ಸಲೀಮಪಟೇಲ್ ಗೆಳೆಯರ ಬಳಗದಿಂದ ಶಾಸಕ ಅಶೋಕ ಮನಗೂಳಿ ಅವರಿಗೆ ಸನ್ಮಾನ
ಸಿಂದಗಿ: ಗೆದ್ದಾಗ ಹಿಗ್ಗುವುದು, ಸೋತಾಗ ಕುಗ್ಗೊದು ಹೇಡಿತನದ ಲಕ್ಷಣ, ಸೋಲೇ ಗೆಲುವಿನ ಸೋಪಾನ. ಸೋಲು ಗೆಲುವು ಎರಡನ್ನೂ ಸಮಾನಾಗಿ ಸ್ವೀಕಾರ ಮಾಡುವವನೇ ನಿಜವಾದ ಜನನಾಯಕ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸಲೀಮಪಟೇಲ್ ಮರ್ತೂರ್ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಉಪಚುನಾವಣೆಯಲ್ಲಿ ಸೋಲಿನ ಅನುಭವ ಪಡೆದ ನನಗೆ ಸಾಕಷ್ಟು ಮಾನಸಿಕ ಒತ್ತಡದಿಂದ ರಾಜಕೀಯ ಜೀವನವೇ ಸಾಕೆನ್ನುವಷ್ಟು ನೋವಾಗಿತ್ತು. ಆ ಸಮಯದಲ್ಲಿ ನನಗೆ ತಂದೆ ದಿ.ಎಂ.ಸಿ ಮನಗೂಳಿ ಅವರು ಹೇಳಿದ ಮಾತುಗಳು ನೆನಪಿಗೆ ಬಂದು ಬಲ ತುಂಬಿದವು. ಅವರು ತೋರಿದ ಮಾರ್ಗ ಬಿಡಬಾರದು ಎಂದು ಹಗಲು ರಾತ್ರಿಯೆನ್ನದೆ ಹಳ್ಳಿಗಳಲ್ಲಿ ಸಂಚರಿಸಿ ೨೭೦ ಭೂತಮಟ್ಟದಲ್ಲಿ ಸಂಘಟನೆ ಮಾಡಿದ ಪ್ರಯತ್ನಕ್ಕೆ ಇಂದು ಈ ಸನ್ಮಾನ ದೊರೆತಿದೆ. ಈ ಗೆಲುವು ನನ್ನದಲ್ಲ, ಸಮಸ್ತ ಕ್ಷೇತ್ರದ ಜನರ ಗೆಲುವು ಎಂದು ಹೇಳಿದರು.
ನಗರದಲ್ಲಿ ವಿದ್ಯುತ್ ಕಂಬ ಹಾಗೂ ವಿದ್ಯುತ್ ಜ್ಯೋತಿ ಅಳವಡಿಕೆಗೆ ರೂ. ೫ ಕೋಟಿ ಮಂಜೂರಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ವಾಯ್.ಸಿ ಮಯೂರ, ಕಾಂಗ್ರೆಸ್ ಮುಖಂಡ ಸಾದಿಕ್ ಸುಂಬಡ, ಸಿದ್ದಲಿಂಗ ಚೌಧರಿ, ವರದಿಗಾರ ಯುಸುಫ್ ನೇವಾರ ಮಾತನಾಡಿದರು.
ಈ ವೇಳೆ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ್, ಹೆಸ್ಕಾಮ್ ಅಧಿಕಾರಿ ಚಂದ್ರಕಾಂತ ನಾಯಕ್, ಡಾ.ಚನ್ನವೀರ ಮನಗೂಳಿ, ಸೈಫನ್ ನಾಟೀಕಾರ, ಹಾಸಿಂಪೀರ ಆಳಂದ, ಮಹ್ಮದ್ ಪಟೇಲ್ ಬಿರಾದಾರ, ಯಂಟಮಾನ, ಅಲ್ಲಿಸಾಬ ಮರ್ತೂರ, ಬಾಬುಸಾಬ ಮರ್ತೂರ, ಅಬ್ಬಾಸಲಿ ಬಾಗವಾನ ಅಬೂಬಕರ್ ಡೋಣಿ, ಬಸ್ಸು ಕಾಂಬಳೆ, ಸಲೀಮ್ ಕಣ್ಣಿ, ಹಾಗೂ ಸಲೀಮ್ ಪಟೇಲ್ ಸ್ನೇಹ ಬಳಗ ಸೇರಿದಂತೆ ಅನೇಕರು ಇದ್ದರು.