ದೇವರಹಿಪ್ಪರಗಿ: ಪಟ್ಟಣದ ಆಯೆಶಾ ಮೈಬೂಬ್ ನಧಾಫ್ ಕರ್ನಾಟಕ ರಾಜ್ಯ ನಧಾಫ್, ಪಿಂಜಾರ ಸಂಘ ನೀಡುವ ೨೦೨೩ರ ಪ್ರತಿಭಾವಂತ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾಗಿ ಸನ್ಮಾನಿತರಾದರು.
ಕರ್ನಾಟಕ ರಾಜ್ಯ ನಧಾಫ್, ಪಿಂಜಾರ ಸಂಘ ಶಿವಮೊಗ್ಗಾ ಹಾಗೂ ಕೊಪ್ಪಳ ಜಿಲ್ಲಾ ಘಟಕದ ಸಹಯೋಗದಲ್ಲಿ ಶನಿವಾರ ಜರುಗಿದ ೩೧ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮತ್ತು ಕರ್ನಾಟಕ ೫೦ ರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ೨೦೨೩ನೇ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೯೬ ಫಲಿತಾಂಶ ಪಡೆದ ಸಮುದಾಯದ ವಿದ್ಯಾರ್ಥಿನಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಚ್.ಖಲೀಲ್‌ಪಾಷಾ ಸೇರಿದಂತೆ ಪದಾಧಿಕಾರಿಗಳು ಇದ್ದರು.
Related Posts
Add A Comment