ವಿಜಯಪುರ: ಜಿಲ್ಲೆಯ ಮದಬಾವಿಯಲ್ಲಿ ಸೋಮವಾರ ಭಕ್ತ ಕನಕದಾಸರ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು.
ಇದಕ್ಕೂ ಮುನ್ನ ಕನಕದಾಸರ ಮೂರ್ತಿಯನ್ನು ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ಮಹಿಳೆಯರಿಂದ ಕುಂಬಮೇಳ ಜರುಗಿತು. ವಿವಿಧ ವಾದ್ಯ ಮತ್ತು ಗೊಂಬೆ ಕುಣಿತ, ಕೋಲಾಟ, ಡೊಳ್ಳಿನ ವಾದ್ಯದೊಂದಿಗೆ ಸಾದು ಮುತ್ಯಾನ ಕಟ್ಟೆಯಿಂದ ಯಲ್ಲಪ್ಪ ಮುತ್ಯಾನ ಗುಡಿಯವರೆಗೆ ಭಕ್ತ ಕನಕದಾಸರ ಮೂರ್ತಿಯ
ಮೆರವಣಿಗೆ ಜರುಗಿತು. ನಂತರ ಮೂರ್ತಿಯ ಕುಂಬಾಭಿಷೇಕ ಮತ್ತು ಪುಷ್ಪಾರ್ಚನೆ ಕೂಡ ಜರುಗಿತು.
ಈ ಸಂದರ್ಭದಲ್ಲಿ ಗ್ರಾಮದ
ಹಾಲುಮತ ಸಮಾಜ ಮುಖಂಡ ನಿಂಗಪ್ಪ ಪೂಜಾರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ರೀತಿ ರಾಮನಗೌಡ ಬಗಲಿ, ಔದಪ್ಪ ಪೂಜಾರಿ, ರಮೇಶ ಸಿಂದಗಿ, ಭೂತಾಳಿ ಹಿರೇಕುರುಬರ ಅವರನ್ನು ಕೂಡ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಾನಿದ್ಯವನ್ನು ಸಿದ್ದರಾದ ನಂದನೂರಿ ಮಹಾಸ್ವಾಮಿಗಳು ಮತ್ತು ಅತಿಥಿಗಳಾಗಿ ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

