ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹೊಕ್ರಾಣಿ ಗ್ರಾಮಕ್ಕೆ ಸಂಬಂಧಿಸಿದ ಬಸವ ವಸತಿ ಯೋಜನೆಯಲ್ಲಿ ಮನೆಗಳನ್ನು ಹಂಚಿಕೆ ಮಾಡುವ ಕುರಿತು ಆಯ್ಕೆ ಮಾಡಿದ ಯಾದಿಯಲ್ಲಿ ಈಗಾಗಲೇ ಸ್ವಂತ ಮನೆಗಳನ್ನು ಹೊಂದಿದವರಿಗೆ ಪುನಃ ಆಯ್ಕೆ ಮಾಡಲಾಗಿದೆ. ಇದು ಅನಧಿಕೃತವಾಗಿದ್ದು ನಿಜವಾದ ಬಡವರಿಗೆ ಆಯ್ಕೆ ಮಾಡಬೇಕು ಎಂದು ಚನ್ನಪ್ಪ ಮಾದರ ಇಲ್ಲಿನ ಪ್ರಭಾರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಪ್ರತಿಯನ್ನು ಸುದ್ದಿಗಾರರಿಗೆ ಮುಟ್ಟಿಸಿದ ಅವರು, ಗ್ರಾಮ ಸಭೆಯಲ್ಲಿ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದು ಆಯ್ಕೆಯಾದ ಯಾದಿಯಲ್ಲಿ ಅವರನ್ನು ಕೈಬಿಟ್ಟಿದ್ದಾರೆ, ಕಾರಣ ಈ ಕೂಡಲೇ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೇ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
