ಮೋರಟಗಿ: ಸಂಗೀತದಲ್ಲಿ ಸ್ವರ್ಗ ಅಡಗಿದೆ. ಸಂಗೀತ ಬಲ್ಲವನು ಮಾನಸಿಕವಾಗಿ ಎಂದಿಗೂ ಕುಗ್ಗುವುದಿಲ್ಲ. ಸಂಗೀತ ಕೇಳುವುದರಿಂದ ದಣಿವು ಮಾಯವಾಗುತ್ತದೆ ಎಂದು ಗಣಿತ ಭೋದಕ ಪರಶುರಾಮ ದೇಸುಣಗಿ ಹೇಳಿದರು.
ಗ್ರಾಮದ ಐಡಿಎಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಸಂಗೀತ ಸೌರಭ ಸಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಕರು ಮೊಬೈಲ್ ಎಂಬ ಗಿಳಿಯ ಹಿಂದೆ ಬಿದ್ದು ಸುಂದರವಾದ ಬದುಕನ್ನೇ ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸಿಕೊಟ್ಟರೆ ಸಾಲದು ಮನೆಯಲ್ಲಿ ಅನಾವಶ್ಯಕ ಮೊಬೈಲ್ ಬಳಕೆ ಮಾಡಲು ಅನುಮತಿ ನೀಡಬಾರದು. ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ಪಾಲಕರು ಒಂದು ವೇಳೆ ಅನಕ್ಷರಸ್ತರಾಗಿದ್ದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಖಂಡಿತ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಶ್ರೀ ಭಾಗ್ಯವಂತಿ ಸಂಸ್ಕೃತಿಕ ನಾಟ್ಯ ಕಲಾ ತಂಡ ಮೋರಟಗಿ ಇವರಿಂದ ವಿವಿಧ ರೀತಿಯ ಸಂಗೀತ ಹಾಡುವ ಮೂಲಕ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಹುಸೇನಭಾಷಾ ಬಾಗವಾನ, ಶ್ರೀ ಭಾಗ್ಯವಂತಿ ಸಾಂಸ್ಕೃತಿಕ ನಾಟ್ಯ ಕಲಾವಿದರ ಸಂಘದ ಮಾಲಿಕ ಭೀಮರಾಯ ಕಟ್ಟಿಮನಿ, ಶಿಕ್ಷಕರಾದ ಗುರುರಾಜ ನಡುವಿನಕೇರಿ, ಈರಣ್ಣ ವಿಶ್ವಕರ್ಮ, ಸೇರಿದಂತೆ ಕಲಾವಿದರ ತಂಡ, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

