ವಿಜಯಪುರ: ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 17-11-2023 ಮುಂಜಾನೆ/9,40 ಗಂಟೆಗೆ ವಿವಿಧ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಡಿ’ ಗ್ರುಪ್ ದ ನೌಕರರು ದೀಪಾವಳಿಯಂದು ಸಂಸ್ಥೆಯು ಹಬ್ಬದ ಪ್ರಯುಕ್ತ ಬೋನಸ್ ನೀಡಿದ ಕಾರಣ ಪ್ರೀತಿಯ ದ್ಯೋತಕವಾಗಿ ಅಭಿಮಾನದಿಂದ ಸಂಸ್ಥೆಯ ಅಧ್ಯಕ್ಷ ರಾಜೇಶ್ ‘ಡಿ’ ದರಬಾರ, ಉಪಾಧ್ಯಕ್ಷ ಕೆ.ಜಿ. ದೇಶಪಾಂಡೆ ಹಾಗೂ ಆಡಳಿತ ಮಂಡಳಿಯ ಹಿರಿಯ ಸದಸ್ಯ ಡಿ.ಸಿ. ದರಬಾರ ಅವರನ್ನು ಸಂಸ್ಥೆಯ ಸಮನ್ವಯ ಅಧಿಕಾರಿ ಡಾ. ವಿ.ಬಿ ಗ್ರಾಮ ಪುರೋಹಿತ ಹಾಗೂ ’ಡಿ’ ಗ್ರುಪ್ ನೌಕರರು ಸಂತಸದಿಂದ ಗೌರವಾನ್ವಿತರನ್ನು ಸನ್ಮಾನಿಸಿದರು.
ಬನಸಿಲಾಲ ವಿಠ್ಠಲದಾಸ ದರಬಾರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಚ್ ಮಣ್ಣೂರ, ಡಿ.ಎನ್ ದರಬಾರ ಬಾಲಕಿಯರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಡಿ.ವಿ. ಚೌಧರಿ, ಪಾಂಡುರಂಗ ಜಿ ರೊಟ್ಟಿ, ಅನಂತ ದೇಶಪಾಂಡೆ, ಮುಖ್ಯೋಪಾಧ್ಯಾಯ ರಮೇಶ್ ಕೋಟ್ಯಾಳ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Related Posts
Add A Comment