ಡಾ.ಅಂಬೇಡ್ಕರ ೬೭ನೇ ಮಹಾ ಪರಿನಿರ್ವಾಣ ಶೋಕ ಆಚರಿಸಿದ ದಲಿತ ವಿದ್ಯಾರ್ಥಿ ಪರಿಷತ್
ವಿಜಯಪುರ: ಜ್ಞಾನವನ್ನು ಹೊಂದದೇ ವಿಮೋಚನೆ ಹೊಂದಲು ಸಾಧ್ಯವಿಲ್ಲ. ಸಂಘಟನಾತ್ಮಕ ಹೋರಾಟವಿಲ್ಲದೇ ಘನತೆಯ ಬದುಕು ಬದುಕಲು ಸಾಧ್ಯವಿಲ್ಲ. ಜ್ಞಾನ ದೀವಿಗೆಯು ಶೋಷಣೆಯ ಕತ್ತಲನ್ನು ಸೀಳಿ ಇಡೀ ಪೀಳಿಗೆಯನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತದೆ ಎಂಬ ಸಂದೇಶವನ್ನು ಬಡವರು, ಶೋಷಿತ ಅಸ್ಪೃಶ್ಯರು, ದುರ್ಬಲ ವರ್ಗದ ಜನರ ಬದುಕಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹಾನ್ ಚೇತನ ಬಾಬಾ ಸಾಹೇಬರು ಇಂದು ನಮ್ಮೊಂದಿಗೆ ಇಲ್ಲ ಎಂಬುದು ತುಂಬಾ ದುಃಖದ ಸಂಗತಿ. ಅವರು ಹಾಕಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರಾದ ಅಕ್ಷಯ ಅಜಮನಿ ಹೇಳಿದರು.
ನಗರದ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಕಚೇರಿಯಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ೬೭ ನೇ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮೊಂಬತ್ತಿ ಬೆಳಗಿ ಸಂತಾಪ ಸೂಚಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್‌ನ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ಮುಖಂಡರಾದ ಸಂಘರ್ಷ ಹೊಸಮನಿ, ಕಾಶಿನಾಥ ಕಟ್ಟಿಮನಿ, ಮಾದೇಶ ಬಾಗೇವಾಡಿ, ಸತೀಶ ಅಂಜುಟಗಿ, ಪ್ರದಾನಿ ನಾಯಕ, ಸೇರಿದಂತೆ ಇತರರು ಇದ್ದರು.

