ದೇವರಹಿಪ್ಪರಗಿ: ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರು ಪರಿಕಲ್ಪನೆಯಡಿ ಪಟ್ಟಣ ಪಂಚಾಯಿತಿಯ ಡೇ ನಲ್ಮ್ ವಿಭಾಗದಿಂದ ನ.೯ ರಂದು ಗುರುವಾರ ವಿಶೇಷ ಕಾರ್ಯಕ್ರಮ ಜರುಗಲಿದೆ.
ಪಟ್ಟಣ ಪಂಚಾಯಿತಿಯ ಆವರಣದಲ್ಲಿ ಗುರುವಾರ ಬೆಳಿಗ್ಗೆ ೧೦ ಘಂಟೆಗೆ ಚಾಲನೆ ನೀಡಿ ನಂತರ ಪಟ್ಟಣದ ಪಂಪ್ ಹೌಸ್ ನಂತರ ಹರನಾಳ ಗ್ರಾಮದ ಬಹುಹಳ್ಳಿ ಕುಡಿಯುವ ನೀರು ಯೋಜನೆಯ ಶುದ್ಧಿಕರಣ ಘಟಕ ನಂತರ ಬಳಗಾನೂರ ಕೆರೆಗೆ ತೆರಳಲಾಗುವುದು.
ಇದು ಜಲಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮವಾಗಿದ್ದು, ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆ, ಸಾರ್ವಜನಿಕರು ಉತ್ತಮ ಗುಣಮಟ್ಟದ ನೀರನ್ನು ಪಡೆದುಕೊಳ್ಳಲು ಅನುಸರಿಸುವ ವಿವಿಧ ಪರೀಕ್ಷಾ ಮಾದರಿಯ ಪ್ರಕ್ರಿಯೆಗಳ ಬಗ್ಗೆ ಮಾಹಿತಿಯನ್ನು ತಿಳಿಸುವುದರ ಜೊತೆಗೆ ನೀರಿನ ಮೂಲ ಸೌಕರ್ಯಗಳ ಕುರಿತು ಮಾಲೀಕತ್ವದ ಭಾವನೆಯನ್ನು ಮಹಿಳೆಯರಲ್ಲಿ ತರುವುದಾಗಿದೆ.
ಜಲಜಾಗೃತಿ ಕಾರ್ಯಕ್ರಮದಲ್ಲಿ ಪಟ್ಟಣದ ಬಹುತೇಕ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಲಿದ್ದಾರೆ ಎಂದು ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ ತಿಳಿಸಿದ್ದಾರೆ
Related Posts
Add A Comment