ವಿಜಯಪುರ: ರೋಗಶಾಸ್ತ್ರಜ್ಞರು ವೈದ್ಯರಲ್ಲಿಯೇ ಜಾಣ ವೈದ್ಯರಾಗಿದ್ದಾರೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಹೇಳಿದ್ದಾರೆ.
ಬುಧವಾರ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಶಿಕ್ಷಣ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ರೋಗನಿರ್ಣಯ ಶಾಸ್ತ್ರ ದಿನಾಚರಣೆ ಉದ್ಘಾಟಿಸಿ ಅವರು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಧಾರವಾಡದ ಎಸ್. ಡಿ. ಎಂ ವೈದ್ಯಕೀಯ ಮಹಾವಿದ್ಯಾಲಯದ ಹಿಮೆಟೊಆಂಕಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಗಿರೀಶ ಕಾಮತ ಮಾತನಾಡಿ ನಾನಾ ರಕ್ತ ಕಣಗಳ ಕ್ಷೀಣಿಸುವಿಕೆ(ಪ್ಯಾನ್ಸೈಟೊಪೀನಿಯಾ) ಮತ್ತು ಹವಾಮಾನ ವೈಪರೀತ್ಯದ ಜೊತೆ ಅದರ ಸಂಬಂಧದ ಕುರಿತು ವಿವರಿಸಿದರು.
ರೋಗಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುರೇಖಾ ಹಿಪ್ಪರಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸ್ನೇಹಾ.ಜವಳಕರ ವಂದಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಚಾರ್ಯ ಡಾ. ಎಂ. ಬಿ.ಪಾಟೀಲ, ಹಿರಿಯ ವಿಜ್ಞಾನಿ ಡಾ. ಕುಶಾಲ ದಾಸ, ಪ್ರಾಧ್ಯಾಪಕರಾದ ಡಾ. ತೇಜಸ್ವಿನಿ.ವಲ್ಲಭ, ಡಾ. ಸುರೇಖಾ.ಅರಕೇರಿ, ಡಾ. ಪ್ರಕಾಶ.ಪಾಟೀಲ, ಡಾ. ಸತೀಶ.ಅರಕೇರಿ, ಡಾ. ಸಾವಿತ್ರಿ. ನೆರೂನೆ, ಡಾ. ಸಾಯಿ.ಕುಲಕರ್ಣಿ, ಸ್ನಾತಕ ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ನಿಬಂಧ, ರಸಪ್ರಶ್ನೆ, ಕಲಾರಚನೆಗಳಲ್ಲಿ ವಿಜೇತರಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
Related Posts
Add A Comment