Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಕನ್ನಡ ಸಾಹಿತ್ಯಕ್ಕೆ ಭವ್ಯವಾದ ಸಂಸ್ಕೃತಿ ಮತ್ತು ಪರಂಪರೆಯಿದೆ. ಕನ್ನಡ ಭಾಷೆಗೆ ಸಾವಿರಾರು ವರುಷಗಳ ಇತಿಹಾಸವಿದೆ ಎಂದು ಸಿ.ಎಂ.ಮನಗೂಳಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.ಬುಧವಾರದಂದು ಪಟ್ಟಣದ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶ್ರೀಮತಿ ಕಲ್ಲವ್ವ ರಂಗಪ್ಪ ಹೆಗ್ಗನದೊಡ್ಡಿ, ದತ್ತಿದಾನಿಗಳಾದ ಡಾ.ಎ.ಆರ್. ಹೆಗ್ಗನದೊಡ್ಡಿ ಹಾಗೂ ಶ್ರೀಮತಿ ಗೌರಮ್ಮ ಸಿದ್ರಾಮಪ್ಪ ವಾಡೇದ ದತ್ತಿ ದಾನಿಗಳಾದ ಮಕ್ಕಳ ಸಾಹಿತಿ ರಾಮಚಂದ್ರ ವಾಡೇದ ಅವರು ನೀಡಿದ ದತ್ತಿ ದಾನದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಲನಚಿತ್ರ, ಜಾನಪದ, ನಾಟಕ ಹಾಗೂ ಮೌಖಿಕ ಪರಂಪರೆಯಿಂದ ಬಂದಿರುವ ಗ್ರಾಮೀಣ ಪ್ರದೇಶದ ಸಂಸ್ಕೃತಿಯು ಕನ್ನಡ ಸಾಹಿತ್ಯ ಪರಿಷತ್ತನ್ನು ಉಳಿಸಿ ಬೆಳೆಸಿದ್ದಾರೆ. ಮೈಸೂರು ರಾಜಮನೆತನದ ಅರಸರು ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.ಪದ್ಮರಾಜ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕಿ ಹೇಮಾ ಹಿರೇಮಠ ಅವರು ಶಿಕ್ಷಣ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿ, ಸಮಾಜದಲ್ಲಿ ಭಾಷೆ ಹಾಗೂ ಸಾಹಿತ್ಯವನ್ನು ಬೆಳೆಸುವದು ಕೇವಲ ಸಾಹಿತಿಗಳ ಕಾಯಕವಲ್ಲ. ಮಕ್ಕಳಿಗೆ ಭಾಷೆಯನ್ನು ಬೋಧಿಸಲು…
ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಸದಸ್ಯರು ಹಾಗೂ ವಿಜಯಪುರದ ಆರ್.ಕೆ ಹಾಸ್ಪಿಟಲ್‌ನ ಸಿಬ್ಬಂದಿಗಳು ಸಂವಿದಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ಮಾಣ ದಿನದ ಅಂಗವಾಗಿ ಪಟ್ಟಣದ ಅಂಬೇಡ್ಕರ್ ವೃತದಲ್ಲಿನ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಗೌರವ ಸಮರ್ಪಣೆ ಮಾಡಿದರು. ಈ ವೇಳೆ ತಾಲೂಕು ಅದ್ಯಕ್ಷ ರಾಜಶೇಕರ ಮ್ಯಾಗೇರಿ, ಜಿಲ್ಲಾ ಮಹಿಳಾ ಅದ್ಯಕ್ಷೆ ಅಕ್ಷತಾ ಚಲವಾದಿ, ತಾಲೂಕು ಮಹಿಳಾದ್ಯಕ್ಷೆ ನೀಲಮ್ಮ ಚಲವಾದಿ, ಪ್ರಧಾನ ಕಾರ್ಯದರ್ಶಿ ಹಣಮಂತ ನಲವಡೆ, ಸದಸ್ಯರಾದ ರಾಜು ಬಳ್ಳೊಳ್ಳಿ, ಶರಣು ಸಾಲವಾಡಗಿ ಹಣಮಂತ ಕಲ್ಯಾಣಿ ಸೇರಿದಂತೆ ಇತರರು ಇದ್ದರು.
ನಿಡಗುಂದಿಯಲ್ಲಿ ’ಪ್ರೇರಣಾ-೨೦೨೩’ ಕಾರ್ಯಕ್ರಮದಲ್ಲಿ ಅಭಿಷೇಕ ಖ್ಯಾಡಿ ಅಭಿಮತ ನಿಡಗುಂದಿ: ಓದುವ ಪ್ರವೃತ್ತಿ ಬೆಳೆಸಿಕೊಂಡು, ಓದಿನ ಜತೆ ನಮ್ಮ ವೈಯಕ್ತಿಕ ಪ್ರವೃತ್ತಿಗಳಿಗೂ, ಮನೋರಂಜನೆಗೂ ಆದ್ಯತೆ ಎಷ್ಟು ನೀಡಬೇಕು? ಎಂಬುದನ್ನು ನಮ್ಮಷ್ಟಕ್ಕೆ ನಾವೇ ಅರಿತುಕೊಂಡು, ಅದೇ ರೀತಿ ಸಾಗಿದರೆ ಯಶಸ್ವಿ ಖಂಡಿತ ಸಾಧ್ಯ ಎಂದು ನೌಕಾಪಡೆಯ ಲೆಫ್ಟಿನಂಟ್ ಆಲಮಟ್ಟಿಯ ಅಭಿಷೇಕ ಖ್ಯಾಡಿ ಅಭಿಪ್ರಾಯಪಟ್ಟರು.ಪಟ್ಟಣದ ಜಿವಿವಿಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿಡಗುಂದಿ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಪ್ರೇರಣಾ-೨೦೨೩ ಕಾರ್ಯಕ್ರಮ ಅಂಗವಾಗಿ, ಎನ್ ಡಿಎ ಪರೀಕ್ಷೆಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.ಶಾಲಾ ಗ್ರಂಥಾಲಯದಲ್ಲಿ ಪುಸ್ತಕ ಓದುವ ಚಟ ಹೆಚ್ಚಿಸಿಕೊಳ್ಳಿ, ವಿದ್ಯಾರ್ಥಿಗಳಲ್ಲಿ ಈಗ ಮೊಬೈಲ್ ಹಾಗೂ ಸಾಮಾಜಿಕ ಜಾಲ ತಾಣದ ಬಳಕೆ ಹೆಚ್ಚಿದೆ. ಅದನ್ನೇ ಕಲಿಕೆಗಾಗಿ ಸದುಪಯೋಗ ಮಾಡಿಕೊಳ್ಳಬೇಕು, ಬುದ್ಧಿಶಕ್ತಿ ಹೆಚ್ಚಿಸುವ ಗೇಮ್ ಗಳನ್ನು ಆಡಬೇಕು, ಜ್ಞಾನ ಪಡೆಯುವ ಯೂಟ್ಯೂಬ್ ಚೆನಲ್ ಗಳನ್ನು ನೋಡಬೇಕು, ಒಮ್ಮೆಲೆ ಈಗಿರುವ ಪ್ರವೃತ್ತಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ, ಅದನ್ನು ಹಂತ ಹಂತವಾಗಿ…
ಮುದ್ದೇಬಿಹಾಳ: ಕೃಷಿ ಚಟುವಟಿಕೆಗೆ ರಸ್ತೆ ಬಂದ್ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಎಸ್.ಸಿದರೆಡ್ಡಿ ಮತ್ತು ತಾಲೂಕಿನ ನಾಗರಬೆಟ್ಟ ಗ್ರಾಮದ ಕೆಲ ರೈತರು ಮಂಗಳವಾರ ತಹಶೀಲ್ದಾರ ಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಮಾತನಾಡಿದ ಸಿದರೆಡ್ಡಿ, ನಾಗರಬೆಟ್ಟ ಗ್ರಾಮವು ಹೈದರಾಬಾದ ನಿಜಾಮರ ಕಾಲಘಟ್ಟದಲ್ಲಿದ್ದ ಕೊನೆಯ ಹಳ್ಳಿ. ಆಗಿನ ನಕ್ಷೆಯಲ್ಲಿ ರೈತರ ಜಮೀನುಗಳಿಗೆ ಸರಿಯಾದ ದಾರಿಗಳನ್ನು ಗುರುತಿಸಿಲ್ಲ. ಕೇವಲ ಒದು ಊರಿನಿಂದ ಮತ್ತೊಂದು ಊರಿಗೆ ತಲುಪುವ ರಸ್ತೆಗಳನ್ನು ಮಾತ್ರ ಗುರುತಿಸಿದ್ದು ಈ ರಸ್ತೆಗಳನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಶಾಶ್ವತವಾಗಿ ಬಂದ್ ಮಾಡಿರುತ್ತಾರೆ. ಸ್ವತಃ ನನ್ನ ದಾಯಾದಿಗಳೇ ನನ್ನ ಜಮೀನಿಗೆ ಹೋಗುವ ರಸ್ತೆಯನ್ನು ಕಳೆದ ಎರಡು ತಿಂಗಳಿನಿಂದ ಮುಳ್ಳು ಕಂಟಿಗಳನ್ನು ಹಚ್ಚಿ ಬಂದ್ ಮಾಡಿರುತ್ತಾರೆ. ಇದೇ ರೀತಿ ನಮ್ಮ ಊರಿನ ಹಲವಾರು ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಇದು ಇವತ್ತೇ ಕೊನೆಯಾಗುವಂತೆ ಕ್ರಮ ವಹಿಸಬೇಕು ಎಂದು ದೂರಿದರು.ಈ ವೇಳೆ ತಹಶೀಲ್ದಾರ ಬಲರಾಮ ಕಟ್ಟಿಮನಿ ಮಾತನಾಡಿ, ರಸ್ತೆಯ ವಿಷಯವಾಗಿ ನಿಮ್ಮೂರಿನ…
ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹೊಕ್ರಾಣಿ ಗ್ರಾಮಕ್ಕೆ ಸಂಬಂಧಿಸಿದ ಬಸವ ವಸತಿ ಯೋಜನೆಯಲ್ಲಿ ಮನೆಗಳನ್ನು ಹಂಚಿಕೆ ಮಾಡುವ ಕುರಿತು ಆಯ್ಕೆ ಮಾಡಿದ ಯಾದಿಯಲ್ಲಿ ಈಗಾಗಲೇ ಸ್ವಂತ ಮನೆಗಳನ್ನು ಹೊಂದಿದವರಿಗೆ ಪುನಃ ಆಯ್ಕೆ ಮಾಡಲಾಗಿದೆ. ಇದು ಅನಧಿಕೃತವಾಗಿದ್ದು ನಿಜವಾದ ಬಡವರಿಗೆ ಆಯ್ಕೆ ಮಾಡಬೇಕು ಎಂದು ಚನ್ನಪ್ಪ ಮಾದರ ಇಲ್ಲಿನ ಪ್ರಭಾರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.ಮನವಿ ಪ್ರತಿಯನ್ನು ಸುದ್ದಿಗಾರರಿಗೆ ಮುಟ್ಟಿಸಿದ ಅವರು, ಗ್ರಾಮ ಸಭೆಯಲ್ಲಿ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದು ಆಯ್ಕೆಯಾದ ಯಾದಿಯಲ್ಲಿ ಅವರನ್ನು ಕೈಬಿಟ್ಟಿದ್ದಾರೆ, ಕಾರಣ ಈ ಕೂಡಲೇ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೇ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯಪುರ: ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಅತಾಲಟ್ಟಿ ಗ್ರಾಮದ ಬಿಜೆಪಿಯ ಕಾರ್ಯಕರ್ತ ಮಹಾದೇವಪ್ಪನನ್ನು ಕರೆತಂದು ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಿ ಅವರ ಚಿಕಿತ್ಸೆಯ ವೆಚ್ಚವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರಿಸಿ ಮಾನವೀಯತೆ ಮೆರೆದಿದ್ದಾರೆ.ಈ ಕುರಿತು ಕೃತಜ್ಞತೆಯಿಂದ ಕಾರ್ಯಕರ್ತ ಮಹಾದೇವಪ್ಪ ಆಹೇರಿ ಪತ್ರಿಕೆಯೊಂದಿಗೆ ಮಾತನಾಡಿ, “ನಾನು ಶಾಸಕಬಸನಗೌಡರ ಬೆಂಬಲಿಗನಾಗಿ ಇಲ್ಲಿಯವರೆಗೂ ದುಡಿದಿದ್ದೇನೆ. ಬೆಂಬಲಿಗರನ್ನು ಕೇವಲ ಕೆಲಸಕ್ಕಾಗಿ ಮಾತ್ರ ಉಪಯೋಗಿಸುವ ಗುಣ ಗೌಡರಲ್ಲಿ ಇಲ್ಲ. ಅದಕ್ಕೆ ನಾನೇ ಸಾಕ್ಷಿ. ವಿಪರೀತ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ನನ್ನನ್ನು ಇಲ್ಲಿಗೆ ಕರೆತಂದು ಉಪಚಾರ ಮಾಡಿಸುತ್ತಿರುವುದು ಮತ್ತು ನನ್ನ ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತಗೊಳಿಸಿರುವ ಅವರ ಪ್ರೀತಿಗೆ ನಾನು ಏನು ಹೇಳಿದರು ಕಡಿಮೆಯೇ” ಎಂದು ಭಾವೋದ್ವೇಗದಿಂದ ಮಹಾದೇವಪ್ಪ ಹೇಳುವಾಗ ಅವರ ಕಣ್ಣಂಚು ಹಸಿಯಾಗಿತ್ತು.ಇವರ ಆರೋಗ್ಯದ ಕುರಿತು ಮಾಹಿತಿ ನೀಡಿದ ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ಅವರು, “ಸಧ್ಯಕ್ಕೆ ಮಹಾದೇವಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ಅಗತ್ಯತೆಯುಳ್ಳ ಎಲ್ಲ ರೀತಿಯ…
ಡಾ.ಅಂಬೇಡ್ಕರ ೬೭ನೇ ಮಹಾ ಪರಿನಿರ್ವಾಣ ಶೋಕ ಆಚರಿಸಿದ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ: ಜ್ಞಾನವನ್ನು ಹೊಂದದೇ ವಿಮೋಚನೆ ಹೊಂದಲು ಸಾಧ್ಯವಿಲ್ಲ. ಸಂಘಟನಾತ್ಮಕ ಹೋರಾಟವಿಲ್ಲದೇ ಘನತೆಯ ಬದುಕು ಬದುಕಲು ಸಾಧ್ಯವಿಲ್ಲ. ಜ್ಞಾನ ದೀವಿಗೆಯು ಶೋಷಣೆಯ ಕತ್ತಲನ್ನು ಸೀಳಿ ಇಡೀ ಪೀಳಿಗೆಯನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತದೆ ಎಂಬ ಸಂದೇಶವನ್ನು ಬಡವರು, ಶೋಷಿತ ಅಸ್ಪೃಶ್ಯರು, ದುರ್ಬಲ ವರ್ಗದ ಜನರ ಬದುಕಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹಾನ್ ಚೇತನ ಬಾಬಾ ಸಾಹೇಬರು ಇಂದು ನಮ್ಮೊಂದಿಗೆ ಇಲ್ಲ ಎಂಬುದು ತುಂಬಾ ದುಃಖದ ಸಂಗತಿ. ಅವರು ಹಾಕಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರಾದ ಅಕ್ಷಯ ಅಜಮನಿ ಹೇಳಿದರು.ನಗರದ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಕಚೇರಿಯಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ೬೭ ನೇ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮೊಂಬತ್ತಿ ಬೆಳಗಿ ಸಂತಾಪ ಸೂಚಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್‌ನ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ಮುಖಂಡರಾದ…
ವಿಜಯಪುರ: ಬರಲಿರುವ ಜನೇವರಿಯಲ್ಲಿ ಉಡುಪಿ ಶ್ರೀ ಕೃಷ್ಣ ರ‍್ಯಾಯ ಪೀಠ ಅಲಂಕರಿಸಲಿರುವ ಪುತ್ತಿಗೆ ಮಠದ ಕಿರಿಯ ಶ್ರೀಪಾದಂಗಳ ಸುಶ್ರೀಂದ್ರತೀರ್ಥರು ಹರ್ ಘರ್ ಗೀತಾ ಯೋಜನೆ ಮೂಲಕ ಹಮ್ಮಿಕೊಂಡಿರುವ ಕೋಟಿ ಲೇಖನ ಜಪಯಜ್ಞವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.ಅವರು ತಮ್ಮ ವಿಜಯಪುರ ಸಂಚಾರದಲ್ಲಿ ಶ್ರೀಕೃಷ್ಣ-ವಾದಿರಾಜ ಮಠದಲ್ಲಿ ನೀಡಿದ ಅನುಗ್ರಹ ಸಂದೇಶದಲ್ಲಿ ಭಗವದ್ಗೀತೆ ಶ್ರೀಕೃಷ್ಣ ಪರಮಾತ್ಮನ ಉಪದೇಶವಾಗಿದ್ದು ಮಾನವ ಕಲ್ಯಾಣಕ್ಕೆ ಪರಮೋಪಕಾರವಾಗಿದೆ ಎಂದು ಅಭಿಪ್ರಾಯಪಟ್ಟರು.ಪ್ರತಿಯೊಬ್ಬರು ಇದರಲ್ಲಿ ಭಾಗವಹಿಸುವ ಮೂಲಕ ತಮ್ಮ ಜನ್ಮ ಸಾರ್ಥಕ ಮಾಡಿಕೊಳ್ಳಬೇಕೆಂದು ಕರೆ ಕೊಟ್ಟ ಶ್ರೀಗಳು, ಈ ಸಲ ರ‍್ಯಾಯದಲ್ಲಿ ಹಿರಿಯ ಶ್ರೀಗಳಾದ ಸುಗುಣೇಂದ್ರ ಶ್ರೀಪಾದರು ಮಹಾದ್ವಾರ ಮತ್ತು ಸ್ವರ್ಣಕೃಷ್ಣನ ಸಮರ್ಪಣೆ ಮಾಡಲಿದ್ದಾರೆಂದರು.ಶ್ರೀಪಾದರು ಸನ್ಯಾಸತ್ವ ಸ್ವೀಕರಿಸಿ ೫೦ ವರ್ಷ ಪೂರ್ಣಗೊಂಡಿದ್ದು ದೇಶ-ವಿದೇಶಗಳಲ್ಲಿ ಅವರಿಗೆ ಸಂಭ್ರಮದ ಸ್ವಾಗತ ಹಾಗೂ ಗೌರವ ಸಮರ್ಪಣೆಗಳ ಸುರಿಮಳೆ ನಡೆದಿದೆ. ಇದು ಅವರ ಜನ ಮೆಚ್ಚುಗೆಯ ಸಂಕೇತ ಎಂದು ವ್ಯಾಖ್ಯಾನಿಸಿದರು.ಇದು ಅವರ ನಾಲ್ಕನೆ ರ‍್ಯಾಯ. ಪ್ರತಿ ರ‍್ಯಾಯದಲ್ಲೂ ಅವರು ವಿವಿಧ ಸೇವಾ ಸಮರ್ಪಣೆ ಮಾಡುತ್ತ ಬಂದಿರುವುದು ನಮಗೆಲ್ಲ ಮಾರ್ಗದರ್ಶನ ಎಂದರು.ಸಮಸ್ತ ಭಕ್ತಾದಿಗಳು…
ಇಂಡಿ: ಹೆಲ್ಮೆಟ್ ಹಾಕದ ವಕೀಲರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ವಕೀಲರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ನ್ಯಾಯಾಲಯದ ಆವರಣದಿಂದ ಪ್ರತಿಭಟನೆ ಪ್ರಾರಂಭಿಸಿದ ಅವರು, ಹೃದಯ ಭಾಗದ ಬಸವೇಶ್ವರ ವೃತದಲ್ಲಿ ಸುಮಾರು 5 ನಿಮಿಷಗಳ ಕಾಲ ರಸ್ತೆ ತಡೆದು ಪೋಲಿಸರ ವಿರುದ್ಧ ಧಿಕ್ಕಾರ ಹೇಳಿ, ಆಕ್ರೋಶ ವ್ಯಕ್ತಪಡಿಸಿದರು.ತದನಂತರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರಿಗೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ.ಬಿ ಪಾಟೀಲ್ ಹಾಗೂ ಹಿರಿಯ ನ್ಯಾಯವಾದಿಗಳು ಸೇರಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ನ್ಯಾಯವಾದಿ ಸೋಮು ನಿಂಬರಗಿಮಠ, ಜೆ.ಬಿ. ಬೇನೂರ ಮಾತನಾಡಿ, ಇಡೀ ದೇಶದ ಕಾನೂನು ಸುವ್ಯವಸ್ಥಿತ ಕಾಪಾಡಿಕೊಂಡು ಹೋಗುವುದರಲ್ಲಿ ನ್ಯಾಯವಾದಿಗಳು ಪ್ರಥಮರು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥಿತ ರಕ್ಷಣೆ ಮಾಡಬೇಕಾಗಿದ್ದ ಪೋಲಿಸರು ನ್ಯಾಯವಾದಿಗಳ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದು ಬೇಜಾರಿನ ಸಂಗತಿ. ಕಳೆದ ಎರಡು ದಿನಗಳ ಹಿಂದೆಚಿಕ್ಕಮಂಗಳೂರು ನ್ಯಾಯವಾದಿ ಪ್ರೀತಮ್ ಎನ್ ಟಿ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಪೋಲಿಸರು ಅವರ ಮೇಲೆ ಹಲ್ಲೆ…
ಭಯೋತ್ಪಾದಕ ಸಂಘಟನೆ ಐಸಿಎಸ್ ಸಂಪರ್ಕದ ತನ್ವೀರ್ ಪೀರಾ ಜೊತೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿರುವ ಕುರಿತು ವಿಜಯಪುರ: ಭಯೋತ್ಪಾದಕ ಸಂಘಟನೆ ಐಸಿಎಸ್ ಕ್ಯಾತಿಯ ತನ್ವೀರ್ ಪೀರಾ ಅವರೊಂದಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆ ಹಂಚಿಕೊಂಡಿರುವ ಕುರಿತಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.*ಪತ್ರದ ಒಕ್ಕಣೆ ಹೀಗಿದೆ..*ಪೀರಾ ಅವರು ಈ ಹಿಂದೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ ರ್ಯಾಡಿಕಲ್ ಇಸ್ಲಾಮಿಕ್ ಔಟ್ಫಿಟ್ ನಾಯಕರನ್ನು ಭೇಟಿಯಾಗಿದ್ದರು ಎಂಬುದು ನನ್ನ ಗಮನಕ್ಕೆ ಬಂದಿದೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ಪೀರಾ ಸಿಎಂ ಅವರನ್ನು ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ. ಅವರು ಹಿಂದೆ ಅನೇಕ ಭಾರಿ ಮುಖಾಮುಖಿ ಆಗಿದ್ದಾರೆ.ಪೀರಾ ಅವರು ನಮ್ಮ ರಾಷ್ಟ್ರದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಮುಸ್ಲಿಂ ರಾಷ್ಟ್ರಗಳಿಂದ ನಿಧಿಯನ್ನು ತರುತ್ತಿದ್ದಾರೆ ಎಂಬ ನಂಬಲರ್ಹ ಮಾಹಿತಿ ನನಗೆ ಸಿಕ್ಕಿದೆ. ಸಿಎಂ ಅವರು ತಮ್ಮ ವೈಯಕ್ತಿಕ ಭದ್ರತೆ ಮತ್ತು ಗುಪ್ತಚರ ಸಲಹೆಯನ್ನು ಕಡೆಗಣಿಸಿರುವುದು ಅಥವಾ ತಮ್ಮ ಸ್ವಂತ ರಾಜಕೀಯ…
