ಆಲಮಟ್ಟಿ: ಒಂದೆಡೆ ಸ್ಥಗಿತಗೊಂಡಿರುವ ಜಲಾಶಯಗಳ ಒಳಹರಿವು, ಮತ್ತೊಂದೆಡೆ ಕಾಲುವೆಯ ನೀರಿಗಾಗಿ ಹೆಚ್ಚುತ್ತಿರುವ ರೈತರ ಬೇಡಿಕೆ, ಇವುಗಳ ಮಧ್ಯೆ ಕಾಲುವೆಗೆ ನೀರು ಹರಿಸುವ ನಿರ್ಣಯದತ್ತ ಕೃಷ್ಙಾ ಅಚ್ಚುಕಟ್ಟು ಪ್ರದೇಶದ ರೈತರ ಚಿತ್ತ ನೆಟ್ಟಿದೆ.
ಇದಕ್ಕೆಲ್ಲಾ ಉತ್ತರ ಎಂಬಂತೆ ಕೃಷ್ಙಾ ಅಚ್ಚುಕಟ್ಟು ಪ್ರದೇಶದ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನ.೭ ರಂದು ಇಲ್ಲಿಯ ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕರ ಸಭಾಂಗಣದಲ್ಲಿ ಮಧ್ಯಾಹ್ನ ೩ ಕ್ಕೆ ನಡೆಯಲಿದೆ ಎಂದು ಐಸಿಸಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಐಸಿಸಿ ಅಧ್ಯಕ್ಷರೂ ಆಗಿರುವ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಲಿದ್ದು,
ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ೫ ಜಿಲ್ಲೆಗಳ ಶಾಸಕರು, ಸಚಿವರು, ಸಂಸದರು, ಜಿಲ್ಲಾಧಿಕಾರಿಗಳು,ಕೃಷಿ ಅಧಿಕಾರಿಗಳು ಸದಸ್ಯರಿದ್ದಾರೆ. ಕಾಲುವೆಗೆ ನೀರು ಹರಿಸುವ ಅವಧಿ ಡಿ.೪ ರವರೆಗೂ ಇದ್ದು, ಇನ್ನೂ ತಿಂಗಳ ಮೊದಲೇ ಸಭೆ ಕರೆದು, ನೀರು ಕೊಡುವ ಬಗ್ಗೆ ಸ್ಪಷ್ಟ ಉತ್ತರ ಸಭೆ ನೀಡಲಿದೆ.
ನಿತ್ಯವೂ ನೀರಿಗಾಗಿ ಪ್ರತಿಭಟನೆ;
ಆಲಮಟ್ಟಿ, ನಾರಾಯಣಪುರ ಜಲಾಶಯಗಳ ಒಳಹರಿವು ಸ್ಥಗಿತಗೊಂಡು ಹಲವು ದಿನ ಕಂಡಿವೆ. ಆಲಮಟ್ಟಿ ಎಡದಂಡೆ , ಚಿಮ್ಮಲಗಿ ಪೂರ್ವ ಮತ್ತು ಪಶ್ಚಿಮ ಕಾಲುವೆಯಿಂದ ನೀರು ಕೊನೆ ಹಂತಕ್ಕೆ ತಲುಪುತ್ತಿಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ. ಕಾಲುವೆ ನೀರು ನಿರ್ವಹಣೆಯಲ್ಲಿ ಈ ಬಾರಿ ಕೆಬಿಜೆಎನ್ ಎಲ್ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಕಾಲುವೆಯ ಮೊದಲ ಭಾಗದ ರೈತರು ಬೇಕಾಬಿಟ್ಟಿ ನೀರು ಬಳಸುತ್ತಿದ್ದು, ಕಾಲುವೆಯ ಸರಾಗ ಹರಿಯುವಿಕೆಗೆ ತಡೆ ಒಡ್ಡುತ್ತಿದ್ದಾರೆ.
ಇನ್ನೂ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ.
ಹಿಂಗಾರು ಹಂಗಾಮಿಗೆ ಕೃಷಿಗಾಗಿ ನೀರು ಪೂರೈಕೆಯಿಲ್ಲ ಈಗಾಗಲೇ ಐಸಿಸಿ ಅಧ್ಯಕ್ಷರು ಸ್ಪಷ್ಟ ಪಡಿಸಿದ್ದಾರೆ.
Related Posts
Add A Comment