ಸಿಂದಗಿ: ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿರುವ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರದುರ್ಗವೂ ಒಂದು ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.
ಪಟ್ಟಣದ ಆಡಳಿತ ಸೌಧದಲ್ಲಿ ಹಮ್ಮಿಕೊಂಡ ವೀರ ವನಿತೆ ಒಬವ್ವ ಜಯಂತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಎಂದಾ ಕ್ಷಣ ನೆನಪಾಗುವುದೇ ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದ ವೀರವನಿತೆ ಒನಕೆ ಓಬವ್ವ. ಆಕೆಯ ಸಾಹಸದ ಕತೆ ಎಂದಿಗೂ ಅಜರಾಮರ. ಅಂತಹ ಧೀರ ಮಹಿಳೆ ಜನಿಸಿದ ನಾಡಿನಲ್ಲಿ ನಾವಿರುವುದು ಬಹಳ ಹೆಮ್ಮೆಯ ವಿಚಾರ ಎಂದರು.
ಈ ವೇಳೆ ಜಿ.ಎಸ್.ರೋಡಗಿ, ಕಂದಾಯ ನಿರೀಕ್ಷಕ ಆಯ್.ಎ ಮಕಾಂದಾರ, ಮಲ್ಲಿಕಾರ್ಜುನ ಮಾಲಗಾರ, ಜಗದೀಶ ಶಹಾಪೂರ, ನಿಖಿಲಅಹ್ಮದ್ ಖಾನಾಪುರ, ನಾಗಮ್ಮ ಸಾಲಿ, ದಾನಮ್ಮ ಹೂಗಾರ, ಹೀನಾಕೌಸರ ಮಂದೇವಾಲಿ, ಸಮೀರ ಮುಜಾವರ, ಸ್ನೇಹಾ ಕೊಪ್ಪ, ವಿಜಯಲಕ್ಷ್ಮಿ ಶಹಾಪೂರ, ಭೀಮಾಶಂಕರ ಕರಿಮುಂಗಿ, ಮಂಜುಳಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Related Posts
Add A Comment