ಮುದ್ದೇಬಿಹಾಳ: ಪಟ್ಟಣದ ಹಳೆಯ ಕಾಯಿಪಲ್ಲೆ ಮಾರುಕಟ್ಟೆಯಲ್ಲಿರುವ ಖಾಸ್ಗತೇಶ್ವರ ಮಠದಲ್ಲಿ ನ.೧೮ ರಿಂದ ನ.೩೦ ರವರೆಗೆ ಕಾರ್ತಿಕ ಮಾಸದ ಪ್ರಯುಕ್ತ ಪ್ರತಿದಿನ ಸಂಜೆ ೬-೩೦ ರಿಂದ ೮-೩೦ ರವರೆಗೆ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಾಧನಾ ಮಹಿಳಾ ಒಕ್ಕೂಟ, ಅಕ್ಕನ ಬಳಗ ಹಾಗೂ ಯಶಸ್ವಿನಿ ಸಾಮಾಜಿಕ ಮಹಿಳಾ ಸಂಘ ಕುಂಟೋಜಿ ಇವರ ಸಹಯೋಗದೊಂದಿಗೆ ಇಂಗಳೇಶ್ವರ ವಚನ ಶಿಲಾ ಮಂಟಪದ ಮ.ನಿ.ಪ್ರ ಚೆನ್ನಬಸವ ಮಹಾಸ್ವಾಮಿಗಳು ಪ್ರವಚನ ನಡೆಸಿಕೊಡುವರು. ಬಾಲ ಶಿವಯೋಗಿ ಸಿದ್ದಲಿಂಗದೇವರು ದಿವ್ಯ ಸಾನಿಧ್ಯ ವಹಿಸಲಿದ್ದು, ವೇ.ಮೂ ಸಂಗಯ್ಯ ವಿರಕ್ತಮಠ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಮಠದ ಎಲ್ಲ ಸದ್ಭಕ್ತರು ಪ್ರತಿದಿನ ಪ್ರವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment