ವಿಜಯಪುರ: ಬರಲಿರುವ ಜನೇವರಿಯಲ್ಲಿ ಉಡುಪಿ ಶ್ರೀ ಕೃಷ್ಣ ರ‍್ಯಾಯ ಪೀಠ ಅಲಂಕರಿಸಲಿರುವ ಪುತ್ತಿಗೆ ಮಠದ ಕಿರಿಯ ಶ್ರೀಪಾದಂಗಳ ಸುಶ್ರೀಂದ್ರತೀರ್ಥರು ಹರ್ ಘರ್ ಗೀತಾ ಯೋಜನೆ ಮೂಲಕ ಹಮ್ಮಿಕೊಂಡಿರುವ ಕೋಟಿ ಲೇಖನ ಜಪಯಜ್ಞವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಅವರು ತಮ್ಮ ವಿಜಯಪುರ ಸಂಚಾರದಲ್ಲಿ ಶ್ರೀಕೃಷ್ಣ-ವಾದಿರಾಜ ಮಠದಲ್ಲಿ ನೀಡಿದ ಅನುಗ್ರಹ ಸಂದೇಶದಲ್ಲಿ ಭಗವದ್ಗೀತೆ ಶ್ರೀಕೃಷ್ಣ ಪರಮಾತ್ಮನ ಉಪದೇಶವಾಗಿದ್ದು ಮಾನವ ಕಲ್ಯಾಣಕ್ಕೆ ಪರಮೋಪಕಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರು ಇದರಲ್ಲಿ ಭಾಗವಹಿಸುವ ಮೂಲಕ ತಮ್ಮ ಜನ್ಮ ಸಾರ್ಥಕ ಮಾಡಿಕೊಳ್ಳಬೇಕೆಂದು ಕರೆ ಕೊಟ್ಟ ಶ್ರೀಗಳು, ಈ ಸಲ ರ‍್ಯಾಯದಲ್ಲಿ ಹಿರಿಯ ಶ್ರೀಗಳಾದ ಸುಗುಣೇಂದ್ರ ಶ್ರೀಪಾದರು ಮಹಾದ್ವಾರ ಮತ್ತು ಸ್ವರ್ಣಕೃಷ್ಣನ ಸಮರ್ಪಣೆ ಮಾಡಲಿದ್ದಾರೆಂದರು.
ಶ್ರೀಪಾದರು ಸನ್ಯಾಸತ್ವ ಸ್ವೀಕರಿಸಿ ೫೦ ವರ್ಷ ಪೂರ್ಣಗೊಂಡಿದ್ದು ದೇಶ-ವಿದೇಶಗಳಲ್ಲಿ ಅವರಿಗೆ ಸಂಭ್ರಮದ ಸ್ವಾಗತ ಹಾಗೂ ಗೌರವ ಸಮರ್ಪಣೆಗಳ ಸುರಿಮಳೆ ನಡೆದಿದೆ. ಇದು ಅವರ ಜನ ಮೆಚ್ಚುಗೆಯ ಸಂಕೇತ ಎಂದು ವ್ಯಾಖ್ಯಾನಿಸಿದರು.
ಇದು ಅವರ ನಾಲ್ಕನೆ ರ‍್ಯಾಯ. ಪ್ರತಿ ರ‍್ಯಾಯದಲ್ಲೂ ಅವರು ವಿವಿಧ ಸೇವಾ ಸಮರ್ಪಣೆ ಮಾಡುತ್ತ ಬಂದಿರುವುದು ನಮಗೆಲ್ಲ ಮಾರ್ಗದರ್ಶನ ಎಂದರು.
ಸಮಸ್ತ ಭಕ್ತಾದಿಗಳು ತಮ್ಮ ರ‍್ಯಾಯ ಸಮಯದಲ್ಲಿ ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಬರುವಂತೆ ಅವರು ಕರೆ ನೀಡಿದರು.
ಶ್ರೀಕೃಷ್ಣ ವಾದಿರಾಜ ಮಠದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕಿರಣ ಚುಳಕಿ, ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಖಜಾಂಚಿ ಅಶೋಕರಾವ್, ಹಿರಿಯ ಸದಸ್ಯರಾದ ವಿ.ಸಿ.ಕುಲಕರ್ಣಿ, ವಿ.ಬಿ.ಕುಲಕರ್ಣಿ, ವಿಕಾಸ ಪದಕಿ, ಗೋವಿಂದ ದೇಶಪಾಂಡೆ, ಹಿರಿಯ ಉಪಾಧ್ಯಕ್ಷ ಡಾ. ಮಲಘಾಣ, ಸದಸ್ಯರಾದ ಗೋವಿಂದ ಜೋಶಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಡಾ. ಆರ್.ಜೆ.ಮಂಗಲಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ವ್ಯವಸ್ಥಾಪಕ ಪಂಡಿತ ವಾಸುದೇವ್ ಆಚಾರ್ಯ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಿ ವೇದಿಕೆಗೆ ಕರೆತಂದರು. ನಗರದ ಬ್ರಾಹ್ಮಣ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ವಿವಿಧ ಮಠಗಳ ಪದಾಧಿಕಾರಿಗಳು ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

