ಚಡಚಣ: ಸಮೀಪದ ಗಡಿನಾಡಿನ ಶಿರಾಡೋಣ ಗ್ರಾಮವು ಹಾಲುಮತ ಸುಕ್ಷೇತ್ರವೆಂದು ಪ್ರಸಿದ್ಧವಾಗಿದ್ದು, ಪ್ರತಿವರ್ಷ ದೀಪಾವಳಿಯಂದು ನಡೆವ ಜಾತ್ರೆಯಲ್ಲಿ ಭೇಟಿ ಕಾರ್ಯಕ್ರಮವು ಜರುಗುವುದು.
ಬೀರಲಿಂಗೇಶ್ವರನ ಮೂಲ ಸ್ಥಾನವಾದ ಶಿರಾಡೋಣದಲ್ಲಿ ಬೀರಲಿಂಗೇಶ್ವರ ಮತ್ತು ಶೀಲವಂತಿ ಹಾಗೂ ಹುಲಜಂತಿಯ ಮಾಳಿಂಗರಾಯ ದೇವರ ಮತ್ತು ಹುನ್ನೂರ ಬೀರಣ್ಣದೇವರ ಭೇಟಿ ಕಾರ್ಯಕ್ರಮವು ಶನಿವಾರದಂದು ಜರುಗಿತು.
ಶನಿವಾರದ ನಸುಕಿನ ಜಾವ ೫ ಗಂಟೆಗೆ ಬೀರಲಿಂಗೇಶ್ವರ ಹಾಗೂ ಶೀಲದೇವಿ ದೇವರುಗಳಿಗೆ ಪೂಜಾರಿಯವರಿಂದ ಮಹಾಪೂಜೆ ಜರುಗಿತು. ನಂತರ ಭಕ್ತರಿಂದ ನೈವೇದ್ಯ ಕಾರ್ಯಕ್ರಮ ಹಾಗೂ ಭಕ್ತರಿಂದ ಧೀರ್ಘದಂಡ ನಮಸ್ಕಾರವನ್ನು ಹಾಕಿ ಭಕ್ತರು ಹರಕೆ ತೀರಿಸಿದರು. ನಂತರ ವಾಲಿಬಾಲ್ ಪಂದ್ಯಾಟಗಳು ಜರುಗಿದವು.
ಸಾಯಂಕಾಲ ೫ ಗಂಟೆಗೆ ವಿವಿಧ ವಾದ್ಯ ವೈಭವಗಳೊಂದಿಗೆ ದೇವರುಗಳ ಪಲ್ಲಕ್ಕಿಗಳ ಮೆರವಣಿಗೆಯೊಂದಿಗೆ ಬೀರಲಿಂಗೇಶ್ವರ, ಶೀಲವಂತಿದೇವಿ, ಹುಲಜಂತಿ ಮಾಳಿಂಗರಾಯ, ಹುನ್ನೂರಿನ ಬೀರಣ್ಣ ದೇವರ ಪಲ್ಲಕ್ಕಿಗಳ ಭವ್ಯ ಭಂಡಾರದೊಂದಿಗೆ ಭೇಟಿ ಕಾರ್ಯಕ್ರಮ ಜರುಗಿತು.
ಈ ವೇಳೆಯಲ್ಲಿ ಭಕ್ತಾದಿಗಳು ಭಂಡಾರ, ಉಣ್ಣೆ, ಉತ್ತತ್ತಿ ಹಾರಿಸಿ ತಮ್ಮ ಹರಕೆ ತೀರಿಸಿದರು. ಭೇಟಿಯ ನಂತರ ಮಾರಾಯರುಗಳಿಂದ ನುಡಿಮುತ್ತುಗಳು ಜರುಗಿದವು. ಇದನ್ನು ನೋಡಲು ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ಸಹಸ್ರಾರು ಭಕ್ತರಿದ್ದರು.
Related Posts
Add A Comment