Author: editor.udayarashmi@gmail.com

ಮುದ್ದೇಬಿಹಾಳ: ಪಟ್ಟಣದ ಬಜಾರ ಮುಖ್ಯ ರಸ್ತೆಯಲ್ಲಿರುವ ಡ್ರೈನೇಜ್ ಸಂತೆಯ ದಿನವಾದ ಗುರುವಾರ ಓವರ್ ಫ್ಲೋ ಆಗಿ ದಾರಿಯುದ್ದಕ್ಕೂ ಹರಿದು ಸಾಕಷ್ಟು ತಾಪತ್ರೆಯ ತಂದೊಡ್ಡಿ ಸಂತೆಗೆ ಬಂದ ಜನ ಮೂಗು ಮುಚ್ಚಿಕೊಂಡೇ ತಿರುಗಾಡುತ್ತ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.ಮದ್ಯಾಹ್ನ ೩ಗಂಟೆಗೆ ಈ ಸಮಸ್ಯೆ ತಲೆದೋರಿದ್ದು ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು, ವಯೋವೃದ್ಧರು ತುಳಿಕೊಂಡೇ ತಿರುಗಾಡುವ ಅನಿವಾರ್ಯತೆ ಎದುರಾಗಿತ್ತು.ಈ ವೇಳೆ ಪಟ್ಟಣದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಸುದೇವ ಶಾಸ್ತ್ರಿ ಮಾತನಾಡಿ, ನಮಗೆ ಈ ಸಮಸ್ಯೆ ಹೊಸದೇನೂ ಅಲ್ಲ. ಮೇಲಿಂದ ಮೇಲೆ ಮರುಕಳಿಸುತ್ತಲೇ ಇರುತ್ತೆ. ಈ ಬಗ್ಗೆ ಎಷ್ಟು ದೂರಿದರೂ ಯಾವುದೇ ಕ್ರಮವಾಗುತ್ತಿಲ್ಲ. ಒಳಚರಂಡಿ ಇಲಾಖೆಯವರಿಗೆ ದೂರಿದರೆ ಪುರಸಭೆಯವರ ಮೇಲೆ ಹಾಕುತ್ತಾರೆ. ಪುರಸಭೆಯವರಿಗೆ ತಿಳಿಸಿದರೆ ಒಳಚರಂಡಿ ಇಲಾಖೆಯತ್ತ ಬೆರಳು ತೋರಿಸುತ್ತಾರೆ. ಹೀಗಾದರೆ ಇದಕ್ಕೆ ಶಾಶ್ವತ ಪರಿಹಾರ ಯಾವಾಗ ಎಂಬ ಬಗ್ಗೆ ದೊಡ್ಡ ಚಿಂತೆ ನಮಗೆ ಕಾಡುತ್ತಿದೆ. ಚೇಂಬರ್ ನಿಂದ ಕೊಳಕು ನೀರು ಹೊರಬರುತ್ತಿದ್ದಂತೆಯೇ ರಸ್ತೆಯುದ್ದಕ್ಕೂ ಹರಿಯುತ್ತದೆ. ಇದರಿಂದ ಗಬ್ಬು ವಾಸನೆ ಅಲ್ಲದೇ ಇದರಿಂದ ಸಾಂಕ್ರಾಮಿಕ ರೋಗ ಹರಡುತ್ತದೆ. ಇದಕ್ಕೊಂದು…

Read More

ಮುದ್ದೇಬಿಹಾಳ: ವಿಚ್ಛೇದನಕ್ಕಾಗಿ ಕೋರ್ಟ್ ನ ಮೊರೆ ಹೋದ ವ್ಯಕ್ತಿಯನ್ನ ಮುದ್ದತಿಗೆ ಬಂದಾಗ ಪತ್ನಿಯ ಮನೆಯವರು ನ್ಯಾಯಾಲಯದ ಮುಖ್ಯದ್ವಾರದ ಹತ್ತಿರವಿರುವ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ವರದಿಯಾಗಿದೆ.ತಾಲೂಕಿನ ರೂಡಗಿ ಗ್ರಾಮದ ಮಹೇಶ ನಂದಿಹಾಳ ಹಲ್ಲೆಗೊಳಗಾದ ವ್ಯಕ್ತಿ. ಇದೇ ತಾಲೂಕಿನ ಗೋನಾಳ ಗ್ರಾಮದ ಬಸಪ್ಪ ಬಿರಾದಾರ ಇವರ ಮಗಳಾದ ಈರಮ್ಮಳ ಜೊತೆ ಕಳೆದ ಎರಡು ವರ್ಷಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿತ್ತು. ಮದುವೆಯ ನಂತರ ಗಂಡ ಹೆಂಡಿರ ಸಂಬಂಧ ಅಷ್ಟೊಂದು ಚೆನ್ನಾಗಿ ಇರಲಿಲ್ಲ. ಪತ್ನಿಯ ಬಗ್ಗೆ ಅನೈತಿಕ ಸಂಬಂಧದ ಸಂಶಯ ಹೊಂದಿದ್ದ ಪತಿಗೆ ಮದುವೆಯ ೨ ತಿಂಗಳಿಗೆ ಆಕೆ ೭ ತಿಂಗಳ ಗರ್ಭಿಣಿ ಎಂದು ತಿಳಿದಿದ್ದು ಆಸ್ಪತ್ರೆಯಲ್ಲಿ. ಬಳಿಕ ತಾನು ಮೋಸ ಹೋಗಿದ್ದ ಬಗ್ಗೆ ತಿಳಿದು ಆಕೆಯನ್ನ ತವರು ಮನೆಗೆ ಕಳುಹಿಸಿದ್ದ.ನಂತರ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು ಆ ಮಗು ತನ್ನದಲ್ಲ ಎಂದು ಸಾಬೀತು ಮಾಡಲು ಡಿಎನ್‌ಎ ಪರೀಕ್ಷೆ ನಡೆಸುವಂತೆ ಪಟ್ಟು ಹಿಡಿದಿದ್ದ. ಮುದ್ದತಿಗೆ ಬಂದಾಗಲೊಮ್ಮೆ ಪತ್ನಿಯ ಮನೆಯವರೊಂದಿಗೆ ಮಾತಿನ ಚಕಮಕಿ ನಡೆಯುತ್ತಿದ್ದು…

Read More

ದೇವರಹಿಪ್ಪರಗಿ: ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಪದವಿ ಹಂತದಲ್ಲಿಯೇ ಉತ್ತಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಸಿಂದಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಆರ್.ಬಿ.ಜಹಾಗೀರದಾರ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ಪ್ರಥಮ ವರ್ಷದ ವಿದ್ಯಾರ್ಥಿಗಳ ಒಂದು ದಿನದ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರತಿಯೊಬ್ಬ ವಿದ್ಯಾರ್ಥಿ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಶಿಸ್ತು, ಸಂಸ್ಕಾರ, ಸಂಯಮ, ಸಂಸ್ಕೃತಿ ಮೈಗೂಡಿಸಿಕೊಂಡಿರಬೇಕು. ಗುರುಹಿರಿಯರಿಗೆ ಗೌರವ ಕೊಡುವಂತವರಾಗಿರಬೇಕು ಎಂದರು.ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕಕುಮಾರ್ ಜಾದವ ಪ್ರಾಸ್ತಾವಿಕವಾಗಿ ಮಾತನಾಡಿದರು.ಐಕ್ಯೂಎಸಿ ಸಂಚಾಲಕ ಶಿವಪುತ್ರ ಜಾಲವಾದಿ ವಿವಿಧ ವಿಭಾಗಗಳು ಮತ್ತು ಸಮಿತಿಗಳ ಕಾರ್ಯ ಚಟುವಟಿಕೆಗಳ ಕುರಿತು, ಮುಖ್ಯ ಅಧಿಕ್ಷಕ ಜಗನ್ನಾಥ ಸಜ್ಜನ ಕಛೇರಿ ಮತ್ರು ಆಡಳಿತ ವಿಭಾಗಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು, ಡಾ. ದ್ರಾಕ್ಷಾಯಣಮ್ಮ ಎನ್.ಸಿ, ಅಕ್ರಮ ಪಾಷಾ, ಸಿಬ್ಬಂದಿ ರಾಜೇಶ್ವರಿ ಸುಗಂಧಿ, ಶಾರದಾ ಸೋಮಾಪುರ,…

Read More

ಮೋರಟಗಿ: ಸಂಗೀತದಲ್ಲಿ ಸ್ವರ್ಗ ಅಡಗಿದೆ. ಸಂಗೀತ ಬಲ್ಲವನು ಮಾನಸಿಕವಾಗಿ ಎಂದಿಗೂ ಕುಗ್ಗುವುದಿಲ್ಲ. ಸಂಗೀತ ಕೇಳುವುದರಿಂದ ದಣಿವು ಮಾಯವಾಗುತ್ತದೆ ಎಂದು ಗಣಿತ ಭೋದಕ ಪರಶುರಾಮ ದೇಸುಣಗಿ ಹೇಳಿದರು.ಗ್ರಾಮದ ಐಡಿಎಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಸಂಗೀತ ಸೌರಭ ಸಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಯುವಕರು ಮೊಬೈಲ್ ಎಂಬ ಗಿಳಿಯ ಹಿಂದೆ ಬಿದ್ದು ಸುಂದರವಾದ ಬದುಕನ್ನೇ ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸಿಕೊಟ್ಟರೆ ಸಾಲದು ಮನೆಯಲ್ಲಿ ಅನಾವಶ್ಯಕ ಮೊಬೈಲ್ ಬಳಕೆ ಮಾಡಲು ಅನುಮತಿ ನೀಡಬಾರದು. ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ಪಾಲಕರು ಒಂದು ವೇಳೆ ಅನಕ್ಷರಸ್ತರಾಗಿದ್ದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಖಂಡಿತ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.ಶ್ರೀ ಭಾಗ್ಯವಂತಿ ಸಂಸ್ಕೃತಿಕ ನಾಟ್ಯ ಕಲಾ ತಂಡ ಮೋರಟಗಿ ಇವರಿಂದ ವಿವಿಧ ರೀತಿಯ ಸಂಗೀತ ಹಾಡುವ ಮೂಲಕ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಗಮನ ಸೆಳೆಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಹುಸೇನಭಾಷಾ ಬಾಗವಾನ, ಶ್ರೀ ಭಾಗ್ಯವಂತಿ ಸಾಂಸ್ಕೃತಿಕ ನಾಟ್ಯ ಕಲಾವಿದರ ಸಂಘದ ಮಾಲಿಕ…

Read More

ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಆರಾದ್ಯ ದೈವ ಶ್ರೀ ಸಂಗಮೇಶ್ವರರ ಕಾರ್ತಿಕೋತ್ಸವದ ನಿಮಿತ್ಯ ಅಂದಾಜು ೪೫ಕ್ಕೂ ಹೆಚ್ಚು ಪುರವಂತರು ಕೈಗೆ, ನಾಲಿಗೆಗೆ, ಸೊಂಟಕ್ಕೆ ಶಸ್ತ್ರ ಹಾಕಿಕೊಂಡು ಪ್ರದರ್ಶನವನ್ನು ನೀಡಿದರು. ಪುರವಂತರಾದ ವೇದ ಮೂರ್ತಿ ಈರಣ್ಣ ಬಡಿಗೇರ, ದೇವಣ್ಣ ಪತ್ತಾರ(ಬಾವೂರ), ಸಂಗಣ್ಣ ಪತ್ತಾರ( ಧನ್ನೂರ), ಕಲ್ಲಯ್ಯ ಆಲೂರ, ರಂಗನಾಥ ಬಡಿಗೇರ, ಅನೀಲ ಪತ್ತಾರ, ನಾರಾಯಣ ಬಡಿಗೇರ, ಮೌನೇಶ ಬಡಿಗೇರ, ಈರಣ್ಣ ಮುದ್ದೇಬಿಹಾಳ, ಪ್ರಹ್ಲಾದ ಬಡಿಗೇರ, ಪ್ರಭು ಯರಗಲ್ಲ, ಪತ್ರಕರ್ತ ಹಾಗೂ ಪುರವಂತ ಬಸವರಾಜ ಈ ಕುಂಬಾರ(ಚವನಭಾವಿ), ಲಕ್ಷ್ಮಣ್ಣ ಕರಭಂಟನಾಳ, ಬಸಯ್ಯ ದಿಂಡವಾರ ಸೇರಿದಂತೆ ಮತ್ತೀತರರು ಇದ್ದರು.

Read More

ಬಸವನಬಾಗೇವಾಡಿ: ತಾಲೂಕಿನ ಮುಳ್ಳಾಳ ಗ್ರಾಮದಲ್ಲಿ ಮರಗಮ್ಮದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ಶುಕ್ರವಾರ ನೆರವೇರಿತು. ಇಂಗಳೇಶ್ವರ ಬೃಂಗೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮರಗಮ್ಮದೇವಿ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಿದ ನಂತರ ಮೂರ್ತಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ನೂತನ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಳ್ಳಾಳ ಗ್ರಾಮ ಸಣ್ಣ ಗ್ರಾಮವಾದರೂ ಎಲ್ಲರೂ ಒಂದಾಗಿ ನೂತನ ದೇವಸ್ಥಾನವನ್ನು ನಿರ್ಮಾಣ ಮಾಡಿರುವುದು ಶ್ಲಾಘನೀಯ. ಇದು ಜನರ ಭಕ್ತಿಯ ಪ್ರತೀಕವಾಗಿದೆ. ಸರ್ಕಾರದ ನೆರವು ಪಡೆದುಕೊಂಡಿದ್ದರೂ ಎಲ್ಲರೂ ಕೂಡಿಕೊಂಡು ಅಚ್ಚುಕಟ್ಟಾಗಿ ಈ ಕಾರ್ಯ ಮಾಡಿರುವುದು ಮೆಚ್ಚುವಂತಹದ್ದು. ಆಧ್ಯಾತ್ಮದಿಂದ ನಾವೆಲ್ಲರೂ ನೆಮ್ಮದಿಯ ಜೀವನ ಸಾಗಿಸಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರ ಪಾಟೀಲ ಮಾತನಾಡಿದರು.ಕಾರ್ಯಕ್ರಮದಲ್ಲಿ ಡೋಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಗೌಡ ಬಿರಾದಾರ, ಮುಖಂಡರಾದ ರಾಹುಲ ಕುಬಕಡ್ಡಿ, ರವಿ ಭಾವಿಕಟ್ಟಿ, ಸುರೇಶ ಹಾರಿವಾಳ, ಸಿದ್ದನಗೌಡ ಪಾಟೀಲ, ರಾಮನಗೌಡ ಪಾಟೀಲ, ವಸಂತ ಹಂಡಿ,ನಾಗಪ್ಪ ಕುಂಬಾರ, ಗ್ರಾಪಂ ಸದಸ್ಯರಾದ ರವಿ…

Read More

ಬಸವನಬಾಗೇವಾಡಿ: ಪಟ್ಟಣದಲ್ಲಿ ವಿಶ್ವಹಿಂದೂ ಪರಿಷದ್, ಬಜರಂಗದಳದ ಸಹಯೋಗದಲ್ಲಿ ಶುಕ್ರವಾರ ಹನುಮಮಾಲಾ ಪಾದುಕೆ ಪಲ್ಲಕ್ಕಿ ಉತ್ಸವ ಹಾಗೂ ಮಾತೃಶಕ್ತಿ ದುರ್ಗಾವಾಹಿನಿಯ ವಾರ್ಷಿಕೋತ್ಸವದಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆ ಜರುಗಿತು.ಪಟ್ಟಣದ ಹನುಮಾನ ದೇವಸ್ಥಾನದಿಂದ ಆರಂಭಗೊಂಡ ಶೋಭಾ ಯಾತ್ರೆಯು ಅಗಸಿ, ಮಹಾರಾಜರ ಮಠ, ಬಸವಜನ್ಮ ಸ್ಮಾರಕ, ಪತ್ತಾರ ಗಲ್ಲಿ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿತು. ಯಾತ್ರೆಯಲ್ಲಿ ಹನುಮಾನ, ರಾಮನ ಮೂರ್ತಿಗಳು, ಪೂಜ್ಯ ಸಿದ್ದೇಶ್ವರರ, ಭಾರತ ಮಾತೆಯ ಭಾವಚಿತ್ರ ಗಮನ ಸೆಳೆದವು. ಯಾತ್ರೆಯುದ್ದಕ್ಕೂ ಡಿಜೆ ಸೌಂಡಿಗೆ ಹನುಮಮಾಲಾಧಾರಿಗಳು ಕುಣಿದು ಕುಪ್ಪಳಿಸಿದರು.ಶೋಭಾಯಾತ್ರೆಯಲ್ಲಿ ತಮ್ಮಣ್ಣ ಬಡಿಗೇರ, ನಿಂಗಪ್ಪ ಬಡಿಗೇರ, ಸಂತೋಷ ಹಿರೇಕುರಬರ, ಮಡ್ಡು ಈರಕಾರ, ಚನ್ನಬಸು ಮುರಾಳ, ರಾಹುಲ ಜಗತಾಪ, ಬಸವರಾಜ ಅಳ್ಳಗಿ, ಮಂಜು ಮುದೂರ, ಅಪ್ಪು ಚವ್ಹಾಣ, ಅಭಿಷೇಕ ಹೂಗಾರ, ಷಣ್ಮುಖ ಹಿರೇಮಠ, ಭಾಗ್ಯವಂತ ಇಂಗಳೇಶ್ವರ, ವಿಜಯ ಗೊಳಸಂಗಿ, ಸದಾನಂದ ಗೊಳಸಂಗಿ, ಬಸವರಾಜ ಗೊಳಸಂಗಿ, ಶಶಿಕುಮಾರ ನಾಯ್ಕೋಡಿ, ವಿರೇಶ ಹಿರೇಮಠ, ವಿದ್ಯಾಶ್ರೀ ಬಡಿಗೇರ, ಲಕ್ಷ್ಮೀ ವಸ್ತ್ರದ, ರೂಪಾ ಜಾಧವ, ರೂಪಾ ಒಡೆಯರ ಇತರರು ಭಾಗವಹಿಸಿದ್ದರು.

Read More

ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಾಗರಬೆಟ್ಟ ಗ್ರಾಮದ ರೈತರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಅಧಿಕಾರಿಗಳ ಭರವಸೆಯ ಮೇರೆಗೆ ಅಂತ್ಯಗೊಂಡಿದೆ.ಧರಣಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಬಲರಾಮ ಕಟ್ಟಿಮನಿ ಧರಣಿ ನಿರತರಿಗೆ ಸದರಿ ಗುಡ್ಡಗಳ ಬಗ್ಗೆ ವಿಮರ್ಷಾತ್ಮಕ ವರದಿ ತರಿಸಿಕೊಂಡು ನಾಳ್ಕು ತಿಂಗಳೊಳಗಾಗಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನ ನೀಡಿದರು. ತಹಶೀಲ್ದಾರರ ಭರವಸೆಯ ಮೇರೆಗೆ ಧರಣಿ ನಿರತರು ಧರಣಿಯನ್ನು ಅಂತ್ಯಗೊಳಿಸಿದರು.ಈ ವೇಳೆ ತಾಲೂಕು ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಎಸ್.ಸಿದರೆಡ್ಡಿ ಮಾತನಾಡಿ ತಹಶೀಲ್ದಾರ ಅವರು ನಮ್ಮ ಬೇಡಿಕೆಗಳಿಗೆ ಸೂಕ್ತ ಕ್ರಮ ವಹಿಸುವದಾಗಿ ತಿಳಿಸಿರುವುದರ ಪ್ರಯುಕ್ತ ಈ ಧರಣಿಯನ್ನು ಅಂತ್ಯಗೊಳಿಸುತ್ತಿದ್ದೇವೆ ಎಂದರು.ಈ ವೇಳೆ ಗ್ಯಾನಪ್ಪ ರಕ್ಕಸಗಿ, ಶರಣಪ್ಪ ದಡ್ಡಿ, ಪರಮಪ್ಪ ಗುರಿಕಾರ, ಶಾಂತಗೌಡ ಸಿದರೆಡ್ಡಿ, ಹಣಮಂತ ಜಾಲಿಬೆಂಚಿ, ನಿಂಗಪ್ಪ ಹುರಿಕಾರ, ಬಸಪ್ಪ ಟಕ್ಕಳಕಿ, ನಿಂಗಪ್ಪ ರಕ್ಕಸಗಿ, ಕೆ.ಬಿ.ಮುರಾಳ, ಮಾಂತಯ್ಯ ಮಠ, ಶಂಕರಗೌಡ ಸಿದರೆಡ್ಡಿ, ಜುಮ್ಮಣ್ಣ ಟಕ್ಕಳಕಿ, ನಾನಾಗೌಡ ಸಿದರೆಡ್ಡಿ ಸೇರಿದಂತೆ ಮತ್ತೀತರರು ಇದ್ದರು.

Read More

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹಿರೇಮಠದ ಕಲ್ಯಾಣ ಮಂಟಪ ಲೋಕಾರ್ಪಣೆ, ನೂತನ ರಥೋತ್ಸವ, ಡಾ.ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ ೧೧ ನೇ ಪುಣ್ಯಾರಾಧನೆ, ೫೦೦೮ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ೨೦೦೮ ಕುಂಭ, ೨೫ ಮಂಟಪ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜ.೩ ಮತ್ತು ೪ ರಂದು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಹಿರೇಮಠದ ಪೀಠಾಧಿಪತಿ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಅವರು ಗುರುವಾರ ಮನಗೂಳಿ ಪಟ್ಟಣದಲ್ಲಿ ಪಾದಯಾತ್ರೆ ಮಾಡುವ ಮೂಲಕ ದುಶ್ಚಟಗಳ ತ್ಯಜಿಸುವಂತೆ ಪ್ರತಿಯೊಬ್ಬರಿಗೆ ರುದ್ರಾಕ್ಷಿ ಧಾರಣೆ ಮಾಡಿ ಕಾರ್ಯಕ್ರಮದ ಜಾಗೃತಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ೩ ಮತ್ತು ೪ ರಂದು ಶ್ರೀಮಠದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಂಗವಾಗಿ ಶ್ರೀಮಠದ ಭಕ್ತರಿರುವ ೪೦ ಗ್ರಾಮಗಳಲ್ಲಿ ಪಾದಯಾತ್ರೆ ಮಾಡುವ ಜೊತೆಗೆ ಭಕ್ತರಿಗೆ ರುದ್ರಾಕ್ಷಿ ವಿತರಿಸುವ ಜೊತೆಗೆ ಯಾರೂ ದುಶ್ಚಟಗಳಿಗೆ ದಾಸರಾಗದೇ ಸನ್ಮಾರ್ಗ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕೆಂದು ಹೇಳುವ ಜೊತೆಗೆ ಈ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ…

Read More

ಬಸವನಬಾಗೇವಾಡಿ: ವಿದ್ಯಾರ್ಥಿಗಳು ಪಠ್ಯದ ಅಧ್ಯಯನದೊಂದಿಗೆ ಕಾನೂನುಗಳ ಬಗ್ಗೆ ತಿಳಿದುಕೊಂಡು ತಮ್ಮ ಕುಟುಂಬ ಸದಸ್ಯರಿಗೆ ಹಾಗೂ ಇತರರಿಗೆ ಕಾನೂನಿನ ಮಹತ್ವ ತಿಳಿಸಿಕೊಡಬೇಕು ಎಂದು ವಕೀಲ ವಿ.ಬಿ.ಮರ್ತುರ ಹೇಳಿದರು.ಪಟ್ಟಣದ ಸಮೀಪವಿರುವ ಜೈನಾಪೂರ ಗ್ರಾಮದಲ್ಲಿ ಬುಧವಾರ ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸ್ತೆಯಲ್ಲಿ ಸಂಚರಿಸುವಾಗ ರಸ್ತೆ ನಿಯಮ ಪಾಲಿಸಬೇಕು. ಬೈಕ್ ಸವಾರಿ ಮಾಡುವ ವೇಳೆ ಹೆಲ್ಮೇಟ್ ಕಡ್ಡಾಯವಾಗಿ ಬಳಸುವುದು ಸೇರಿದಂತೆ ವಿವಿಧ ನಿಯಮಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಸ್.ವಿ.ಅಗಸರ ಮಾತನಾಡಿದರು.ಮುಖಂಡ ಶಂಕ್ರೆಪ್ಪ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು.ಹಣಮಂತ ಗೊಳಸಂಗಿ, ಮಲ್ಲು.ಎಸ್.ಗೊಳಸಂಗಿ, ಶಾಂತಪ್ಪ ಜಾಧವ, ಪರಶುರಾಮ ಹೊಸಮನಿ ಇದ್ದರು.ರೇಖಾ ಪೂಜಾರಿ, ಸವಿತಾ ಪೂಜಾರಿ ಪ್ರಾರ್ಥನಾಗೀತೆ ಹಾಡಿದರು. ಉಪನ್ಯಾಸಕ ಚೇತನ ಬಾಗೇವಾಡಿ ಸ್ವಾಗತಿಸಿದರು. ಎಚ್.ಡಿ.ಬಿರಾದಾರ ವಂದಿಸಿದರು.ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಗ್ರಾಮದಲ್ಲಿ ಶ್ರಮದಾನದ ಮೂಲಕ ಸ್ವಚ್ಚತೆಯ ಮಹತ್ವ ಕುರಿತು ಜಾಗೃತಿ ಮೂಡಿಸಿದರು.ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Read More