ಹೊನವಾಡ: ನಮ್ಮ ಜೀವನದಲ್ಲಿ ನಮಗೆ ಯಾವುದೇ ಜ್ಞಾನ ಸಿಕ್ಕರೂ ಅದರ ಸದುಪಯೋಗ ಮಾಡಿಕೊಳ್ಳಬೇಕೆ ಹೋರತು ದುರುಪಯೋಗವಲ್ಲ. ಇಂದಿನ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿದೆ ಎಂದು ಬಾಬುರಾವ್ ಮಹಾರಾಜ ತಿಳಿಸಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಶ್ರೀ ಬ್ಯಾಳಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಅಪ್ಪು ಆಕಾಡೆಮಿ ಕಂಪ್ಯೂಟರ್ ತರಬೇತಿ ಕೇಂದ್ರದ ವತಿಯಿಂದ ಸೋಮವಾರ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ನುಡಿ ನಮನ ಮತ್ತು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೋರ್ಸ್ ಗಳ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೇ ಸಿ ಪಾಟೀಲ್ ಅವರು ಮಾತನಾಡಿ, ಕಂಪ್ಯೂಟರ್ ಶಿಕ್ಷಣ ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಬಳಸಿಕೊಳ್ಳಬೇಕು. ಅನವಶ್ಯಕವಾಗಿ ಬಳಸುವುದರಿಂದ ಮನುಷ್ಯರ ಮೇಲೆ ದುಷ್ಪರಿಣಾಮ ಬೀರುತ್ತವೆ. ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯಕ, ಅದಕ್ಕಾಗಿ ಎಲ್ಲರೂ ಕಂಪ್ಯೂಟರ್ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಿಂಗರಾಜ್ ಸಿಂಗಾಡಿ ಮಾತನಾಡಿ, ಕಂಪ್ಯೂಟರ್ ಎನ್ನುವುದು ಇಂಟರ್ನೆಟ್ ಸೌಲಭ್ಯದ ಜೊತೆಗೆ ಮಕ್ಕಳು ಶಿಕ್ಷಣದಲ್ಲಿ ಹೊಸ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಕಲಿಯಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಕೋವಿಡ್ ಸಂದರ್ಭದಲ್ಲಿ ಆನ್ಲೈನ್ ಕಲಿಕೆಗೆ ಕಂಪ್ಯೂಟರ್ ತುಂಬಾ ಪ್ರಯೋಜನ ನೀಡಿದೆ. ಕಂಪ್ಯೂಟರ್ ಇರುವ ಕಾರಣದಿಂದಲೇ ದೂರ ಶಿಕ್ಷಣ ಸಾಧ್ಯವಾಗಿದೆ ಎಂದರು.
ತುಳಸಿದಾಸ ಸಾವಂತ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯ ಮೇಲೆ ನಳಿನಿಕಾಂತ ಸಾವಂತ, ಯಂಕಪ್ಪ ಉಪ್ಪಾರ, ಶಂಕರ ಕಟೆ, ನಾಮದೇವ ಸಾವಂತ, ಮಾಣಿಕ ಶಿಂಧೆ, ಉಮೇಶ್ ಜಾಧವ ಉಪಸ್ಥಿತರಿದ್ದರು.
ಪ್ರಿಯಾ ನಾವಿ ಸಂಗಡಿಗರು ಪ್ರಾರ್ಥಿಸಿದರು. ಶಿವಾನಂದ ಚಾವರ ನಿರೂಪಿಸಿದರು ತುಕಾರಾಮ ನಲವಡೆ ಸ್ವಾಗತಿಸಿದರು. ಸುಕನ್ಯಾ ಪತ್ತಾರ ವಂದಿಸಿದರು.
Related Posts
Add A Comment