ವಿಜಯಪುರ: ಭಾರತದ ಮುಂಚೂಣಿಯ ರೀಟೈಲ್ ದೈತ್ಯ ರಿಲಯನ್ಸ್ ರೀಟೇಲ್ ಕರ್ನಾಟಕದ ಲಿಂಗದಗುಡಿ ರಸ್ತೆಯಲ್ಲಿ ತನ್ನ ಯುಸ್ಟಾ ಮಳಿಗೆಯನ್ನು ಪ್ರಾರಂಭಿಸಿದೆ. ತೆಲಂಗಾಣ, ಛತ್ತೀಸಗಢ, ಕೇರಳ ಮತ್ತು ಮಹಾರಾಷ್ಟ್ರಗಳಿಗೆ ಪ್ರವೇಶಿಸಿದ ನಂತರ ರಿಲಯನ್ಸ್ ರೀಟೇಲ್ ನ ಯುವಜನರ ಕೇಂದ್ರಿತ ಫ್ಯಾಷನ್ ಬ್ರಾಂಡ್ ಈಗ ಕರ್ನಾಟಕ ರಾಜ್ಯಕ್ಕೂ ತನ್ನ ಪ್ರವೇಶ ಮಾಡಿದೆ.
ಯುಸ್ಟಾ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾದ ದಿನದಿಂದಲೂ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಬಂದಿದೆ. ಈ ಬ್ರಾಂಡ್ ಯುವ ಗ್ರಾಹಕರಿಗೆ ಟ್ರೆಂಡಿ ಮತ್ತು ಕೈಗೆಟುಕುವ ಫ್ಯಾಷನ್ ತಂದಿದೆ. ಯುಸ್ಟಾ ವಿಸ್ತಾರ ಶ್ರೇಣಿಯ ಫ್ಯಾಷನಬಲ್ ಉಡುಪುಗಳ ಆಕರ್ಷಕ ಮತ್ತು ಕೈಗೆಟುಕುವ ಖರೀದಿ ಅನುಭವ ನೀಡುತ್ತದೆ, ಎಲ್ಲ ಉತ್ಪನ್ನಗಳೂ ರೂ.೯೯೯ಕ್ಕಿಂತ ಕಡಿಮೆ ಬೆಲೆ ಹೊಂದಿವೆ ಮತ್ತು ಬಹಳಷ್ಟು ಉತ್ಪನ್ನಗಳು ರೂ.೪೯೯ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ.
ಈ ವಿಜಯಪುರದ ಮಳಿಗೆಯು ಅಡಿಯಿಂದ ಮುಡಿಯವರೆಗೆ ದಿರಿಸುಗಳು, ಯೂನಿಸೆಕ್ಸ್ ಮತ್ತು ಕ್ಯಾರೆಕ್ಟರ್ ಮರ್ಕೆಂಡೈಸ್ ಮತ್ತು ಯುಸ್ಟಾದ ವಿಶೇಷ “ಸ್ಟಾರಿಂಗ್ ನೌ” ಸಂಗ್ರಹದಿಂದ ವಾರದ ಹೊಸ ಫ್ಯಾಷನ್ ಡ್ರಾಪ್ಸ್ ಒಳಗೊಂಡಿದೆ.
ಈ ಮಳಿಗೆಯು ಸಮಕಾಲೀನ ಮತ್ತು ತಂತ್ರಜ್ಞಾನ-ಸನ್ನದ್ಧ ಖರೀದಿ ಅನುಭವವನ್ನು ಅನುಕೂಲಕರ ಟೆಕ್ ಟಚ್ ಪಾಯಿಂಟ್‌ಗಳನ್ನು ನೀಡುತ್ತಿದ್ದು ಅದರಲ್ಲಿ ತಡೆರಹಿತ ಮಾಹಿತಿ ಲಭ್ಯತೆಗೆ ಕ್ಯೂಆರ್ ಕೋಡ್‌ಗಳು, ತ್ವರಿತ ವಹಿವಾಟಿಗೆ ಸೆಲ್ಫ್-ಚೆಕೌಟ್ ಕೌಂಟರ್‌ಗಳು ಮತ್ತು ಡಿವೈಸ್‌ಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿದೆ.
ಕೈಗೆಟುಕುವ ಮತ್ತು ಟ್ರೆಂಡಿ ಫ್ಯಾಷನ್ ನೊಂದಿಗೆ ಯುಸ್ಟಾ ಸಮುದಾಯಕ್ಕೆ ಹಿಂದಕ್ಕೆ ನೀಡುವುದಕ್ಕೆ ಬದ್ಧವಾಗಿದೆ. ಈ ಮಳಿಗೆಯು ಗ್ರಾಹಕರಿಗೆ ಬಟ್ಟೆಗಳನ್ನು ದೇಣಿಗೆ ನೀಡಲು ನೆರವಾಗುತ್ತದೆ ಅದನ್ನು ಸಮುದಾಯ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಈ ಉಪಕ್ರಮವು ನೀಡುವ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ ಮತ್ತು ಪರಿಸರ ಸ್ನೇಹಿ ವಿಧಾನದಲ್ಲಿ ಬಳಸಬಲ್ಲ ಉಡುಪುಗಳ ಜೀವಿತಾವಧಿ ಹೆಚ್ಚಿಸುತ್ತದೆ.
ಗ್ರಾಹಕರು ಯುಸ್ಟಾದಿಂದ ಹೆಚ್ಚು ಅಪ್ಡೇಟ್‌ಗಳಿಗೆ ಇನ್ಸ್ ಟಾಗ್ರಾಂ ಹ್ಯಾಂಡಲ್ @youstafashion ಅನುಸರಿಸಿ. ಯುಸ್ಟಾ ಫ್ಯಾಷನ್ ಸಂಗ್ರಹವನ್ನು ವಿಜಯಪುರದ ಮಳಿಗೆಯನ್ನು ಕಾಣಬಹುದು ಮತ್ತು ಅಜಿಯೊ ಮತ್ತು ಜಿಯೊಮಾರ್ಟ್ ಪ್ಲಾಟ್‌ಫಾರಂಗಳಲ್ಲಿ ಆನ್ಲೈನ್‌ನಲ್ಲಿ ಕೂಡಾ ಖರೀದಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Related Posts
Add A Comment