ವಿಶ್ವಪ್ರಕಾಶ ಮಲಗೊಂಡ ನಟಿಸಿ ನಿರ್ದೇಶಿಸಿರುವ ಕನ್ನಡ ಚಿತ್ರ
ವಿಜಯಪುರ: ಈಗಾಗಲೇ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ತಯಾರಾಗುತ್ತಿರುವ “ತುಷಾರ್” ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ‘ನಾ ನಿನ್ನ ಕಾಯೋ ಕಾವಲುಗಾರ’ ಎಂಬ ಹಾಡಿಗೆ ಪವನಕುಮಾರ ಬೂದಿಹಾಳ ಸಾಹಿತ್ಯ ಬರೆದಿದ್ದು, ಮಂಜು ಕವಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಹೊಸ ಪ್ರತಿಭೆ ಆರ್ ಜೆ ನವೀನ್ ಧ್ವನಿಯಾಗಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರತಂಡ ಈ ಹಾಡನ್ನು Charvi Music YouTube Channel ನಲ್ಲಿ ಬಿಡುಗಡೆ ಮಾಡಿದೆ.
ಇದೇ ವೇಳೆ ಮಾತನಾಡಿದ ತುಷಾರ್ ಚಿತ್ರದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ‘ಈಗಾಗಲೇ ತುಷಾರ್ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಬಿರುಸಿನಿಂದ ಸಾಗಿದೆ.
ತುಂಬಾ ಕನಸ್ಸಿಟ್ಟುಕೊಂಡು ಮಾಡಿರುವ ಈ ಸಿನಿಮಾ ದೀಪಾವಳಿ ಹಬ್ಬದ ಹಿನ್ನೆಲೆ ಈ ಹಾಡು ಬಿಡುಗಡೆ ಮಾಡಿದ್ದೆವೆ. ಈ ಹಾಡಿನ ಚಿತ್ರೀಕರಣ ಉತ್ತರ ಕರ್ನಾಟಕ ಹಾಗೂ ಬೆಂಗಳೂರಿನ ಸುತ್ತಮುತ್ತ ನಡೆದಿದೆ ಎಂದರು.
ತುಷಾರ್ ಸಿನಿಮಾಕ್ಕೆ ವಿಶ್ವಪ್ರಕಾಶ ಮಲಗೊಂಡ ನಟನೆಯ ಜೊತೆಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ಸಹಯೋಗದಲ್ಲಿ ಮಲಗೊಂಡ ಫಿಲಂ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದಾರೆ. ಇನ್ನು ಮಂಜುಕವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಾಹಿತ್ಯ ಸಂಭಾಷಣೆ ಪವನ್ ಕುಮಾರ್ ಬೂದಿಹಾಳ, ರವಿ ಕುಂಟೋಜಿ ಛಾಯಾಗ್ರಹಣ, ಚಂದು ಅವರ ಸಂಕಲನ, ಮಲಗೊಂಡ ಫಿಲಂ ಬ್ಯಾನರ್ ಅಡಿಯಲ್ಲಿ, ಸಹ ನಿರ್ದೇಶಕರಾಗಿ ಸುಧಾ ಅಣ್ಣಾಶೇಠ, ಉಮೇಶ್ ಕೆ ಎನ್ ಅವರ ಪಬ್ಲಿಸಿಟಿ ಡೀಸೈನ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವಿರೇಶ ಹಂಡಗಿ, ಹರೀಶ್ ಅರಸು. ಪೋಸ್ಟರ್ ಡಿಸೈನ್ ವಿಶ್ವ ಬಿರಾದಾರ, ಪ್ರಸಾದ್ ತೋಟದ, ತಂಡದಲ್ಲಿ ಪೃಥ್ವಿರಾಜ್ ನಾಯಕ,ಚಂದ್ರಕಾಂತ ಬೂದಿಹಾಳ, ಶ್ರೇಯಶ್ ದೇಶಪಾಂಡೆ, ಹೀಗೆ ದೊಡ್ಡ ತಾಂತ್ರಿಕ ಬಳಗ ಒಳಗೊಂಡಿದೆ ಚಿತ್ರತಂಡ.