಆಟಗಾರ್ತಿಯರ ಗೆಲುವಿಗೆ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ, ಮುಖ್ಯಗುರು ಪಿ.ಎಚ್.ಜಂಗಮಶೆಟ್ಟಿ, ಸಂಸ್ಥೆಯ ಕಾಲೇಜಿನ ಪ್ರಾಚಾರ್ಯ ಬಿ.ಎಫ್.ತಳವಾರ, ದೈಹಿಕ ಶಿಕ್ಷಕ ಸಂತೋಷ ಅಂಗಡಿ, ಅರವಿಂದ ಅಂಗಡಿ, ಎಸ್.ಕೆ.ದೊಡಮನಿ, ಪ್ರಕಾಶ ಅಂಗಡಿ ಸೇರಿದಂತೆ ಸಿಬ್ಬಂದಿ ಸನ್ಮಾನಿಸಿ, ಶುಭಹಾರೈಸಿದ್ದಾರೆ.

Read More

ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ನಿವಾಸಿ ಗಾಂಜಾ ಪ್ರಕರಣದ ಆರೋಪಿಯೊಬ್ಬನಿಗೆ ೫ವರ್ಷ ಜೈಲು ಶಿಕ್ಷೆ ವಿಧಿಸಿ ವಿಜಯಪುರ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಆದೇಶಿಸಿದ್ದಾರೆ.೨೦೧೮ ರಲ್ಲಿ ಆರೋಪಿ ಅರ್ಜುನ ಹರಣಶಿಕಾರಿ ನಿಡಗುಂದಿಯಿಂದ ತಾಲೂಕಿನ ಮಾದಿನಾಳ ಗ್ರಾಮ ಮಾರ್ಗವಾಗಿ ಬಿದರಕುಂದಿ ಗ್ರಾಮಕ್ಕೆ ಮೋಟಾರ ಸೈಕಲ್ ಮೇಲೆ ಗಾಂಜಾವನ್ನು ಚೀಲದಲ್ಲಿ ಹಾಕಿ ಕಟ್ಟಿಗೊಂಡು ಹೋಗುವಾಗ ಮುದ್ದೇಬಿಹಾಳ ಪೊಲೀಸರಿಗೆ ಅತಿಥಿಯಾಗಿದ್ದ. ಆರೋಪಿಯನ್ನ ಬಂಧಿಸಿ ಎಫ್‌ಆಯ್‌ಆರ್ ದಾಖಲಿಸಿದ್ದರು. ಸದರ ಪ್ರಕರಣ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿಗೆ ೫೦ಸಾವಿರ ದಂಡ ಮತ್ತು ೫ವರ್ಷ ಜೈಲು ಶಿಕ್ಷೆ ನೀಡಿ ಆದೇಶಿಸಿದೆ.ಸದರ ಪ್ರಕರಣವನ್ನು ಭೇದಿಸಿ ದಾಳಿ ಕೈಗೊಂಡು ತನಿಖೆ ನಿರ್ವಹಿಸಿದ ಮುದ್ದೇಬಿಹಾಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧಿಕ್ಷರು ಶ್ಲಾಘಿಸಿದ್ದಾರೆ.

Read More

ಸಲೀಮಪಟೇಲ್ ಗೆಳೆಯರ ಬಳಗದಿಂದ ಶಾಸಕ ಅಶೋಕ ಮನಗೂಳಿ ಅವರಿಗೆ ಸನ್ಮಾನ ಸಿಂದಗಿ: ಗೆದ್ದಾಗ ಹಿಗ್ಗುವುದು, ಸೋತಾಗ ಕುಗ್ಗೊದು ಹೇಡಿತನದ ಲಕ್ಷಣ, ಸೋಲೇ ಗೆಲುವಿನ ಸೋಪಾನ. ಸೋಲು ಗೆಲುವು ಎರಡನ್ನೂ ಸಮಾನಾಗಿ ಸ್ವೀಕಾರ ಮಾಡುವವನೇ ನಿಜವಾದ ಜನನಾಯಕ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸಲೀಮಪಟೇಲ್ ಮರ್ತೂರ್ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಉಪಚುನಾವಣೆಯಲ್ಲಿ ಸೋಲಿನ ಅನುಭವ ಪಡೆದ ನನಗೆ ಸಾಕಷ್ಟು ಮಾನಸಿಕ ಒತ್ತಡದಿಂದ ರಾಜಕೀಯ ಜೀವನವೇ ಸಾಕೆನ್ನುವಷ್ಟು ನೋವಾಗಿತ್ತು. ಆ ಸಮಯದಲ್ಲಿ ನನಗೆ ತಂದೆ ದಿ.ಎಂ.ಸಿ ಮನಗೂಳಿ ಅವರು ಹೇಳಿದ ಮಾತುಗಳು ನೆನಪಿಗೆ ಬಂದು ಬಲ ತುಂಬಿದವು. ಅವರು ತೋರಿದ ಮಾರ್ಗ ಬಿಡಬಾರದು ಎಂದು ಹಗಲು ರಾತ್ರಿಯೆನ್ನದೆ ಹಳ್ಳಿಗಳಲ್ಲಿ ಸಂಚರಿಸಿ ೨೭೦ ಭೂತಮಟ್ಟದಲ್ಲಿ ಸಂಘಟನೆ ಮಾಡಿದ ಪ್ರಯತ್ನಕ್ಕೆ ಇಂದು ಈ ಸನ್ಮಾನ ದೊರೆತಿದೆ. ಈ ಗೆಲುವು ನನ್ನದಲ್ಲ, ಸಮಸ್ತ ಕ್ಷೇತ್ರದ ಜನರ ಗೆಲುವು ಎಂದು ಹೇಳಿದರು.ನಗರದಲ್ಲಿ ವಿದ್ಯುತ್ ಕಂಬ ಹಾಗೂ ವಿದ್ಯುತ್ ಜ್ಯೋತಿ ಅಳವಡಿಕೆಗೆ…

Read More

ಆಲಮಟ್ಟಿ: ಒಂದೆಡೆ ಸ್ಥಗಿತಗೊಂಡಿರುವ ಜಲಾಶಯಗಳ ಒಳಹರಿವು, ಮತ್ತೊಂದೆಡೆ ಕಾಲುವೆಯ ನೀರಿಗಾಗಿ ಹೆಚ್ಚುತ್ತಿರುವ ರೈತರ ಬೇಡಿಕೆ, ಇವುಗಳ ಮಧ್ಯೆ ಕಾಲುವೆಗೆ ನೀರು ಹರಿಸುವ ನಿರ್ಣಯದತ್ತ ಕೃಷ್ಙಾ ಅಚ್ಚುಕಟ್ಟು ಪ್ರದೇಶದ ರೈತರ ಚಿತ್ತ ನೆಟ್ಟಿದೆ.ಇದಕ್ಕೆಲ್ಲಾ ಉತ್ತರ ಎಂಬಂತೆ ಕೃಷ್ಙಾ ಅಚ್ಚುಕಟ್ಟು ಪ್ರದೇಶದ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನ.೭ ರಂದು ಇಲ್ಲಿಯ ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕರ ಸಭಾಂಗಣದಲ್ಲಿ ಮಧ್ಯಾಹ್ನ ೩ ಕ್ಕೆ ನಡೆಯಲಿದೆ ಎಂದು ಐಸಿಸಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.ಐಸಿಸಿ ಅಧ್ಯಕ್ಷರೂ ಆಗಿರುವ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಲಿದ್ದು, ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ೫ ಜಿಲ್ಲೆಗಳ ಶಾಸಕರು, ಸಚಿವರು, ಸಂಸದರು, ಜಿಲ್ಲಾಧಿಕಾರಿಗಳು,ಕೃಷಿ ಅಧಿಕಾರಿಗಳು ಸದಸ್ಯರಿದ್ದಾರೆ. ಕಾಲುವೆಗೆ ನೀರು ಹರಿಸುವ ಅವಧಿ ಡಿ.೪ ರವರೆಗೂ ಇದ್ದು, ಇನ್ನೂ ತಿಂಗಳ ಮೊದಲೇ ಸಭೆ ಕರೆದು, ನೀರು ಕೊಡುವ ಬಗ್ಗೆ ಸ್ಪಷ್ಟ ಉತ್ತರ ಸಭೆ ನೀಡಲಿದೆ. ನಿತ್ಯವೂ ನೀರಿಗಾಗಿ ಪ್ರತಿಭಟನೆ;ಆಲಮಟ್ಟಿ, ನಾರಾಯಣಪುರ ಜಲಾಶಯಗಳ ಒಳಹರಿವು ಸ್ಥಗಿತಗೊಂಡು ಹಲವು ದಿನ ಕಂಡಿವೆ. ಆಲಮಟ್ಟಿ ಎಡದಂಡೆ…

Read More

ದೇವರಹಿಪ್ಪರಗಿ: ಪಟ್ಟಣದ ಆಯೆಶಾ ಮೈಬೂಬ್ ನಧಾಫ್ ಕರ್ನಾಟಕ ರಾಜ್ಯ ನಧಾಫ್, ಪಿಂಜಾರ ಸಂಘ ನೀಡುವ ೨೦೨೩ರ ಪ್ರತಿಭಾವಂತ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾಗಿ ಸನ್ಮಾನಿತರಾದರು.ಕರ್ನಾಟಕ ರಾಜ್ಯ ನಧಾಫ್, ಪಿಂಜಾರ ಸಂಘ ಶಿವಮೊಗ್ಗಾ ಹಾಗೂ ಕೊಪ್ಪಳ ಜಿಲ್ಲಾ ಘಟಕದ ಸಹಯೋಗದಲ್ಲಿ ಶನಿವಾರ ಜರುಗಿದ ೩೧ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮತ್ತು ಕರ್ನಾಟಕ ೫೦ ರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ೨೦೨೩ನೇ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೯೬ ಫಲಿತಾಂಶ ಪಡೆದ ಸಮುದಾಯದ ವಿದ್ಯಾರ್ಥಿನಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಚ್.ಖಲೀಲ್‌ಪಾಷಾ ಸೇರಿದಂತೆ ಪದಾಧಿಕಾರಿಗಳು ಇದ್ದರು.

Read More

ನಿಯಮಬಾಹಿರ ವೇತನ ಪಾವತಿ | ಅಪರ ಆಯುಕ್ತೆ ಜಯಶ್ರೀ ಆದೇಶ ಮುದ್ದೇಬಿಹಾಳ: ನಿಯಮ ಬಾಹಿರವಾಗಿ ವೇತನ ಪಾವತಿಸಿದ ಆರೋಪದಡಿ ಇಲ್ಲಿನ ಕ್ಷೆತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ೬ ಸಿಬ್ಬಂದಿಯನ್ನು ಅಮಾನತ್ತು ಮಾಡಿ ಶಿಕ್ಷಣ ಇಲಾಖೆಯ ಧಾರವಾಡದ ಅಪರ್ ಆಯುಕ್ತೆ ಜಯಶ್ರೀ ಶಿಂತ್ರಿ ಆದೇಶಿಸಿದ್ದಾರೆ.ಹಿಂದೆ ಇಲ್ಲಿನ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಪತ್ರಾಂಕಿತ ವ್ಯವಸ್ಥಾಪಕ ಎ.ಎಸ್.ಹಾಲ್ಯಾಳ, ಪ್ರ.ದ.ಸ ಎಸ್.ಎಸ್.ಕಲ್ಬುರ್ಗಿ, ಪ್ರ.ದ.ಸ ಎಸ್.ಸಿ.ಮುರಗಾನವರ, ಸಧ್ಯ ಸೇವೆ ಸಲ್ಲಿಸುತ್ತಿರುವ ಅಧೀಕ್ಷಕಿ ಎನ್.ಬಿ.ರೂಡಗಿ, ದ್ವಿ.ದ.ಸ ಎಸ್.ಸಿ.ಹಿರೇಮಠ, ಮತ್ತು ಪ್ರ.ದ.ಸ ಸಿದ್ದನಗೌಡ ಪಾಟೀಲ ಅಮಾನತ್ತಾದ ಸಿಬ್ಬಂದಿಗಳು.ತಾಲೂಕು ವ್ಯಾಪ್ತಿಯಲ್ಲಿ ನಿಯಮಬಾಹಿರ ಶಿಕ್ಷಕರ ಅಮಾನತ್ತು ಹಾಗೂ ಕೆಲಸಕ್ಕೆ ಗೈರು ಉಳಿದ ಶಿಕ್ಷಕರಿಗೆ ವೇತನ ಪಾವತಿ ಮತ್ತು ನಿವೃತ್ತಿ ಹೊಂದಿದ ಶಿಕ್ಷಕರಿಗೂ ಸಹ ವೇತನ ಪಾವತಿ ಆದ ಬಗ್ಗೆ ತಪಾಸಣೆ ನಡೆಸಿದ ಬಳಿಕ ಕಚೇರಿ ಸಿಬ್ಬಂದಿ ಸರ್ಕಾರಿ ನೌಕರರ ನಡುವಳಿಕೆಗೆ ಸಲ್ಲದ ರೀತಿಯಲ್ಲಿ ನಡೆದುಕೊಂಡು ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು, ೨೦೨೧ ರ ನಿಯಮಗಳನ್ನು ಉಲ್ಲಂಘಿಸಿರುವದು ಮೇಲ್ನೋಟಕ್ಕೆ ಕಂಡು ಬಂದಿರುವದರಿಂದ ಕರ್ನಾಟಕ ನಾಗರೀಕ ಸೇವಾ…

Read More

ವಿಜಯಪುರ: ಪ್ರಸಕ್ತ ಸಾಲಿನ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ಹಿರಿಯ ಪತ್ರಕರ್ತ ರಫೀ ಬಂಡಾರಿ ಇವರಿಗೆ ಸ್ಥಳೀಯ ಗಗನ ಮಹಲ ಉದ್ಯಾನವನದಲ್ಲಿ ಅವರ ಅಭಿಮಾನಿ ಹಾಗೂ ವಾಯು ವಿಹಾರ ಬಳಗದ ವಿವಿಧ ಸಮಾಜದ ಮುಖಂಡರ ವತಿಯಿಂದ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ಪತ್ರಕರ್ತ ರಪೀ ಬಂಡಾರಿ ಮಾತನಾಡಿ, ತಮ್ಮ ಈ ಪ್ರಶಸ್ತಿಯನ್ನು ಭಾಷೆ ಮತ್ತು ಕೋಮು ಸೌಹಾರ್ಧತೆಗೆ ಸಮರ್ಪಿಸುತ್ತೇನೆಂದು ಹೇಳುತ್ತಾ, ಹಿಂದೂ-ಮುಸ್ಲಿಂ ಸಮಾಜ ಬಾಂಧವರು ಸೇರಿ ಸನ್ಮಾನಿಸಿದ್ದು ನನಗೆ ಪ್ರಶಸ್ತಿ ನೀಡಿರುವುದಕ್ಕಿಂತಲೂ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಸರಕಾರ ತನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಭಾವ್ಯಕ್ಯತೆಗೆ ಸಂದ ಗೌರವ ಎಂದು ಭಾವಿಸಿರುವುದಾಗಿ ಹೇಳಿದರು.ಅತಿಥಿಗಳಾಗಿ ನೇತ್ರ ತಜ್ಞ ಡಾ. ಪ್ರಭುಗೌಡ ಪಾಟೀಲ ಮಾತನಾಡಿ, ರಫೀ ಬಂಡಾರಿ ಇವರ ಆದರ್ಶ, ಜೀವನದ ಮೌಲ್ಯಗಳು ನಮಗೆಲ್ಲರಿಗೂ ಮಾದರಿ ಮತ್ತು ಅನುಕರಣೀಯ. ರಫೀ ಬಂಡಾರಿ ಅವರು ಕೇವಲ ಒಂದು ಮತ ಪಂಗಡಕ್ಕೆ ಸೀಮಿತಗೊಳ್ಳದೇ ಇಡೀ ಸಮಾಜವೇ ಪ್ರೀತಿಸುವ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.ಉದ್ದಿಮೆದಾರರಾದ ಮದನ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು.…

Read More

ವಿಜಯಪುರ: ಜಿಲ್ಲೆಯಲ್ಲಿ ಬರುವ ಮಲಘಾಣ ಪಶ್ಚಿಮ ಕಾಲುವೆ, ಮನಗೂಳಿ ಶಾಖಾ ಕಾಲುವೆ ಮತ್ತು ಬಬಲೇಶ್ವರ ಶಾಖಾ ಕಾಲುವೆ-೧ &೨ರ ಜಾಲದ ಅಡಿಯಲ್ಲಿ ಬರುವ ಕೆರೆಗಳನ್ನು ಪ್ರತಿಶತ ೫೦ರಷ್ಟು ಭರ್ತಿಗೊಳಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯತ್ ಕೆರೆಗಳಿಗೆ ಕಾಲುವೆ ಜಾಲಗಳ ಕೊನೆಯ ಭಾಗದವರೆಗೆ ನೀರನ್ನು ಹರಿಸಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಕಾಲುವೆಗಳ ಎಡ-ಬಲ ೧೦೦ ಅಡಿ ವ್ಯಾಪ್ತಿಯಲ್ಲಿ ದಿನಾಂಕ : ೦೪-೧೧-೨೦೨೩ ರಿಂದ ೧೫-೧೧-೨೦೨೩ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಕಾಲುವೆ ವ್ಯಾಪ್ತಿಯ ದಡದ ೧೦೦ ಅಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರು ಗುಂಪು-ಗುಂಪಾಗಿ ಓಡಾಡುವುದನ್ನು ನಿಷೇಧಿಸಿದೆ. ಕಾಲುವೆಗಳಿಂದ ಅಕ್ರಮ ಪಂಪಸೆಟ್-ಸೈಫನ್-ಜಲಚರದಿಂದ ಸೈಫನ್ ಮೂಲಕ ನೀರನ್ನು ಉಪಯೋಗಿಸಕೂಡದು. ಸದರಿ ಕಾಲುವೆಗಳ ವ್ಯಾಪ್ತಿಯಲ್ಲಿ ಕಾಲುವೆಗಳಿಂದ ಅಕ್ರಮ ಪಂಪಸೆಟ್ ಮೂಲಕ ನೀರನ್ನು ಬಳಸುತ್ತಿದ್ದಲ್ಲಿ ಅಂತಹ ಪಂಪಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಇಲಾಖೆಯವರು ಕಡಿತಗೊಳಿಸಲಿದ್ದಾರೆ. ಕಾಲುವೆ ದಡದ ಸುತ್ತಮುತ್ತಲಿನ ೧೦೦ ಅಡಿ ಪ್ರದೇಶದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು…

Read More

ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಶಾಸನ ಪಡೆಯುತ್ತಿರುವವರು ನವೆಂಬರ್ ತಿಂಗಳಿನಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.ಇಲಾಖೆಯಿಂದ ಈಗಾಗಲೇ ಮಾಶಾಸನ ಪಡೆಯುತ್ತಿರುವ, ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ-ಕಲಾವಿದರಿಗೆ ಹಾಗೂ ಮೃತಪಟ್ಟ ಕಲಾವಿದರ ಪತ್ನಿಯರಿಗೆ ಮಾಶಾಸನ ನೀಡಲಾಗುತ್ತಿದ್ದು, ಆಧಾರ ಪ್ರತಿ,ಪಿಂಚಣಿ ಪುಸ್ತಕ ಪ್ರತಿ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಐಡೆಂಟಿಟಿ ಅಳತೆ ಭಾವಚಿತ್ರದೊಂದಿಗೆ ಜೀವಂತ ಪ್ರಮಾಣ ಪತ್ರವನ್ನು ನಗರದ ಸ್ಟೇಶನ್ ರಸ್ತೆಯ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿಗೆ ಖುದ್ದಾಗಿ ಸಲ್ಲಿಸುವಂತೆಯೂ,ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ೦೮೩೫೨-೨೫೧೨೬೧ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More