ನಿಡಗುಂದಿ: ಕನ್ನಡ ಪುಸ್ತಕ ಪರಿಷತ್ತು ತನ್ನ ೨೫ನೆಯ ಬೆಳ್ಳಿ ಸಂಭ್ರಮ ಹಬ್ಬದ ನಿಮಿತ್ತವಾಗಿ
ಐವರು ಸಾಧಕರಿಗೆ “ಬೆಳ್ಳಿ ಸಂಭ್ರಮ-೨೦೨೨”ರ ಗೌರವಕ್ಕೆ ಆಯ್ಕೆ ಮಾಡಿದೆ.
ಬಾಗಲಕೋಟೆಯ ಸೋಮಲಿಂಗ ಗೆಣ್ಣೂರ (ಆಡಳಿತ), ಬೆಂಗಳೂರಿನ ಅಬೂಬಕರ ಮುಜಾವರ (ಸಂಕೀರ್ಣ), ವಿಜಯಪುರದ ಶರಣು ಸಬರದ (ಸಾಮಾಜಿಕ), ಬೀಳಗಿಯ ಬಾಳನಗೌಡ ಪಾಟೀಲ (ಜಾನಪದ) ಮತ್ತು ಆಲಮೇಲದ ಶ್ರೀಮತಿ ವಿಜಯಲಕ್ಷ್ಮಿ ರ. ಕತ್ತಿ (ಪ್ರಕಾಶನ) ಅವರನ್ನು ಆಯ್ಕೆ ಮಾಡಲಾಗಿದೆ.
ಗೌರವವು ಅವರ ಒಟ್ಟು ಸಾಂಸ್ಕೃತಿಕ ಚಟುವಟಿಕೆಗೆ ಆಗಿದ್ದು, ಸ್ಮರಣಿಕೆ, ಪ್ರಮಾಣ ಪತ್ರ, ಫಲಪುಷ್ಪಗಳನ್ನೊಳಗೊಂಡಿರುತ್ತದೆ.
ನಿಡಗುಂದಿ ತಾಲ್ಲೂಕಿನ ಆಲಮಟ್ಟಿಯ ಹರ್ಡೇಕರ ಮಂಜಪ್ಪ ಸಭಾಭವನದಲ್ಲಿ ದಿನಾಂಕ ೨೩- ೧೧-೨೦೨೩ರಂದು ನಡೆವ ಕನ್ನಡ ಪುಸ್ತಕ ಪರಿಷತ್ತಿನ ಸಮ್ಮೇಳನದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನಾಡೋಜ, ಡಾ.ಮ.ನು ಬಳಿಗಾರ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಕೆ.ತುಳಸಿಮಾಲಾ ಪ್ರಶಸ್ತಿಗಳನ್ನು ಪ್ರದಾನ ಮಾಡುವರೆಂದು ಪರಿಷತ್ತಿನ ಸಂಚಾಲಕ ಮೋಹನ ಕಟ್ಟಿಮನಿ ಹಾಗೂ ಪ್ರದಾನ ಕಾರ್ಯದರ್ಶಿ ಶಂಕರ ಬೈಚಬಾಳ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment