Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ತಾಲೂಕಿನ ನರಸಲಗಿ ಗ್ರಾಮದ ಎಂಡಿಎಸ್ಸಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈಚೆಗೆ ಜರುಗಿದ ಜಿಲ್ಲಾ ಮಟ್ಟದ ಪದವಿ ಪೂರ್ವ ವಿಭಾಗದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಕಾಸ ರಾಠೋಡ ೫ ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ , ವಿಕಾಸ ರಾಠೋಡ ೧೫೦೦ ಮೀ.ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ೪ *೪೦೦ ರಿಲೆಯಲ್ಲಿ ವಿಕಾಸ, ಸಚೀನ,ದರ್ಶನ, ಚೇತನ ಪ್ರಥಮ ಸ್ಥಾನ,ಗುಡ್ಡಗಾಡು ಓಟದಲ್ಲಿ ದರ್ಶನ ಚವ್ಹಾಣ, ಹನುಮಂತ ಗುಡದಿನ್ನಿ, ಪ್ರಸನ್ನ ಅಂಬಣ್ಣೂರ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ, ಆಡಳಿತ ಮಂಡಳಿ ಶುಭ ಹಾರೈಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಬಸವನಬಾಗೇವಾಡಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ವೀರವನಿತೆ ಒನಕೆ ಒಬ್ಬವ್ವ ಜಯಂತಿಯಂಗವಾಗಿ ಒನಕೆ ಒಬ್ಬವ್ವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಪುರಸಭೆ ಸದಸ್ಯರಾದ ಅಶೋಕ ಹಾರಿವಾಳ, ನಜೀರ ಗಣಿ, ಜಗದೇವಿ ಗುಂಡಳ್ಳಿ, ತಾಪಂ ಮಾಜಿ ಅಧ್ಯಕ್ಷ ಕಲ್ಲು ಸೊನ್ನದ, ಪುರಸಭೆ ಅಭಿಯಂತರ ಮಹಾದೇವ ಜಂಬಗಿ, ಕಿರಿಯ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ, ಗೀತಾಂಜಲಿ ದಾಸರ, ಮೊಗಿನ, ಕಿರಣ ಕಿಣಗಿ ಇತರರು ಇದ್ದರು.
ಚಡಚಣ: ಸಮೀಪದ ಗಡಿನಾಡಿನ ಶಿರಾಡೋಣ ಗ್ರಾಮವು ಹಾಲುಮತ ಸುಕ್ಷೇತ್ರವೆಂದು ಪ್ರಸಿದ್ಧವಾಗಿದ್ದು, ಪ್ರತಿವರ್ಷ ದೀಪಾವಳಿಯಂದು ನಡೆವ ಜಾತ್ರೆಯಲ್ಲಿ ಭೇಟಿ ಕಾರ್ಯಕ್ರಮವು ಜರುಗುವುದು.ಬೀರಲಿಂಗೇಶ್ವರನ ಮೂಲ ಸ್ಥಾನವಾದ ಶಿರಾಡೋಣದಲ್ಲಿ ಬೀರಲಿಂಗೇಶ್ವರ ಮತ್ತು ಶೀಲವಂತಿ ಹಾಗೂ ಹುಲಜಂತಿಯ ಮಾಳಿಂಗರಾಯ ದೇವರ ಮತ್ತು ಹುನ್ನೂರ ಬೀರಣ್ಣದೇವರ ಭೇಟಿ ಕಾರ್ಯಕ್ರಮವು ಶನಿವಾರದಂದು ಜರುಗಿತು.ಶನಿವಾರದ ನಸುಕಿನ ಜಾವ ೫ ಗಂಟೆಗೆ ಬೀರಲಿಂಗೇಶ್ವರ ಹಾಗೂ ಶೀಲದೇವಿ ದೇವರುಗಳಿಗೆ ಪೂಜಾರಿಯವರಿಂದ ಮಹಾಪೂಜೆ ಜರುಗಿತು. ನಂತರ ಭಕ್ತರಿಂದ ನೈವೇದ್ಯ ಕಾರ್ಯಕ್ರಮ ಹಾಗೂ ಭಕ್ತರಿಂದ ಧೀರ್ಘದಂಡ ನಮಸ್ಕಾರವನ್ನು ಹಾಕಿ ಭಕ್ತರು ಹರಕೆ ತೀರಿಸಿದರು. ನಂತರ ವಾಲಿಬಾಲ್ ಪಂದ್ಯಾಟಗಳು ಜರುಗಿದವು.ಸಾಯಂಕಾಲ ೫ ಗಂಟೆಗೆ ವಿವಿಧ ವಾದ್ಯ ವೈಭವಗಳೊಂದಿಗೆ ದೇವರುಗಳ ಪಲ್ಲಕ್ಕಿಗಳ ಮೆರವಣಿಗೆಯೊಂದಿಗೆ ಬೀರಲಿಂಗೇಶ್ವರ, ಶೀಲವಂತಿದೇವಿ, ಹುಲಜಂತಿ ಮಾಳಿಂಗರಾಯ, ಹುನ್ನೂರಿನ ಬೀರಣ್ಣ ದೇವರ ಪಲ್ಲಕ್ಕಿಗಳ ಭವ್ಯ ಭಂಡಾರದೊಂದಿಗೆ ಭೇಟಿ ಕಾರ್ಯಕ್ರಮ ಜರುಗಿತು.ಈ ವೇಳೆಯಲ್ಲಿ ಭಕ್ತಾದಿಗಳು ಭಂಡಾರ, ಉಣ್ಣೆ, ಉತ್ತತ್ತಿ ಹಾರಿಸಿ ತಮ್ಮ ಹರಕೆ ತೀರಿಸಿದರು. ಭೇಟಿಯ ನಂತರ ಮಾರಾಯರುಗಳಿಂದ ನುಡಿಮುತ್ತುಗಳು ಜರುಗಿದವು. ಇದನ್ನು ನೋಡಲು ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ಸಹಸ್ರಾರು…
ಸಿಂದಗಿ: ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿರುವ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರದುರ್ಗವೂ ಒಂದು ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ಆಡಳಿತ ಸೌಧದಲ್ಲಿ ಹಮ್ಮಿಕೊಂಡ ವೀರ ವನಿತೆ ಒಬವ್ವ ಜಯಂತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಎಂದಾ ಕ್ಷಣ ನೆನಪಾಗುವುದೇ ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದ ವೀರವನಿತೆ ಒನಕೆ ಓಬವ್ವ. ಆಕೆಯ ಸಾಹಸದ ಕತೆ ಎಂದಿಗೂ ಅಜರಾಮರ. ಅಂತಹ ಧೀರ ಮಹಿಳೆ ಜನಿಸಿದ ನಾಡಿನಲ್ಲಿ ನಾವಿರುವುದು ಬಹಳ ಹೆಮ್ಮೆಯ ವಿಚಾರ ಎಂದರು.ಈ ವೇಳೆ ಜಿ.ಎಸ್.ರೋಡಗಿ, ಕಂದಾಯ ನಿರೀಕ್ಷಕ ಆಯ್.ಎ ಮಕಾಂದಾರ, ಮಲ್ಲಿಕಾರ್ಜುನ ಮಾಲಗಾರ, ಜಗದೀಶ ಶಹಾಪೂರ, ನಿಖಿಲಅಹ್ಮದ್ ಖಾನಾಪುರ, ನಾಗಮ್ಮ ಸಾಲಿ, ದಾನಮ್ಮ ಹೂಗಾರ, ಹೀನಾಕೌಸರ ಮಂದೇವಾಲಿ, ಸಮೀರ ಮುಜಾವರ, ಸ್ನೇಹಾ ಕೊಪ್ಪ, ವಿಜಯಲಕ್ಷ್ಮಿ ಶಹಾಪೂರ, ಭೀಮಾಶಂಕರ ಕರಿಮುಂಗಿ, ಮಂಜುಳಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ ಸಿಂದಗಿ: ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಜಗತ್ತಿಗೆ ಸಮಾನತೆ, ಮಾನವೀಯತೆ ಹಾಗೂ ಶ್ರೇಷ್ಠ ಜೀವನ ಮೌಲ್ಯವನ್ನು ಕಲಿಸಿಕೊಟ್ಟ ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಮೆರಗು ಕಡಿಮೆಯಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಜ್ಯೋತಿ ನಗರದ ಜ್ಯೋತಿ ಕಲ್ಯಾಣ ಮಂಟಪದಲ್ಲಿ ನಬಿರೋಶನ ಪ್ರಕಾಶನ್ ಬೋರಗಿ, ಮಂದಾರ ಪ್ರತಿಷ್ಠಾನ ಹಾಗೂ ಆಲಮೇಲ ಶಾಫಿಯಾ ಪ್ರಕಾಶನ ಶನಿವಾರ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡದ ಮೇಲೆ, ಅಭಿಮಾನ ಮೂಡಿದಾಗ ಮಾತ್ರ ಕನ್ನಡ ಭಾಷೆ ಉಚ್ಛ್ರಾಯ ಸ್ಥಿತಿಗೆ ತಲುಪಲು ಸಾಧ್ಯ ಎಂದು ಹೇಳಿದರು.ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ಕನ್ನಡ ಸಾಹಿತ್ಯ ಮತ್ತು ಭಾಷೆಗೆ ತನ್ನದೆಯಾದ ಸಂಪತ್ಬರಿತ ಸಾಂಸ್ಕೃತಿಕ ಇತಿಹಾಸ ಹೊಂದಿದೆ ಹೀಗಾಗಿಯೇ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿವೆ ಎಂದು ಹೇಳಿದರು.ಕಾರ್ಯಕ್ರಮದ…
ಸಿಂದಗಿ: ಪಟ್ಟಣದ ಸಾರಂಗಮಠದ ಪೂಜ್ಯ ಶ್ರೀ ಲಿಂ. ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ವತಿಯಿಂದ ಲಿಂ.ಚೆನ್ನವೀರ ಸ್ವಾಮಿಗಳ ೧೩೦ನೆಯ ಜಯಂತಿ ಹಾಗೂ ಶಿವಶರಣೆಯರ ಚರಿತಾಮೃತ ಪ್ರವಚನ ನ.೧೪ ರಿಂದ ಡಿ.೧೯ರ ವರೆಗೆ ಪ್ರತಿದಿನ ಸಾಯಂಕಾಲ ೬.೩೦ ಗಂಟೆಗೆ ಸಾರಂಗಮಠದಲ್ಲಿ ಜರುಗಲಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ಸಾರಂಗಮಠದಲ್ಲಿ ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ನ.೧೪ ರಂದು ಪ್ರವಚನದ ಉದ್ಘಾಟನೆ ನಡೆಯಲಿದೆ. ಪ್ರವಚನಕಾರರಾಗಿ ನಿವೃತ್ತ ಪ್ರಾಧ್ಯಾಪಕ ಬಿ.ಎನ್.ಪಾಟೀಲ ಆಗಮಿಸಲಿದ್ದಾರೆ. ನ.೧೮ ರಂದು ಲಿಂ. ಚೆನ್ನವೀರ ಸ್ವಾಮಿಗಳ ೧೩೦ನೆಯ ಜಯಂತಿ ಜರುಗಲಿದೆ. ನ.೨೦ ರಂದು ಇಸ್ರೋ ಮಾಜಿ ಅಧ್ಯಕ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕಿರಣಕುಮಾರ ಅವರಿಗೆ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ವೇಳೆ ಕೋಣ್ಣೂರಿನ ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಊರನ ಹಿರಿಯ ಮಠದ ಶ್ರೀ ಶಿವಾನಂದ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ವಿಪ ಸದಸ್ಯ ಅರುಣ ಶಹಾಪೂರ, ನವದೆಹಲಿಯ ಭಾರತದ ಟಾಪ್…
ವಿಜಯಪುರ: ಭಾರತದ ಮುಂಚೂಣಿಯ ರೀಟೈಲ್ ದೈತ್ಯ ರಿಲಯನ್ಸ್ ರೀಟೇಲ್ ಕರ್ನಾಟಕದ ಲಿಂಗದಗುಡಿ ರಸ್ತೆಯಲ್ಲಿ ತನ್ನ ಯುಸ್ಟಾ ಮಳಿಗೆಯನ್ನು ಪ್ರಾರಂಭಿಸಿದೆ. ತೆಲಂಗಾಣ, ಛತ್ತೀಸಗಢ, ಕೇರಳ ಮತ್ತು ಮಹಾರಾಷ್ಟ್ರಗಳಿಗೆ ಪ್ರವೇಶಿಸಿದ ನಂತರ ರಿಲಯನ್ಸ್ ರೀಟೇಲ್ ನ ಯುವಜನರ ಕೇಂದ್ರಿತ ಫ್ಯಾಷನ್ ಬ್ರಾಂಡ್ ಈಗ ಕರ್ನಾಟಕ ರಾಜ್ಯಕ್ಕೂ ತನ್ನ ಪ್ರವೇಶ ಮಾಡಿದೆ.ಯುಸ್ಟಾ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾದ ದಿನದಿಂದಲೂ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಬಂದಿದೆ. ಈ ಬ್ರಾಂಡ್ ಯುವ ಗ್ರಾಹಕರಿಗೆ ಟ್ರೆಂಡಿ ಮತ್ತು ಕೈಗೆಟುಕುವ ಫ್ಯಾಷನ್ ತಂದಿದೆ. ಯುಸ್ಟಾ ವಿಸ್ತಾರ ಶ್ರೇಣಿಯ ಫ್ಯಾಷನಬಲ್ ಉಡುಪುಗಳ ಆಕರ್ಷಕ ಮತ್ತು ಕೈಗೆಟುಕುವ ಖರೀದಿ ಅನುಭವ ನೀಡುತ್ತದೆ, ಎಲ್ಲ ಉತ್ಪನ್ನಗಳೂ ರೂ.೯೯೯ಕ್ಕಿಂತ ಕಡಿಮೆ ಬೆಲೆ ಹೊಂದಿವೆ ಮತ್ತು ಬಹಳಷ್ಟು ಉತ್ಪನ್ನಗಳು ರೂ.೪೯೯ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ.ಈ ವಿಜಯಪುರದ ಮಳಿಗೆಯು ಅಡಿಯಿಂದ ಮುಡಿಯವರೆಗೆ ದಿರಿಸುಗಳು, ಯೂನಿಸೆಕ್ಸ್ ಮತ್ತು ಕ್ಯಾರೆಕ್ಟರ್ ಮರ್ಕೆಂಡೈಸ್ ಮತ್ತು ಯುಸ್ಟಾದ ವಿಶೇಷ “ಸ್ಟಾರಿಂಗ್ ನೌ” ಸಂಗ್ರಹದಿಂದ ವಾರದ ಹೊಸ ಫ್ಯಾಷನ್ ಡ್ರಾಪ್ಸ್ ಒಳಗೊಂಡಿದೆ.ಈ ಮಳಿಗೆಯು ಸಮಕಾಲೀನ ಮತ್ತು ತಂತ್ರಜ್ಞಾನ-ಸನ್ನದ್ಧ…
ವಿಜಯಪುರ: ರೋಗಶಾಸ್ತ್ರಜ್ಞರು ವೈದ್ಯರಲ್ಲಿಯೇ ಜಾಣ ವೈದ್ಯರಾಗಿದ್ದಾರೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಹೇಳಿದ್ದಾರೆ.ಬುಧವಾರ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಶಿಕ್ಷಣ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ರೋಗನಿರ್ಣಯ ಶಾಸ್ತ್ರ ದಿನಾಚರಣೆ ಉದ್ಘಾಟಿಸಿ ಅವರು ಅವರು ಹೇಳಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಧಾರವಾಡದ ಎಸ್. ಡಿ. ಎಂ ವೈದ್ಯಕೀಯ ಮಹಾವಿದ್ಯಾಲಯದ ಹಿಮೆಟೊಆಂಕಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಗಿರೀಶ ಕಾಮತ ಮಾತನಾಡಿ ನಾನಾ ರಕ್ತ ಕಣಗಳ ಕ್ಷೀಣಿಸುವಿಕೆ(ಪ್ಯಾನ್ಸೈಟೊಪೀನಿಯಾ) ಮತ್ತು ಹವಾಮಾನ ವೈಪರೀತ್ಯದ ಜೊತೆ ಅದರ ಸಂಬಂಧದ ಕುರಿತು ವಿವರಿಸಿದರು.ರೋಗಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುರೇಖಾ ಹಿಪ್ಪರಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸ್ನೇಹಾ.ಜವಳಕರ ವಂದಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಚಾರ್ಯ ಡಾ. ಎಂ. ಬಿ.ಪಾಟೀಲ, ಹಿರಿಯ ವಿಜ್ಞಾನಿ ಡಾ. ಕುಶಾಲ ದಾಸ, ಪ್ರಾಧ್ಯಾಪಕರಾದ ಡಾ. ತೇಜಸ್ವಿನಿ.ವಲ್ಲಭ, ಡಾ. ಸುರೇಖಾ.ಅರಕೇರಿ, ಡಾ. ಪ್ರಕಾಶ.ಪಾಟೀಲ, ಡಾ. ಸತೀಶ.ಅರಕೇರಿ, ಡಾ. ಸಾವಿತ್ರಿ.…
Udayarashmi kannada daily newspaper
ಹೆತ್ತವರ ಒಲವಿನ ಕುಡಿಯವಳುಪತಿಯಮುದ್ದಿನ ಮಡದಿಯವಳು ಎರಡುಮನೆಗಳ ನಂದಾದೀಪವಾಗಿಮುದ್ದು ಕಂದಮ್ಮಗಳ ಮಾತೆಯಾಗಿ ಸುಖದುಃಖಗಳಲಿ ಸದಾ ಸಮಚಿತ್ತಳುಸಹನೆಯಲಿ ಭೂಮಿಯಂತೆ ಇಹಳು ಸಭ್ಯ ಸಂಸ್ಕೃತಿಯ ಪ್ರತೀಕವಿವಳುಎಲ್ಲೆಡೆ ಛಾಪನ್ನು ಮೂಡಿಸುವವಳು ಪ್ರೀತಿ ತ್ಯಾಗ ಸ್ನೇಹಕ್ಕೆ ಸಮಾನಳಿವಳುನವ ಸಮಾಜದ ನಿರ್ಮಾತೃ ಇವಳು ಪ್ರಕೃತಿದೇವಿಯ ತದ್ರೂಪವೇ ಇವಳುಹೆಣ್ಣೆಂದರೆ ಆದಿಶಕ್ತಿಯ ಸ್ವರೂಪಳು..
