ವಿಜಯಪುರ: ಪ್ರಸಕ್ತ ಸಾಲಿನ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ಹಿರಿಯ ಪತ್ರಕರ್ತ ರಫೀ ಬಂಡಾರಿ ಇವರಿಗೆ ಸ್ಥಳೀಯ ಗಗನ ಮಹಲ ಉದ್ಯಾನವನದಲ್ಲಿ ಅವರ ಅಭಿಮಾನಿ ಹಾಗೂ ವಾಯು ವಿಹಾರ ಬಳಗದ ವಿವಿಧ ಸಮಾಜದ ಮುಖಂಡರ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಪತ್ರಕರ್ತ ರಪೀ ಬಂಡಾರಿ ಮಾತನಾಡಿ, ತಮ್ಮ ಈ ಪ್ರಶಸ್ತಿಯನ್ನು ಭಾಷೆ ಮತ್ತು ಕೋಮು ಸೌಹಾರ್ಧತೆಗೆ ಸಮರ್ಪಿಸುತ್ತೇನೆಂದು ಹೇಳುತ್ತಾ, ಹಿಂದೂ-ಮುಸ್ಲಿಂ ಸಮಾಜ ಬಾಂಧವರು ಸೇರಿ ಸನ್ಮಾನಿಸಿದ್ದು ನನಗೆ ಪ್ರಶಸ್ತಿ ನೀಡಿರುವುದಕ್ಕಿಂತಲೂ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಸರಕಾರ ತನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಭಾವ್ಯಕ್ಯತೆಗೆ ಸಂದ ಗೌರವ ಎಂದು ಭಾವಿಸಿರುವುದಾಗಿ ಹೇಳಿದರು.
ಅತಿಥಿಗಳಾಗಿ ನೇತ್ರ ತಜ್ಞ ಡಾ. ಪ್ರಭುಗೌಡ ಪಾಟೀಲ ಮಾತನಾಡಿ, ರಫೀ ಬಂಡಾರಿ ಇವರ ಆದರ್ಶ, ಜೀವನದ ಮೌಲ್ಯಗಳು ನಮಗೆಲ್ಲರಿಗೂ ಮಾದರಿ ಮತ್ತು ಅನುಕರಣೀಯ. ರಫೀ ಬಂಡಾರಿ ಅವರು ಕೇವಲ ಒಂದು ಮತ ಪಂಗಡಕ್ಕೆ ಸೀಮಿತಗೊಳ್ಳದೇ ಇಡೀ ಸಮಾಜವೇ ಪ್ರೀತಿಸುವ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಉದ್ದಿಮೆದಾರರಾದ ಮದನ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ನಜೀಬ ಬಕ್ಷಿ, ಶಿಕ್ಷಕರಾದ ಇ.ರಾ. ಸಾರವಾಡ, ಆರ್.ಎ. ಇನಾಮದಾರ, ನ್ಯಾಯವಾದಿ ಬೀಳಗಿ, ನಥಮುಲ ರುಣವಾಲ, ನಂದಲಾಲ, ಸೋಮು ಭೂಪಾಲೆ, ಸಂಜಯ ಜಾಧವ, ಬಸನಗೌಡ ಪಾಟೀಲ, ಕರೆಕಲ್, ರಂಜಾನ ಮುಲ್ಲಾ, ಸಂಗಮೇಶ ಬದಾಮಿ ಸೇರಿದಂತೆ ಇನ್ನಿತರರು ರಫೀ ಬಂಡಾರಿ ಅವರನ್ನು ಸನ್ಮಾನಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಲೀಂ ಲೋಣಿ, ರಂಜಾನ ಮುಲ್ಲಾ, ರಫೀಕ ಜರತಾರಕರ, ಗೌಂಡಿ, ಫೀರಜಾದೆ, ಮುಶ್ರಿಫ, ಮಹಾನಗರ ಪಾಲಿಕೆ ಮಾಜಿ ಸದಸ್ಯ ದರಬಾರ ಇನ್ನಿತರರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಸಂಗಮೇಶ ಬದಾಮಿ ಮಾತನಾಡಿದರು. ಆರ್.ಎ. ಇನಾಮದಾರ ಪರಿಚಯಿಸಿದರು. ನ್ಯಾಯವಾದಿ ಎಮ್.ಎನ್. ಬೀಳಗಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

