ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ನಿವಾಸಿ ಗಾಂಜಾ ಪ್ರಕರಣದ ಆರೋಪಿಯೊಬ್ಬನಿಗೆ ೫ವರ್ಷ ಜೈಲು ಶಿಕ್ಷೆ ವಿಧಿಸಿ ವಿಜಯಪುರ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಆದೇಶಿಸಿದ್ದಾರೆ.
೨೦೧೮ ರಲ್ಲಿ ಆರೋಪಿ ಅರ್ಜುನ ಹರಣಶಿಕಾರಿ ನಿಡಗುಂದಿಯಿಂದ ತಾಲೂಕಿನ ಮಾದಿನಾಳ ಗ್ರಾಮ ಮಾರ್ಗವಾಗಿ ಬಿದರಕುಂದಿ ಗ್ರಾಮಕ್ಕೆ ಮೋಟಾರ ಸೈಕಲ್ ಮೇಲೆ ಗಾಂಜಾವನ್ನು ಚೀಲದಲ್ಲಿ ಹಾಕಿ ಕಟ್ಟಿಗೊಂಡು ಹೋಗುವಾಗ ಮುದ್ದೇಬಿಹಾಳ ಪೊಲೀಸರಿಗೆ ಅತಿಥಿಯಾಗಿದ್ದ. ಆರೋಪಿಯನ್ನ ಬಂಧಿಸಿ ಎಫ್‌ಆಯ್‌ಆರ್ ದಾಖಲಿಸಿದ್ದರು. ಸದರ ಪ್ರಕರಣ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿಗೆ ೫೦ಸಾವಿರ ದಂಡ ಮತ್ತು ೫ವರ್ಷ ಜೈಲು ಶಿಕ್ಷೆ ನೀಡಿ ಆದೇಶಿಸಿದೆ.
ಸದರ ಪ್ರಕರಣವನ್ನು ಭೇದಿಸಿ ದಾಳಿ ಕೈಗೊಂಡು ತನಿಖೆ ನಿರ್ವಹಿಸಿದ ಮುದ್ದೇಬಿಹಾಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧಿಕ್ಷರು ಶ್ಲಾಘಿಸಿದ್ದಾರೆ.
Related Posts
Add A Comment