Author: editor.udayarashmi@gmail.com

ಮುದ್ದೇಬಿಹಾಳ : ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಬೇಸರಗೊಂಡ ರೈತನೋರ್ವ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ತಾಲೂಕಿನ ಢವಳಗಿ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಆಲಕೊಪ್ಪರ ಗ್ರಾಮದ ರಾಮನಗೌಡ ಬಿರಾದಾರ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿ. ಮೂಲತಃ ರೈತಾಪಿ ಕುಂಟುಂಬದಿಂದ ಬಂದಿದ್ದ ಈತನ ಉದ್ಯೋಗ ಒಕ್ಕಲುತನ. ತನ್ನ ಜಮೀನುಗಳನ್ನೇ ನಂಬಿ ಸಾಗುವಳಿ ಮಾಡಿಕೊಂಡು ಬದುಕು ನಡೆಸುತ್ತಿರುವ ಈತನಿಗೆ ಕಳೆದ ಕೆಲವು ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ತನ್ನ ಕುಂಟುಂಬವನ್ನು ಸಲಹುವುದು ಹೇಗೆ ಎಂಬ ಚಿಂತೆಯಲ್ಲಿ ಆತ್ಮಹತ್ಯೆಯೇ ಪರಿಹಾರವೆಂದು ಇಲ್ಲಿಗೆ ಬಂದಿರುವದಾಗಿ ಸ್ವತಃ ತಾನೇ ಹೇಳಿಕೊಂಡಿದ್ದಾನೆ.ತಮಗೆ ವಿದ್ಯತ್ ಪೂರೈಸುವ ಢವಳಗಿಯ ಕೆಇಬಿಯಲ್ಲಿನ ವಿದ್ಯುತ್ ಲೈನ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದು ಕೆಇಬಿ ಸಿಬ್ಬಂದಿ ಈತನನ್ನು ಅನಾಹುತದಿಂದ ತಪ್ಪಿಸಿ ೧೧೨ ಮೂಲಕ ಪೊಲೀಸರಿಗೆ ತಿಳಿಸಿದ್ದು ೧೧೨ ಸಿಬ್ಬಂದಿ ಮುದ್ದೇಬಿಹಾಳ ಠಾಣೆಗೆ ಒಪ್ಪಿಸಿದ್ದಾರೆ.

Read More

ಮುದ್ದೇಬಿಹಾಳ: ತಾಲೂಕಿನ ಮಲಗದಿನ್ನಿ ಕೆರೆ ತುಂಬುವಂತೆ ಮತ್ತು ಕೆರೆಗೆ ಕಾಲುವೆ ಮೂಲಕ ಬರುವ ನೀರನ್ನು ತಡೆಹಿಡಿದಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಯುವಜನಸೇನೆಯ ಪದಾಧಿಕಾರಿಗಳು ಕೆಬಿಜೆಎನ್‌ಎಲ್ ನ ಎಎಲ್‌ಬಿಸಿಯ ಇಇ ರಾಮನಗೌಡ ಹಳ್ಳೂರ ಮತ್ತು ತಹಶೀಲ್ದಾರಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಸಂಘಟನೆಯ ತಾಲೂಕು ಸಂಚಾಲಕ ಮುತ್ತು ಟಕ್ಕಳಕಿ ಮಾತನಾಡಿ, ಕೆರೆ ತುಂಬುವ ಯೋಜನೆಯಡಿ ಮಲಗಲದಿನ್ನಿ ಕೆರೆಗೆ ವರ್ಷದಲ್ಲಿ ನಾಲ್ಕು ತಿಂಗಳು ನೀರು ಹರಿಸಬೇಕೆನ್ನುವ ನಿಯಮ ಇದೆ. ಆದರೆ ಈ ನಿಯಮ ಪಾಲನೆಯಾಗುತ್ತಿಲ್ಲ. ಕಾಲುವೆ ಮೂಲಕ ನೀರು ತುಂಬಿದರೂ ಕೆರೆಗ ಸೇರುತ್ತಿಲ್ಲ. ಕವಡಿಮಟ್ಟಿ ಮಾರ್ಗವಾಗಿ ಹಾಯ್ದು ಹೋಗಿರುವ ಮುಖ್ಯ ಕಾಲುವೆ ಮುಂದೆ ಮಲಗಲದಿನ್ನಿ ಕೆರೆಗೆ ಸೇರುತ್ತದೆ. ಕಾಲುವೆಯ ನೀರನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಡೆದಿದ್ದು ಮುಂದೆ ನೀರು ಬಾರದೇ ಇತ್ತ ಕೆರೆಯೂ ಸೇರದೇ ಪಟ್ಟಭದ್ರರಿಗೆ ಮಾತ್ರ ಉಪಯೋಗವಾಗುತ್ತಿದೆ. ಹಲವು ರೈತರು ಸೇರಿ ನೀರನ್ನು ತಡೆಹಿಡಿಯದಂತೆ ಮನವಿ ಮಾಡಲು ಹೋದಾಗ ಹಲ್ಲೆಗೆ ಮುಂದಾಗುತ್ತಾರೆ. ನೀರನ್ನು ತಡೆಹಿಡಿಯುವುದು ಸಂಪೂರ್ಣ ಕಾನೂನು ಬಾಹಿರವಾಗಿದ್ದು ತಪ್ಪಿತಸ್ಥರ ಮೇಲೆ…

Read More

ಹಿಂಗಾರು ಹಂಗಾಮಿಗೆ ಮಾರ್ಚ್ ಅಂತ್ಯದವರೆಗೂ ನೀರು ಹರಿಸಲು ರೈತರ ಒತ್ತಾಯ ಆಲಮಟ್ಟಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಐಸಿಸಿ ಸಭೆ ನಡೆಯುವ ಆಲಮಟ್ಟಿಯ ಕೆಬಿಜೆಎನ್ ಎಲ್ ಎಂಡಿ ಕಚೇರಿ ಎದುರು ಬೆಳಿಗ್ಗೆಯಿಂದಲೇ ಬೇರೆ ಬೇರೆ ಭಾಗದಿಂದ ಬಂದಿದ್ದ ನೂರಾರು ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸಬೇಕು, ಹಿಂಗಾರು ಹಂಗಾಮಿಗೆ ಮಾರ್ಚ್ ಅಂತ್ಯದವರೆಗೂ ನೀರು ಹರಿಸಬೇಕು ಎಂಬುದೇ ಬಹುತೇಕ ರೈತರ ಬೇಡಿಕೆಯಾಗಿತ್ತು.ಹಿಂಗಾರಿಗೆ ನೀರಿಲ್ಲ ಎಂದು ತಿರ‍್ಮಾನವಾದೊಡನೆ ಶಾಂತವಾಗಿದ್ದ ರೈತರು ಕೆಬಿಜೆಎನ್ ಎಲ್ ಎಂಡಿ ಕಚೇರಿಯ ಸಭಾಂಗಣದ ಗೇಟ್ ಹೊರಕ್ಕೆ ಯಾದಗೀರದಿಂದ ಬಂದಿದ್ದ ಕರ‍್ನಾಟಕ ಪ್ರಾಂತ ರೈತ ಸಂಘದ ಕಾರ‍್ಯಕರ‍್ತರು ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಹೊರಕ್ಕೆ ಬಿಡಲಿಲ್ಲ.ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಅವರ ವಾಹನ ಹೊರಬಿಟ್ಟರು. ಆದರೆ ನಂತರ ಕೆಬಿಜೆಎನ್ ಎಲ್ ಅಧಿಕಾರಿಗಳನ್ನು ಸಭೆ ನಡೆಯುವ ಹೊರ ಗೇಟ್ ನಲ್ಲಿ ರೈತರು ಹೊರ ಹೋಗದಂತೆ ತಡೆಗಟ್ಟಿದರು.ಜೇವರ್ಗಿ ರೈತರ ಪ್ರತಿಭಟನೆ:ಕಲಬುರಗಿ ಜಿಲ್ಲೆಯ ಜೇವರ್ಗಿ, ಕಾಚಾಪುರ,…

Read More

ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತಿರ್ಮಾನ :ಸಚಿವ ಆರ್.ಬಿ.ತಿಮ್ಮಾಪುರ ಆಲಮಟ್ಟಿ: ನೀರಿನ ಕೊರತೆಯಿಂದಾಗಿ ೨೦೨೩-೨೪ನೇ ಸಾಲಿನ ಹಿಂಗಾರು ಹಂಗಾಮಿಗೆ ಕಾಲುವೆ ಜಾಲಕ್ಕೆ ನೀರು ಪೂರೈಸಲು ಸಾಧ್ಯವಾಗುವುದಿಲ್ಲ. ಅಚ್ಚುಕಟ್ಟು ಪ್ರದೇಶದ ರೈತರು ಸಹಕರಿಸಬೇಕು ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ೨೦೨೩-೨೪ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಹಿಂಗಾರು ಹಂಗಾಮಿಗೆ ೨೦೨೩-೨೪ನೇ ಸಾಲಿನಲ್ಲಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆ.೧೪ರಂದು ಕ್ಷೀಣವಾಗಿದ್ದು, ಅ.೧೫ರಂದು ಸಂಪೂರ್ಣ ಸ್ಥಗಿತವಾಗಿದೆ. ಡಿ.೫ರಂದು ಅಲಮಟ್ಟಿ ಜಲಾಶಯದ ಮಟ್ಟ ಅಂದಾಜು ೫೧೩.೦೦ ಮೀಟರ್ ಎತ್ತರದಲ್ಲಿ ೫೦ ಟಿಎಂಸಿ ನೀರು ಇರಬಹುದಾಗಿದೆ. ಇದರಲ್ಲಿ ಜೀವಜಲ ೩೨ ಟಿಎಂಸಿ ಹಾಗೂ ನಾರಾಯಣಪುರ ಜಲಾಶಯದ ಜೀವಜಲ ೧೨ ಟಿಎಂಸಿ ಒಟ್ಟು ೪೪ ಟಿಎಂಸಿ ಜೀವಜಲ ಲಭ್ಯವಾಗಬಹುದು ಎಂದರು.ಡಿ.೫ರಿಂದ ೨೦೨೪ರ ಜು.೩೦ವರೆಗೆ ಕುಡಿವ ನೀರು, ಕೆರೆಗಳನ್ನು ತುಂಬುವುದು,…

Read More

ಜಯ್ ನುಡಿ (ವ್ಯಕ್ತಿತ್ವ ವಿಕಸನ ಮಾಲೆ) ಜಯಶ್ರೀ ಜೆ ಅಬ್ಬಿಗೇರಿಆಂಗ್ಲ ಭಾಷಾ ಉಪನ್ಯಾಸಕರುಸ ಪ ಪೂ ಕಾಲೇಜು, ಹಿರೇಬಾಗೇವಾಡಿ, ಜಿ: ಬೆಳಗಾವಿ, ೯೪೪೯೨೩೪೧೪೨ ಉತ್ಸಾಹ ಮಲಗಿಸಿಕೊಡುವದಿಲ್ಲ. ಆಲಸ್ಯ ಏಳಿಸಿಕೊಡುವದಿಲ್ಲ. ಎನ್ನುವ ಗಾದೆ ಮಾತು ನಿತ್ಯ ಜೀವನದಲ್ಲಿ ಅದೆಷ್ಟು ಸತ್ಯ ಎನಿಸುತ್ತದೆ. ಉತ್ಸಾಹ ನಮ್ಮ ಜೀವನಕ್ಕೆ ಪೆಟ್ರೊಲ್ ಇದ್ದಂತೆ ನಂದಾ ದೀಪದಂತೆ ಉರಿಯುವ ದೀಪಕ್ಕೆ ಆಲಸ್ಯತನವು ಬಿರುಗಾಳಿಯಿದ್ದಂತೆ. ಪ್ರತಿಯೊಂದಕ್ಕೂ ಗೊಣಗುಡುವ ನಮ್ಮ ಚಟಕ್ಕೆ ಮೂಲ ಕಾರಣ ಯಾವುದರಲ್ಲಿಯೂ ಉತ್ಸಾಹ ಇಲ್ಲದಿರುವದೇ ಆಗಿದೆ.ನಿರುತ್ಸಾಹವು ಅನೇಕ ಸಮಸ್ಯೆಗಳನ್ನು ಸಾಲು ಸಾಲಾಗಿ ನಮ್ಮೆದುರಿಗೆ ನಿಲ್ಲಿಸುತ್ತದೆ. ಎನ್ನುವದು ಗೊತ್ತಿದ್ದರೂ ಗಡಿಬಿಡಿಯ ಆಧುನಿಕ ಜೀವನದ ಶೈಲಿಯಲ್ಲಿ ನಿರುತ್ಸಾಹವು ನಮ್ಮಲ್ಲಿ ಮನೆಮಾಡುತ್ತಿದೆ. ಉತ್ಸಾಹವನ್ನು ಕಳೆದುಕೊಂಡರೆ ಜೀವನದ ಪಯಣವು ಮಕರಂದವನ್ನು ಕಳೆದುಕೊಂಡ ದುಂಬಿಯಂತಾಗುತ್ತದೆ. ನಾವಿಡುವ ಪ್ರತಿಯೊಂದು ಹೆಜ್ಜೆಯೂ ಭಾರವೆನಿಸುವ ಭಾವ ಹುಟ್ಟಿಸುತ್ತದೆ. ನೀರಸತೆಗೆ ಕಾರಣವಾಗುವ ನಿರುತ್ಸಾಹವನ್ನು ತೊರೆದು ಚಿಲುಮೆಯಂತೆ ಚಿಮ್ಮುವ ಉತ್ಸಾಹವನ್ನು ಅಪ್ಪಿಕೊಂಡು ಸಾಗುವದೇ ಜೀವಂತಿಕೆಯ ಲಕ್ಷಣ.“ಜೀವನವನ್ನು ರಸಮಯಗೊಳಿಸುವ ಮೂಲಧಾತುವೇ ಉತ್ಸಾಹ. ಸದಾ ಕ್ರಿಯಾಶೀಲವಾಗಿಸುವ ಭಾವವೇ ಉತ್ಸಾಹ. ಕಣ್ಣು ಕಂಡು ಕನಸನ್ನು ಬೆನ್ನಟ್ಟಿ…

Read More

ಹೊನವಾಡ: ನಮ್ಮ ಜೀವನದಲ್ಲಿ ನಮಗೆ ಯಾವುದೇ ಜ್ಞಾನ ಸಿಕ್ಕರೂ ಅದರ ಸದುಪಯೋಗ ಮಾಡಿಕೊಳ್ಳಬೇಕೆ ಹೋರತು ದುರುಪಯೋಗವಲ್ಲ. ಇಂದಿನ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿದೆ ಎಂದು ಬಾಬುರಾವ್ ಮಹಾರಾಜ ತಿಳಿಸಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಶ್ರೀ ಬ್ಯಾಳಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಅಪ್ಪು ಆಕಾಡೆಮಿ ಕಂಪ್ಯೂಟರ್ ತರಬೇತಿ ಕೇಂದ್ರದ ವತಿಯಿಂದ ಸೋಮವಾರ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ನುಡಿ ನಮನ ಮತ್ತು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೋರ್ಸ್ ಗಳ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರೇ ಸಿ ಪಾಟೀಲ್ ಅವರು ಮಾತನಾಡಿ, ಕಂಪ್ಯೂಟರ್ ಶಿಕ್ಷಣ ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಬಳಸಿಕೊಳ್ಳಬೇಕು. ಅನವಶ್ಯಕವಾಗಿ ಬಳಸುವುದರಿಂದ ಮನುಷ್ಯರ ಮೇಲೆ ದುಷ್ಪರಿಣಾಮ ಬೀರುತ್ತವೆ. ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯಕ, ಅದಕ್ಕಾಗಿ ಎಲ್ಲರೂ ಕಂಪ್ಯೂಟರ್ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಹೇಳಿದರು.ನಿಂಗರಾಜ್ ಸಿಂಗಾಡಿ ಮಾತನಾಡಿ, ಕಂಪ್ಯೂಟರ್ ಎನ್ನುವುದು ಇಂಟರ್ನೆಟ್ ಸೌಲಭ್ಯದ ಜೊತೆಗೆ ಮಕ್ಕಳು ಶಿಕ್ಷಣದಲ್ಲಿ ಹೊಸ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಕಲಿಯಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಕೋವಿಡ್​…

Read More

ದೇವರಹಿಪ್ಪರಗಿ: ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರು ಪರಿಕಲ್ಪನೆಯಡಿ ಪಟ್ಟಣ ಪಂಚಾಯಿತಿಯ ಡೇ ನಲ್ಮ್ ವಿಭಾಗದಿಂದ ನ.೯ ರಂದು ಗುರುವಾರ ವಿಶೇಷ ಕಾರ್ಯಕ್ರಮ ಜರುಗಲಿದೆ.ಪಟ್ಟಣ ಪಂಚಾಯಿತಿಯ ಆವರಣದಲ್ಲಿ ಗುರುವಾರ ಬೆಳಿಗ್ಗೆ ೧೦ ಘಂಟೆಗೆ ಚಾಲನೆ ನೀಡಿ ನಂತರ ಪಟ್ಟಣದ ಪಂಪ್ ಹೌಸ್ ನಂತರ ಹರನಾಳ ಗ್ರಾಮದ ಬಹುಹಳ್ಳಿ ಕುಡಿಯುವ ನೀರು ಯೋಜನೆಯ ಶುದ್ಧಿಕರಣ ಘಟಕ ನಂತರ ಬಳಗಾನೂರ ಕೆರೆಗೆ ತೆರಳಲಾಗುವುದು.ಇದು ಜಲಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮವಾಗಿದ್ದು, ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆ, ಸಾರ್ವಜನಿಕರು ಉತ್ತಮ ಗುಣಮಟ್ಟದ ನೀರನ್ನು ಪಡೆದುಕೊಳ್ಳಲು ಅನುಸರಿಸುವ ವಿವಿಧ ಪರೀಕ್ಷಾ ಮಾದರಿಯ ಪ್ರಕ್ರಿಯೆಗಳ ಬಗ್ಗೆ ಮಾಹಿತಿಯನ್ನು ತಿಳಿಸುವುದರ ಜೊತೆಗೆ ನೀರಿನ ಮೂಲ ಸೌಕರ್ಯಗಳ ಕುರಿತು ಮಾಲೀಕತ್ವದ ಭಾವನೆಯನ್ನು ಮಹಿಳೆಯರಲ್ಲಿ ತರುವುದಾಗಿದೆ.ಜಲಜಾಗೃತಿ ಕಾರ್ಯಕ್ರಮದಲ್ಲಿ ಪಟ್ಟಣದ ಬಹುತೇಕ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಲಿದ್ದಾರೆ ಎಂದು ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ ತಿಳಿಸಿದ್ದಾರೆ

Read More

ಬಿಜೆಪಿ ರೈತ ಮೊರ್ಚಾ ರಾಜ್ಯ ಕಾರ್ಯದರ್ಶಿ ಸಂಜಯ ಪಾಟೀಲ ಕನಮಡಿ ಆರೋಪ ತಿಕೋಟಾ: ಬಿಜೆಪಿ ಸರ್ಕಾರ ಈ ಹಿಂದೆ ಜಾರಿಗೆ ತಂದ ರೈತ ಪರವಾದ ಯೋಜನೆಗಳಾದ ಕಿಸಾನ್ ಸಮ್ಮಾನ ನಿಧಿ, ರೈತ ವಿದ್ಯಾನಿಧಿ, ಭೂ ಚೇತನ, ಭೂ ಸಿರಿ, ರೈತ ಶಕ್ತಿ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ ಸೇರಿದಂತೆ ಅನೇಕ ಯೋಜನೆಗಳನ್ನು ಅನುದಾನದ ಕೊರತೆ ಎಂಬ ನೆಪವೊಡ್ಡಿ ಈಗಿರುವ ಕಾಂಗ್ರೇಸ್ ಸರ್ಕಾರ ರದ್ದು ಮಾಡಿದೆ ಎಂದು ರಾಜ್ಯ ರೈತ ಮೊರ್ಚಾ ಕಾರ್ಯದರ್ಶಿ ಸಂಜಯ ಪಾಟೀಲ ಕನಮಡಿ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲ ಅನಿಯಮಿತ ವಿದ್ಯುತ್‌ ಲೋಡ್ ಶೆಡ್ಡಿಂಗ್‌ನಿಂದ ಕಂಗಾಲದ ರೈತರ ಗಾಯದ ಮೇಲೆ ಬರೆ ಎಳೆದ ಕಾಂಗ್ರೇಸ್ ಸರ್ಕಾರ ಇನ್ನು ಮುಂದೆ ರೈತರ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪಡೆಯಬೇಕಾದರೇ ಸ್ವಂತ ಖರ್ಚಿನಲ್ಲಿ ಟ್ರಾನ್ಸ್‌ಫಾರ್ಮರ್, ಕಂಬ ಮತ್ತು ತಂತಿ ಸೇರಿದಂತೆ ವಿದ್ಯುತ್‌ಗೆ ಸಂಬಂಧಪಟ್ಟ ವಸ್ತುಗಳನ್ನು ರೈತರೇ ಖರೀದಿಸಬೇಕೆಂದು ಸರ್ಕಾರ ಆದೇಶ ಮಾಡಿದ್ದು, ಇದು ಅತ್ಯಂತ ಖಂಡನೀಯವಾಗಿದೆ. ಈ ಹಿಂದೆ…

Read More

ಬಸವನಬಾಗೇವಾಡಿ: ರಾಷ್ಟ್ರೀಯ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ನಿರ್ದೇಶನದ ಮೇರೆಗೆ ಅಮೃತ ೨.೦ ಕಾರ್ಯಕ್ರಮದಡಿ ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರು ದ್ಯೇಯ ವಾಕ್ಯದಡಿ ಜಲ ದೀಪಾವಳಿ ಕಾರ್ಯಕ್ರಮವನ್ನು ನ. ೯ ರಂದು ನಿಡಗುಂದಿಯ ಡಬ್ಲೂಟಿಪಿ ಘಟಕದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಹೇಳಿದರು.ಪಟ್ಟಣದ ಪುರಸಭೆಯ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.೯ ರಂದು ಬೆಳಗ್ಗೆ ೯ ಗಂಟೆಗೆ ಸ್ಥಳೀಯ ವಿವಿಧ ಸ್ವ-ಸಹಾಯ ಸಂಘದಿಂದ ಆಯ್ಕೆ ಮಾಡಲಾದ ೩೦ ಮಹಿಳೆಯರ ತಂಡ, ಪುರಸಭೆಯ ಸದಸ್ಯರನ್ನು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಆಗುವ ನಿಡಗುಂದಿಯ ಡಬ್ಲೂಟಿಪಿ ಘಟಕಕ್ಕೆ ಕರೆದುಕೊಂಡು ಹೋಗಲಾಗುವುದು. ಅಲ್ಲಿ ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆಯ ಪ್ರಕ್ರಿಯೆ, ನಾಗರಿಕರು ಉತ್ತಮ ಗುಣಮಟ್ಟದ ನೀರನ್ನು ಪಡೆದುಕೊಳ್ಳಲು ಅನುಸರಿಸುವ ವಿವಿಧ ಪರೀಕ್ಷಾ ಮಾದರಿಯ ಪ್ರಕ್ರಿಯೆಯ ಬಗ್ಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ತಿಳಿಸುವ ಜೊತೆಗೆ ನೀರಿನ ಮೂಲ ಸೌಕರ್ಯದ ಬಗ್ಗೆ ಮಾಲೀಕತ್ವದ ಭಾವನೆಯನ್ನು…

Read More

ಮುದ್ದೇಬಿಹಾಳದಲ್ಲಿ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ಮುದ್ದೇಬಿಹಾಳ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಎಲ್ಲಂದರಲ್ಲಿ ರಸ್ತೆಗಳನ್ನು ಅನಧಿಕೃತವಾಗಿ ಅತಿಕ್ರಮಿಸಿ ಡಬ್ಬಾ ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ನಡೆಸುತ್ತ, ವಾಹನ ಸವಾರರಿಗೆ, ಪಾದಾಚಾರಿಗಳಿಗೆ ದಿನಂಪ್ರತಿ ತೊಂದರೆ ನೀಡುತ್ತಿದ್ದವರ ಮೇಲೆ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಜಂಟಿಯಾಗಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದರು.ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಕಳೆದ ಕೆಲವು ದಿನಗಳ ಹಿಂದೆಯೇ ಪಟ್ಟಣದಲ್ಲಿ ರಸ್ತೆಯನ್ನು ಅತಿಕ್ರಮಣ ಮಾಡಿದವರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸುವಂತೆ ಪ್ರಕಟಣೆಯ ಮೂಲಕ ತಿಳಿಸಿದ್ದು, ಪಟ್ಟಣದ ಆಲಮಟ್ಟಿ, ತಂಗಡಗಿ, ಮುಖ್ಯ ಬಜಾರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಕಾರ್ಯಪ್ರವೃತ್ತರಾಗಿ ರಸ್ತೆಯನ್ನು ಅತಿಕ್ರಮಿಸಿ ತಮ್ಮ ಅನುಕೂಲಕ್ಕಾಗಿ ಸ್ವಲ್ಪ ಮಟ್ಟಿಗೆ ಕಟ್ಟಡ ಮಾಡಿಕೊಂಡು ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದವರನ್ನು ಸೇರಿದಂತೆ ಯಾವ ಪ್ರಭಾವಕ್ಕೂ ಒಳಗಾಗದೇ ತಮ್ಮ ದಿಟ್ಟತನ ತೋರಿದರು.ಈ ವೇಳೆ ಪಿಎಎಸ್‌ಐ ಸಂಜೀವ ತಿಪರೆಡ್ಡಿ ಮಾತನಾಡಿ, ಹಲವು ದಿನಗಳಿಂದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ಪುರಸಭೆಯವರ ಸಹಕಾರದೊಂದಿಗೆ…

Read More