ಹೆತ್ತವರ ಒಲವಿನ ಕುಡಿಯವಳು
ಪತಿಯಮುದ್ದಿನ ಮಡದಿಯವಳು
ಎರಡುಮನೆಗಳ ನಂದಾದೀಪವಾಗಿ
ಮುದ್ದು ಕಂದಮ್ಮಗಳ ಮಾತೆಯಾಗಿ
ಸುಖದುಃಖಗಳಲಿ ಸದಾ ಸಮಚಿತ್ತಳು
ಸಹನೆಯಲಿ ಭೂಮಿಯಂತೆ ಇಹಳು
ಸಭ್ಯ ಸಂಸ್ಕೃತಿಯ ಪ್ರತೀಕವಿವಳು
ಎಲ್ಲೆಡೆ ಛಾಪನ್ನು ಮೂಡಿಸುವವಳು
ಪ್ರೀತಿ ತ್ಯಾಗ ಸ್ನೇಹಕ್ಕೆ ಸಮಾನಳಿವಳು
ನವ ಸಮಾಜದ ನಿರ್ಮಾತೃ ಇವಳು
ಪ್ರಕೃತಿದೇವಿಯ ತದ್ರೂಪವೇ ಇವಳು
ಹೆಣ್ಣೆಂದರೆ ಆದಿಶಕ್ತಿಯ ಸ್ವರೂಪಳು..