ದೇವರಹಿಪ್ಪರಗಿ: ಹಿಟ್ಟಿನಹಳ್ಳಿ ಎಲ್.ಟಿ ಜಗದಂಬಾ ಪ್ರೌಢಶಾಲೆಯ ವಿದ್ಯಾರ್ಥಿನೀಯರು ವಿಭಾಗಮಟ್ಟದ ಪುಟ್‌ಬಾಲ್ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಹಿಟ್ಟಿನಹಳ್ಳಿ ಎಲ್.ಟಿಯ ಜಗದಂಬಾ ಪ್ರೌಢಶಾಲೆಯ ವಿದ್ಯಾರ್ಥಿನೀಯರು ವಿಜಯಪುರ ಸೈನಿಕಶಾಲೆಯಲ್ಲಿ ಜರುಗಿದ ವಿಭಾಗೀಯ ಮಟ್ಟದ ಪುಟ್‌ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ತಂಡದ ಗೆಲುವಿನಲ್ಲಿ ಆಟಗಾರ್ತಿಯರಾದ ಕವಿತಾ ರಾಠೋಡ, ಕೀರ್ತಿ ರಾಠೋಡ, ರಮ್ಯಾ ಜಾಧವ, ಕಾವೇರಿ ರಾಠೋಡ, ಶ್ರೇಯಾ ಪವಾರ, ರೇಖಾ ರಾಠೋಡ, ಅಂಜಲಿ ನಾಯಕ ರವರು ಪ್ರಮುಖ ಪಾತ್ರವಹಿಸಿದ್ದು, ಇದೇ ದಿ: ೧೮ ರಂದು ಬೆಂಗಳೂರಿನಲ್ಲಿ ಜರುಗುವ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ತಂಡದ ಆಟಗಾರ್ತಿಯರ ಗೆಲುವಿಗೆ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ, ಮುಖ್ಯಗುರು ಪಿ.ಎಚ್.ಜಂಗಮಶೆಟ್ಟಿ, ಸಂಸ್ಥೆಯ ಕಾಲೇಜಿನ ಪ್ರಾಚಾರ್ಯ ಬಿ.ಎಫ್.ತಳವಾರ, ದೈಹಿಕ ಶಿಕ್ಷಕ ಸಂತೋಷ ಅಂಗಡಿ, ಅರವಿಂದ ಅಂಗಡಿ, ಎಸ್.ಕೆ.ದೊಡಮನಿ, ಪ್ರಕಾಶ ಅಂಗಡಿ ಸೇರಿದಂತೆ ಸಿಬ್ಬಂದಿ ಸನ್ಮಾನಿಸಿ, ಶುಭಹಾರೈಸಿದ್ದಾರೆ.
Related Posts
Add A Comment