ಸಿಂದಗಿ: ಪಟ್ಟಣದ ಸಾರಂಗಮಠದ ಪೂಜ್ಯ ಶ್ರೀ ಲಿಂ. ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ವತಿಯಿಂದ ಲಿಂ.ಚೆನ್ನವೀರ ಸ್ವಾಮಿಗಳ ೧೩೦ನೆಯ ಜಯಂತಿ ಹಾಗೂ ಶಿವಶರಣೆಯರ ಚರಿತಾಮೃತ ಪ್ರವಚನ ನ.೧೪ ರಿಂದ ಡಿ.೧೯ರ ವರೆಗೆ ಪ್ರತಿದಿನ ಸಾಯಂಕಾಲ ೬.೩೦ ಗಂಟೆಗೆ ಸಾರಂಗಮಠದಲ್ಲಿ ಜರುಗಲಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ನ.೧೪ ರಂದು ಪ್ರವಚನದ ಉದ್ಘಾಟನೆ ನಡೆಯಲಿದೆ. ಪ್ರವಚನಕಾರರಾಗಿ ನಿವೃತ್ತ ಪ್ರಾಧ್ಯಾಪಕ ಬಿ.ಎನ್.ಪಾಟೀಲ ಆಗಮಿಸಲಿದ್ದಾರೆ. ನ.೧೮ ರಂದು ಲಿಂ. ಚೆನ್ನವೀರ ಸ್ವಾಮಿಗಳ ೧೩೦ನೆಯ ಜಯಂತಿ ಜರುಗಲಿದೆ. ನ.೨೦ ರಂದು ಇಸ್ರೋ ಮಾಜಿ ಅಧ್ಯಕ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕಿರಣಕುಮಾರ ಅವರಿಗೆ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ವೇಳೆ ಕೋಣ್ಣೂರಿನ ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಊರನ ಹಿರಿಯ ಮಠದ ಶ್ರೀ ಶಿವಾನಂದ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ವಿಪ ಸದಸ್ಯ ಅರುಣ ಶಹಾಪೂರ, ನವದೆಹಲಿಯ ಭಾರತದ ಟಾಪ್ ಟೆನ್ ಅಂತರಾಷ್ಟ್ರೀಯ ಫೈನ್ ಆರ್ಟ ಕಲಾವಿದ ಈರಣ್ಣ ರುಕುಂಪೂರ ಭಾಗವಹಿಸಲಿದ್ದಾರೆ. ನ.೨೩ ರಂದು ಪ್ರಗತಿ ಪರ ರೈತ ಗೊರವಗುಂಡಗಿಯ ಗುರುಬಸಪ್ಪ ಯಲಗೋಡ ಅವರಿಗೆ ಸಾರಂಗಶ್ರೀ ಕೃಷಿ ಪ್ರಶಸ್ತಿ ಪ್ರದಾನ ಜರುಗಲಿದೆ. ಡಿ.೧೭ರಂದು ಶ್ರೀಮಠದಲ್ಲಿ ಅಯ್ಯಾಚಾರ ಹಾಗೂ ಲಿಂಗದೀಕ್ಷೆ ಜರುಗಲಿದೆ. ಡಿ.೧೮ ರಂದು ಶ್ರೀ ಶಿವಯೋಗಿ ಶಿವಾಚಾರ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಶ್ರೀಶೈಲದ ಶ್ರೀ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಶನ್ ಟ್ರಸ್ಟ್ ಅವರಿಗೆ ಪ್ರದಾನ ಮಾಡಲಾಗುವುದು. ಈ ವೇಳೆ ಶ್ರೀಶೈಲದ ಪೂಜ್ಯ ಶ್ರೀ ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ಡಿ.೧೯ ರಂದು ಬೆಳಗ್ಗೆ ೧೧ ಗಂಟೆಗೆ ಮಹಾಪ್ರಸಾದ ಮತ್ತು ಮಧ್ಯಾಹ್ನ ೨ ಗಂಟೆಗೆ ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವು ಮಹಿಳೆಯರು ಬೆಳ್ಳಿತೇರನ್ನು ಎಳೆಯುವ ಮುಖೇನ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಹರಗುರು ಚರಮೂರ್ತಿಗಳು ಬಾಗವಹಿಸಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಶಾಸಕ ಅಶೋಕ ಮನಗೂಳಿ, ಸಂಚಾಲಕ ವ್ಹಿ.ಡಿ.ವಸ್ತ್ರದ, ನೆಹರು ಪೋರವಾಲ, ಹ.ಮ.ಪೂಜಾರ, ಗಂಗಾಧರ ಜೋಗೂರ, ಅಶೋಕ ಮಸಳಿ, ಡಾ.ಬಿ.ಜಿ.ಮಠ, ಡಾ.ವ್ಹಿ.ವ್ಹಿ.ಸಾಲಿಮಠ, ಪ್ರಾಚಾರ್ಯ ವ್ಹಿ.ಡಿ.ಪಾಟೀಲ, ಪ್ರಾಚಾರ್ಯ ಜೆ.ಸಿ.ನಂದಿಕೋಲ, ಎಸ್.ಎಮ್.ಬಿರಾದಾರ, ಶ್ರೀಶೈಲ ನಂದಿಕೋಲ, ಮುತ್ತು ಮುಂಡೇವಾಡಗಿ, ಕೆ.ಎಚ್.ಸೋಮಾಪೂರ, ವಿಶ್ವನಾಥ ನಂದಿಕೋಲ, ವಿರೇಶ ಜೋಗೂರ, ಶಿವಕುಮಾರ ಜೋಗೂರ ಸೇರಿದಂತೆ ಅನೇಕರಿದ್ದರು.
Related Posts
Add A Comment