Author: editor.udayarashmi@gmail.com

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಶತಮಾನೋತ್ಸವ ಭವನ ಉದ್ಘಾಟನೆ | ಸಚಿವ ಶಿವಾನಂದ ಪಾಟೀಲ ಸುದ್ದಿಗೋಷ್ಠಿ ವಿಜಯಪುರ: ಅಖಿಲ ಭಾರತ ಸಹಕಾರ ಸಪ್ತಾಹದ ೭೦ನೇ ಸಮಾರೋಪ ಸಮಾರಂಭ ಹಾಗೂ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಶತಮಾನೋತ್ಸವ ಭವನ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಸಹಕಾರ ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದು, ಸಮಾರಂಭದ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರೂ ಆದ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಹೇಳಿದರು.ನಗರದ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನವೆಂಬರ್ ೨೦ ರಂದು ನಡೆಯು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಭಾಗವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲ ಜಿಲ್ಲೆಯ ಡಿಸಿಸಿ ಸಂಘಗಳ ಸದಸ್ಯರು, ವಿವಿಧ ಸಹಕಾರಿ ಸಂಘಗಳ ಸಹಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ವೈಯಕ್ತಿಕವಾಗಿ ಮನವಿ…

Read More

ಮುದ್ದೇಬಿಹಾಳ: ಪಟ್ಟಣದ ಹಳೆಯ ಕಾಯಿಪಲ್ಲೆ ಮಾರುಕಟ್ಟೆಯಲ್ಲಿರುವ ಖಾಸ್ಗತೇಶ್ವರ ಮಠದಲ್ಲಿ ನ.೧೮ ರಿಂದ ನ.೩೦ ರವರೆಗೆ ಕಾರ್ತಿಕ ಮಾಸದ ಪ್ರಯುಕ್ತ ಪ್ರತಿದಿನ ಸಂಜೆ ೬-೩೦ ರಿಂದ ೮-೩೦ ರವರೆಗೆ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಸಾಧನಾ ಮಹಿಳಾ ಒಕ್ಕೂಟ, ಅಕ್ಕನ ಬಳಗ ಹಾಗೂ ಯಶಸ್ವಿನಿ ಸಾಮಾಜಿಕ ಮಹಿಳಾ ಸಂಘ ಕುಂಟೋಜಿ ಇವರ ಸಹಯೋಗದೊಂದಿಗೆ ಇಂಗಳೇಶ್ವರ ವಚನ ಶಿಲಾ ಮಂಟಪದ ಮ.ನಿ.ಪ್ರ ಚೆನ್ನಬಸವ ಮಹಾಸ್ವಾಮಿಗಳು ಪ್ರವಚನ ನಡೆಸಿಕೊಡುವರು. ಬಾಲ ಶಿವಯೋಗಿ ಸಿದ್ದಲಿಂಗದೇವರು ದಿವ್ಯ ಸಾನಿಧ್ಯ ವಹಿಸಲಿದ್ದು, ವೇ.ಮೂ ಸಂಗಯ್ಯ ವಿರಕ್ತಮಠ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಮಠದ ಎಲ್ಲ ಸದ್ಭಕ್ತರು ಪ್ರತಿದಿನ ಪ್ರವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಡಬಲ್ ಡಿಜಿಟ್ ಸಹ ಕ್ರಾಸ್ ಮಾಡುವುದಿಲ್ಲ. ಒಂದಿಬ್ಬರು ಆಯ್ಕೆಯಾಗಬಹುದು ಅಷ್ಟೇ. ಜನರಿಗೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಸಂಪೂರ್ಣ ಕಡಿಮೆಯಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮಲು ಭವಿಷ್ಯ ನುಡಿದರು.ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ವಿಜಯಪುರ ಕಾರ್ಯಕರ್ತರೊಡನೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಜನರಿಗೆ ಕಾಂಗ್ರೆಸ್ ಮೋಸದ ಬಗ್ಗೆ ಅರಿವಾಗಿದೆ ಎಂದರು.ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಧೃಡಸಂಕಲ್ಪ ಮಾಡಬೇಕು, ಇದು ಕೇವಲ ಒಬ್ಬರಿಂದ ಆಗುವ ಕೆಲಸವಲ್ಲ, ಇದೊಂದು ಸಾಮೂಹಿಕ ಪ್ರಯತ್ನ, ಎಲ್ಲ ಕಾರ್ಯಕರ್ತರು ಹೊಸ ಹುಮ್ಮಸ್ಸಿನಿಂದ ದುಡಿಯಬೇಕು. ಕರ್ನಾಟಕ ರಾಜ್ಯದಿಂದ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವ ಮೂಲಕ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.ಪ್ರಸ್ತುತ ಸಂಸದರಾಗಿರುವ ರಮೇಶ ಜಿಗಜಿಣಗಿ ಅವರು ಸಹ ಹಿರಿಯ ರಾಜಕೀಯ ಧುರೀಣರು, ಲಕ್ಷಾಂತರ ಕಾರ್ಯಕರ್ತರ ಪ್ರೀತಿಯನ್ನು ಸಂಪಾದಿಸಿದ್ದಾರೆ…

Read More

ವಿಜಯಪುರ: ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 17-11-2023 ಮುಂಜಾನೆ/9,40 ಗಂಟೆಗೆ ವಿವಿಧ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಡಿ’ ಗ್ರುಪ್ ದ ನೌಕರರು ದೀಪಾವಳಿಯಂದು ಸಂಸ್ಥೆಯು ಹಬ್ಬದ ಪ್ರಯುಕ್ತ ಬೋನಸ್ ನೀಡಿದ ಕಾರಣ ಪ್ರೀತಿಯ ದ್ಯೋತಕವಾಗಿ ಅಭಿಮಾನದಿಂದ ಸಂಸ್ಥೆಯ ಅಧ್ಯಕ್ಷ ರಾಜೇಶ್ ‘ಡಿ’ ದರಬಾರ, ಉಪಾಧ್ಯಕ್ಷ ಕೆ.ಜಿ. ದೇಶಪಾಂಡೆ ಹಾಗೂ ಆಡಳಿತ ಮಂಡಳಿಯ ಹಿರಿಯ ಸದಸ್ಯ ಡಿ.ಸಿ. ದರಬಾರ ಅವರನ್ನು ಸಂಸ್ಥೆಯ ಸಮನ್ವಯ ಅಧಿಕಾರಿ ಡಾ. ವಿ.ಬಿ ಗ್ರಾಮ ಪುರೋಹಿತ ಹಾಗೂ ‌’ಡಿ’ ಗ್ರುಪ್ ನೌಕರರು ಸಂತಸದಿಂದ ಗೌರವಾನ್ವಿತರನ್ನು ಸನ್ಮಾನಿಸಿದರು.ಬನಸಿಲಾಲ ವಿಠ್ಠಲದಾಸ ದರಬಾರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಚ್ ಮಣ್ಣೂರ, ಡಿ.ಎನ್ ದರಬಾರ ಬಾಲಕಿಯರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಡಿ.ವಿ. ಚೌಧರಿ, ಪಾಂಡುರಂಗ ಜಿ ರೊಟ್ಟಿ, ಅನಂತ ದೇಶಪಾಂಡೆ, ಮುಖ್ಯೋಪಾಧ್ಯಾಯ ರಮೇಶ್ ಕೋಟ್ಯಾಳ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Read More

ನಿಡಗುಂದಿ: ಕನ್ನಡ ಪುಸ್ತಕ ಪರಿಷತ್ತು ತನ್ನ ೨೫ನೆಯ ಬೆಳ್ಳಿ ಸಂಭ್ರಮ ಹಬ್ಬದ ನಿಮಿತ್ತವಾಗಿಐವರು ಸಾಧಕರಿಗೆ “ಬೆಳ್ಳಿ ಸಂಭ್ರಮ-೨೦೨೨”ರ ಗೌರವಕ್ಕೆ ಆಯ್ಕೆ ಮಾಡಿದೆ.ಬಾಗಲಕೋಟೆಯ ಸೋಮಲಿಂಗ ಗೆಣ್ಣೂರ (ಆಡಳಿತ), ಬೆಂಗಳೂರಿನ ಅಬೂಬಕರ ಮುಜಾವರ (ಸಂಕೀರ್ಣ), ವಿಜಯಪುರದ ಶರಣು ಸಬರದ (ಸಾಮಾಜಿಕ), ಬೀಳಗಿಯ ಬಾಳನಗೌಡ ಪಾಟೀಲ (ಜಾನಪದ) ಮತ್ತು ಆಲಮೇಲದ ಶ್ರೀಮತಿ ವಿಜಯಲಕ್ಷ್ಮಿ ರ. ಕತ್ತಿ (ಪ್ರಕಾಶನ) ಅವರನ್ನು ಆಯ್ಕೆ ಮಾಡಲಾಗಿದೆ.ಗೌರವವು ಅವರ ಒಟ್ಟು ಸಾಂಸ್ಕೃತಿಕ ಚಟುವಟಿಕೆಗೆ ಆಗಿದ್ದು, ಸ್ಮರಣಿಕೆ, ಪ್ರಮಾಣ ಪತ್ರ, ಫಲಪುಷ್ಪಗಳನ್ನೊಳಗೊಂಡಿರುತ್ತದೆ.ನಿಡಗುಂದಿ ತಾಲ್ಲೂಕಿನ ಆಲಮಟ್ಟಿಯ ಹರ್ಡೇಕರ ಮಂಜಪ್ಪ ಸಭಾಭವನದಲ್ಲಿ ದಿನಾಂಕ ೨೩- ೧೧-೨೦೨೩ರಂದು ನಡೆವ ಕನ್ನಡ ಪುಸ್ತಕ ಪರಿಷತ್ತಿನ ಸಮ್ಮೇಳನದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನಾಡೋಜ, ಡಾ.ಮ.ನು ಬಳಿಗಾರ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಕೆ.ತುಳಸಿಮಾಲಾ ಪ್ರಶಸ್ತಿಗಳನ್ನು ಪ್ರದಾನ ಮಾಡುವರೆಂದು ಪರಿಷತ್ತಿನ ಸಂಚಾಲಕ ಮೋಹನ ಕಟ್ಟಿಮನಿ ಹಾಗೂ ಪ್ರದಾನ ಕಾರ್ಯದರ್ಶಿ ಶಂಕರ ಬೈಚಬಾಳ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ನಗರದಲ್ಲಿ ಡಿಸೆಂಬರ್ 24 ರಂದು ನಡೆಯಲಿರುವ ವೃಕ್ಷತ್ಥಾನ್ ಹೆರಿಟೇಜ್ ರನ್-2023ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿದೇಶಗಳಿಂದಲೂ ಓಟಗಾರರು ಹೆಸರು ನೋಂದಾಯಿಸಿದ್ದಾರೆ. ಈ ಮೂಲಕ ಈ ಬಾರಿಯ ವೃಕ್ಷೋತ್ಥಾನ್ ಗೆ ಭರ್ಜರಿ ಬೆಂಬಲ ವ್ಯಕ್ತವಾಗುತ್ತಿದೆ.ಶ್ರಮದ ಫಲವಾಗಿ ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಬಗ್ಗೆ ಜಾಗೃತಿ ಹಾಗೂ ಸಂರಕ್ಷಣೆ ಸಂದೇಶವನ್ನು ಹೊಂದಿರುವ ಮತ್ತು ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಗೌರವ ಸಲ್ಲಿಸುವ ಸದುದ್ದೇಶದಿಂದ ಈ ಓಟ ಆಯೋಜಿಸಲಾಗಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಈ ಓಟದ ಆಯೋಜನೆಯ ರೂವಾರಿಯಾಗಿದ್ದು, ಈಗಾಗಲೇ ವಿಜಯಪುರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಮತ್ತು ನಾನಾ ಹೊರ ರಾಜ್ಯಗಳಿಂದಲೂ ಮ್ಯಾರಾಥಾನ್ ಓಟಗಾರರು ಹೆಸರು ನೋಂದಾಯಿಸುತ್ತಿದ್ದಾರೆ.ಆನಲೈನ್ ಮೂಲಕ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದ್ದು, ಈಗ ಅಮೇರಿಕದಲ್ಲಿ ನಾನಾ ಉದ್ಯಮಗಳಲ್ಲಿ ಉನ್ನತ ಸ್ಥಾನದಲ್ಲಿರುವ ಇಬ್ಬರು ಅಧಿಕಾರಿಗಳು ಈ ಹೆರಿಟೇಜ್ ರನ್ ನಲ್ಲಿ ಪಾಲ್ಗೋಳ್ಳಲು ಹೆಸರು ನೋಂದಾಯಿಸಿದ್ದಾರೆ.…

Read More

ಅಂತರವಲಯ ಮಟ್ಟದ ಪುರುಷ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾವಳಿ ಉದ್ಘಾಟನೆ ಸಿಂದಗಿ: ಕುಸ್ತಿ ಒಂದು ಗ್ರಾಮೀಣ ಭಾಗದ ಕ್ರೀಡೆಯಾದರೂ ಅದು ಇಂದು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಅವರು ಪಟ್ಟಣದ ಮಾಂಗಲ್ಯ ಭವನದಲ್ಲಿ ಶುಕ್ರವಾರ ಸಿಎಂ ಮನಗೂಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಏಕದಿನದ ಅಂತರವಲಯ ಮಟ್ಟದ ಪುರುಷ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.ಸಿಂದಗಿ ನಗರ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಹೆಸರನ್ನು ಪಡೆದ ಕ್ಷೇತ್ರವಾಗಿದೆ. ವಿಶ್ವವಿದ್ಯಾಲಯ ಇಲ್ಲಿ ರಾಷ್ಟ್ರಮಟ್ಟದ ಯಾವುದೇ ಕ್ರೀಡೆಗಳನ್ನು ಹಮ್ಮಿಕೊಂಡರೂ ನಾನು ಅದಕ್ಕೆ ತನು-ಮನದಿಂದ ಸೇವೆ ಮಾಡಲು ಸಿದ್ಧನಾಗಿದ್ದೇನೆ ಎಂದರು.ಗ್ರಾಮೀಣ ಭಾಗದ ಕ್ರೀಡೆಗಳು ನಶಿಸಿ ಹೋಗಬಾರದು. ಪಾರಂಪರಿಕವಾಗಿ ಅವೆಲ್ಲ ಮುಂದುವರೆಸಿಕೊಂಡು ಹೋಗಬೇಕು. ಆ ನಿಟ್ಟಿನಲ್ಲಿ ಸಿಂದಗಿಯಲ್ಲಿ ಗರಡಿಮನೆ ನಿರ್ಮಾಣಕ್ಕಾಗಿ ಅಂದಾಜು 2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಕನಸನ್ನ ಹೊತ್ತು ಕೊಂಡಿದ್ದೇನೆ.…

Read More

ವಿಶ್ವಪ್ರಕಾಶ ಮಲಗೊಂಡ ನಟಿಸಿ ನಿರ್ದೇಶಿಸಿರುವ ಕನ್ನಡ ಚಿತ್ರ ವಿಜಯಪುರ: ಈಗಾಗಲೇ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ತಯಾರಾಗುತ್ತಿರುವ “ತುಷಾರ್” ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ‘ನಾ ನಿನ್ನ ಕಾಯೋ ಕಾವಲುಗಾರ’ ಎಂಬ ಹಾಡಿಗೆ ಪವನಕುಮಾರ ಬೂದಿಹಾಳ ಸಾಹಿತ್ಯ ಬರೆದಿದ್ದು, ಮಂಜು ಕವಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಹೊಸ ಪ್ರತಿಭೆ ಆರ್ ಜೆ ನವೀನ್ ಧ್ವನಿಯಾಗಿದ್ದಾರೆ.ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರತಂಡ ಈ ಹಾಡನ್ನು Charvi Music YouTube Channel ನಲ್ಲಿ ಬಿಡುಗಡೆ ಮಾಡಿದೆ.ಇದೇ ವೇಳೆ ಮಾತನಾಡಿದ ತುಷಾರ್ ಚಿತ್ರದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ‘ಈಗಾಗಲೇ ತುಷಾರ್ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಬಿರುಸಿನಿಂದ ಸಾಗಿದೆ.ತುಂಬಾ ಕನಸ್ಸಿಟ್ಟುಕೊಂಡು ಮಾಡಿರುವ ಈ ಸಿನಿಮಾ ದೀಪಾವಳಿ ಹಬ್ಬದ ಹಿನ್ನೆಲೆ ಈ ಹಾಡು ಬಿಡುಗಡೆ ಮಾಡಿದ್ದೆವೆ. ಈ ಹಾಡಿನ ಚಿತ್ರೀಕರಣ ಉತ್ತರ ಕರ್ನಾಟಕ ಹಾಗೂ ಬೆಂಗಳೂರಿನ ಸುತ್ತಮುತ್ತ ನಡೆದಿದೆ ಎಂದರು.ತುಷಾರ್ ಸಿನಿಮಾಕ್ಕೆ ವಿಶ್ವಪ್ರಕಾಶ ಮಲಗೊಂಡ ನಟನೆಯ ಜೊತೆಗೆ…

Read More

ವಿಜಯೇಂದ್ರ ನೇಮಕಕ್ಕೆ ಅಸಮಾಧಾನ | ಹೈಕಮಾಂಡ್‌ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ನಿರ್ಧಾರ | ಶೀಘ್ರವೇ ಬೆಂಬಲಿಗರ ಸಭೆ ಬೆಂಗಳೂರು: ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನ ಬಿಜೆಪಿ ಹೈಕಮಾಂಡ್‌ ನೇಮಕ ಮಾಡಿದ್ದು, ಬಿಜೆಪಿ ಹಿರಿಯ ನಾಯಕ ವಿ ಸೋಮಣ್ಣ ಅವರ ಅಸಮಾಧಾನಕ್ಕೆ ಕಾರಣವಾಗಿದ್ದು, ಪಕ್ಷ ಬಿಡಲು ವಿ ಸೋಮಣ್ಣ ಮುಂದಾಗಿದ್ದಾರೆ.ಹೌದು, ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ನಾಯಕ ವಿ.ಸೋಮಣ್ಣ ಅವರು ಸದ್ಯವೇ ಗೋವಿಂದರಾಜನಗರ ಕ್ಷೇತ್ರದ ತಮ್ಮ ಬೆಂಬಲಿಗರ ಸಭೆ ಕರೆದು ಮುಂದಿನ ನಡೆಯನ್ನು ತೀರ್ಮಾನಿಸಲಿದ್ದಾರೆ ಎಂದು ಹೇಳಲಾಗಿದೆ.ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡ ವಿ ಸೋಮಣ್ಣ ಅವರು, ನಮ್ಮ ಪಕ್ಷದವರೇ ನನ್ನ ಸೋಲಿಸಲು ಕೆಲಸ ಮಾಡಿದ್ದಾರೆ ಎಂದು ಬಹಿರಂಗವಾಗಿ ಅಸಮಾಧಾನವನ್ನ ಹೊರಹಾಕಿದ್ರು, ಇದೀಗ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿರುವುದು ಇನ್ನಷ್ಟು ಬೇಸರಕ್ಕೆ ಕಾರಣವಾಗಿದೆ. ಅಲ್ಲದೇ ಬಿಜೆಪಿ ಕೆಲ ನಾಯಕರೊಂದಿಗೆ ಮುನಿಸಿಕೊಂಡಿರುವ ವಿ ಸೋಮಣ್ಣ ಬಿಜೆಪಿ…

Read More