ಮುದ್ದೇಬಿಹಾಳ: ಕೃಷಿ ಚಟುವಟಿಕೆಗೆ ರಸ್ತೆ ಬಂದ್ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಎಸ್.ಸಿದರೆಡ್ಡಿ ಮತ್ತು ತಾಲೂಕಿನ ನಾಗರಬೆಟ್ಟ ಗ್ರಾಮದ ಕೆಲ ರೈತರು ಮಂಗಳವಾರ ತಹಶೀಲ್ದಾರ ಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಿದರೆಡ್ಡಿ, ನಾಗರಬೆಟ್ಟ ಗ್ರಾಮವು ಹೈದರಾಬಾದ ನಿಜಾಮರ ಕಾಲಘಟ್ಟದಲ್ಲಿದ್ದ ಕೊನೆಯ ಹಳ್ಳಿ. ಆಗಿನ ನಕ್ಷೆಯಲ್ಲಿ ರೈತರ ಜಮೀನುಗಳಿಗೆ ಸರಿಯಾದ ದಾರಿಗಳನ್ನು ಗುರುತಿಸಿಲ್ಲ. ಕೇವಲ ಒದು ಊರಿನಿಂದ ಮತ್ತೊಂದು ಊರಿಗೆ ತಲುಪುವ ರಸ್ತೆಗಳನ್ನು ಮಾತ್ರ ಗುರುತಿಸಿದ್ದು ಈ ರಸ್ತೆಗಳನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಶಾಶ್ವತವಾಗಿ ಬಂದ್ ಮಾಡಿರುತ್ತಾರೆ. ಸ್ವತಃ ನನ್ನ ದಾಯಾದಿಗಳೇ ನನ್ನ ಜಮೀನಿಗೆ ಹೋಗುವ ರಸ್ತೆಯನ್ನು ಕಳೆದ ಎರಡು ತಿಂಗಳಿನಿಂದ ಮುಳ್ಳು ಕಂಟಿಗಳನ್ನು ಹಚ್ಚಿ ಬಂದ್ ಮಾಡಿರುತ್ತಾರೆ. ಇದೇ ರೀತಿ ನಮ್ಮ ಊರಿನ ಹಲವಾರು ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಇದು ಇವತ್ತೇ ಕೊನೆಯಾಗುವಂತೆ ಕ್ರಮ ವಹಿಸಬೇಕು ಎಂದು ದೂರಿದರು.
ಈ ವೇಳೆ ತಹಶೀಲ್ದಾರ ಬಲರಾಮ ಕಟ್ಟಿಮನಿ ಮಾತನಾಡಿ, ರಸ್ತೆಯ ವಿಷಯವಾಗಿ ನಿಮ್ಮೂರಿನ ಎಲ್ಲ ಹಿರಿಯರು ಸೇರಿ ಬಗೆಹರಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡಕೊಳ್ಳದಂತೆ ಸಲಹೆ ನೀಡಿದರು.
ಒಂದು ವೇಳೆ ಮನವಿಗೆ ತಾವು ಸರಿಯಾದ ಸ್ಪಂದನೆ ನೀಡದಿದ್ದಲ್ಲಿ ಡಿ.೧೮ ರಿಂದ ನಿರಂತರವಾಗಿ ತಮ್ಮ ಕಚೇರಿಯ ಆವರಣದಲ್ಲಿ ಹಗಲು ರಾತ್ರಿ ನಿರಂತರವಾಗಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.
ಮನವಿ ಪತ್ರಕ್ಕೆ ಪರಮಪ್ಪ ಗುರಿಕಾರ, ನಿಂಗಪ್ಪ ಗುರಿಕಾರ, ಅಮರಪ್ಪ ಬಂಗಾರಗುಂಡ, ಮುರ್ತುಜಸಾಬ ವಾಲಿಕಾರ, ಹಣಮಂತ್ರಾಯ ಗುರಿಕಾರ, ಯಮನಪ್ಪ ನಂದಿಹಾಳ, ವಿರೇಶ ಚಾಕರೆಡ್ಡಿ, ಯಮನಪ್ಪ ನಂದ್ಯಾಳ, ಬಾಬುಸಾಬ ನಾಲತವಾಡ ಸಹಿ ಹಾಕಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

