ಮುದ್ದೇಬಿಹಾಳ : ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಬೇಸರಗೊಂಡ ರೈತನೋರ್ವ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ತಾಲೂಕಿನ ಢವಳಗಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಆಲಕೊಪ್ಪರ ಗ್ರಾಮದ ರಾಮನಗೌಡ ಬಿರಾದಾರ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿ. ಮೂಲತಃ ರೈತಾಪಿ ಕುಂಟುಂಬದಿಂದ ಬಂದಿದ್ದ ಈತನ ಉದ್ಯೋಗ ಒಕ್ಕಲುತನ. ತನ್ನ ಜಮೀನುಗಳನ್ನೇ ನಂಬಿ ಸಾಗುವಳಿ ಮಾಡಿಕೊಂಡು ಬದುಕು ನಡೆಸುತ್ತಿರುವ ಈತನಿಗೆ ಕಳೆದ ಕೆಲವು ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ತನ್ನ ಕುಂಟುಂಬವನ್ನು ಸಲಹುವುದು ಹೇಗೆ ಎಂಬ ಚಿಂತೆಯಲ್ಲಿ ಆತ್ಮಹತ್ಯೆಯೇ ಪರಿಹಾರವೆಂದು ಇಲ್ಲಿಗೆ ಬಂದಿರುವದಾಗಿ ಸ್ವತಃ ತಾನೇ ಹೇಳಿಕೊಂಡಿದ್ದಾನೆ.
ತಮಗೆ ವಿದ್ಯತ್ ಪೂರೈಸುವ ಢವಳಗಿಯ ಕೆಇಬಿಯಲ್ಲಿನ ವಿದ್ಯುತ್ ಲೈನ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದು ಕೆಇಬಿ ಸಿಬ್ಬಂದಿ ಈತನನ್ನು ಅನಾಹುತದಿಂದ ತಪ್ಪಿಸಿ ೧೧೨ ಮೂಲಕ ಪೊಲೀಸರಿಗೆ ತಿಳಿಸಿದ್ದು ೧೧೨ ಸಿಬ್ಬಂದಿ ಮುದ್ದೇಬಿಹಾಳ ಠಾಣೆಗೆ ಒಪ್ಪಿಸಿದ್ದಾರೆ.
ಅಸಮರ್ಪಕ ವಿದ್ಯುತ್ ಪೂರೈಕೆಗೆ ಬೇಸತ್ತ ರೈತ ಆತ್ಮಹತ್ಯೆಗೆ ಯತ್ನ
Related Posts
Add A Comment