ಇಂಡಿಯಲ್ಲಿ ಭಾಗ್ಯವಂತಿ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಚಿದಂಬರ ಬಂಡಗರ ಅಬಿಮತ
ಉದಯರಶ್ಮಿ ದಿನಪತ್ರಿಕೆ
ಇಂಡಿ: “ಪತ್ರಿಕೋದ್ಯಮವು ನಮ್ಮ ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಅತ್ಯಂತ ಪ್ರಬಲವಾದ ನಾಲ್ಕನೇ ಅಂಗವಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ, ತಪ್ಪುಗಳನ್ನು ತಿದ್ದುವಲ್ಲಿ ಮತ್ತು ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವಲ್ಲಿ ಪತ್ರಕರ್ತರ ಜವಾಬ್ದಾರಿ ಹಾಗೂ ಕಠಿಣ ಶ್ರಮ ಹಿರಿದಾದುದು,” ಎಂದು ನಾದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಿದಂಬರ ಬಂಡಗರ ಹೇಳಿದರು.
ನಗರದ ಕ್ಷೇತ್ರಶಿಕ್ಷಣಾಧಿಜಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಚವಡಿಹಾಳ ಗ್ರಾಮದ ಭಾಗ್ಯವಂತಿ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹಾದೇವಪ್ಪ ಏವೂರ್ ಅವರು, “ಸಮಾಜದ ಮುನ್ನಡೆ ಹಾಗೂ ಅಭಿವೃದ್ಧಿಯಲ್ಲಿ ಪತ್ರಿಕೋದ್ಯಮದ ಪಾತ್ರ ದೊಡ್ಡದಾಗಿದೆ. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಪತ್ರಕರ್ತರು ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ,” ಎಂದರು.
ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮಾತನಾಡಿ, “ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರ ನಡುವೆ ಪತ್ರಿಕೆಗಳು ಪ್ರಮುಖ ಕೊಂಡಿಯಾಗಿವೆ. ಪತ್ರಕರ್ತರು ಸದಾ ಜನಪರ ಕಾಳಜಿಯೊಂದಿಗೆ ನಿಷ್ಪಕ್ಷಪಾತ ವರದಿಗಾರಿಕೆಗೆ ಆದ್ಯತೆ ನೀಡಬೇಕು,” ಎಂದು ಕರೆ ನೀಡಿದರು.
ಹಿರಿಯ ಪತ್ರಕರ್ತ ಉಮೇಶ ಕೊಳೇಕರ ಅವರು ಮಾತನಾಡಿ, “ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಕುಗ್ಗಿಲ್ಲ. ಪತ್ರಕರ್ತರು ಮೌಲ್ಯಾಧಾರಿತ ಪತ್ರಿಕೋದ್ಯಮವನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಇದೆ,” ಎಂದು ತಿಳಿಸಿದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾವುರ ಅವರು ಮಾತನಾಡಿ, “ಪತ್ರಕರ್ತರು ಮತ್ತು ಸರಕಾರಿ ನೌಕರರು ಸಮಾಜದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಬೇಕಿದೆ. ಕಷ್ಟ ಕಾಲದಲ್ಲಿ ಸಾರ್ವಜನಿಕರ ಪರವಾಗಿ ನಿಲ್ಲುವ ಪತ್ರಿಕಾ ರಂಗದ ಸೇವೆ ಸ್ಮರಣೀಯ,” ಎಂದರು.
ಬಿಜೆಪಿ ಮುಖಂಡ ಅನೀಲ ಜಮಾದಾರ, ಜೆಡಿಎಸ್ ಮುಖಂಡ ಅಯುಬ ನಾಟೀಕಾರ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚವಡಿಹಾಳದ ಭಾಗ್ಯವಂತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ದಶವಂತ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ.ವೈ. ಗೊರನಾಳ, ವೈ.ಜಿ. ಬಿರಾದಾರ ಮಾತನಾಡಿದರು.
ವೇದಿಕೆಯಲ್ಲಿ ಹೆಸ್ಕಾಂ ಎಇ ಸಂಗಮೇಶ ಮೇಡೇದಾರ, ಕ್ಷೇತ್ರಶಿಕ್ಷಣಾಧಿಕಾರಿ ಮೋಹನ್‌ಕುಮಾರ್ ಪಿ, ಹಿರಿಯ ಪತ್ರಕರ್ತರಾದ ಎ.ಸಿ. ಪಾಟೀಲ, ಆರ್.ಬಿ. ಸಿಂಪಿ, ನಿಜಣ್ಣ ಕಾಳೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಯಮನಾಜಿ ಸಾಳುಂಕೆ, ಪ್ರಕಾಶ ಐರೊಡಗಿ ಇದ್ದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಉಮೇಶ ಬಳಬಟ್ಟಿ, ಯಲಗೊಂಡ ಬೇನೂರ, ನಿಂಗನಗೌಡ ಬಿರಾದಾರ, ಖಾಜು ಸಿಂಗೆಗೋಳ, ಶಂಕರ ಜಮಾದಾರ, ಶರಣು ಕಾಂಬಳೆ, ಆನಂದ ಗಣಾಚಾರಿ, ಸಚಿನ್ ಇಂಡಿ, ಮಲ್ಲಿಕಾರ್ಜುನ ಹಾವಿನಾಳಮಠ, ರಾಮಚಂದ್ರ ಯಂಕಂಚಿ, ಫಯಾಜ ಬಾಗವಾನ, ಸಿದ್ದು ಕೋಷ್ಠಿ, ಸಿದ್ದು ಹತ್ತಳ್ಳಿ, ಅಲ್ಲಾಭಕ್ಷ ಗೋರೆ, ಸಂಜು ಕೋಳಿ, ಕಾಶೀನಾಥ ಕ್ಷತ್ರಿ, ಅರವಿಂದ ಕಾಂಬಳೆ, ತುಕಾರಾಮ ಪವಾರ, ಲಾಲಸಿಂಗ ರಾಠೋಡ, ಆನಂದ ಅಗರಖೇಡ, ಸೇರಿದಂತೆ ಭಾಗ್ಯವಂತಿ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ತಾಲೂಕಿನ ಪತ್ರಕರ್ತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪತ್ರಕರ್ತರ & ವಿತರಕರ ಸೇವೆ ಅನನ್ಯ
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, “ಪತ್ರಿಕೆಗಳು ಸತ್ಯದ ಹಾದಿಯಲ್ಲಿ ಸಾಗಬೇಕು ಮತ್ತು ಸಮಾಜದ ತಪ್ಪು ಒಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು. ಪತ್ರಕರ್ತರು ತಮ್ಮ ಪ್ರಾಣದ ಹಂಗು ತೊರೆದು, ಹಗಲಿರುಳು ಶ್ರಮಿಸಿ ಸಮಾಜದ ನೈಜ ಚಿತ್ರಣವನ್ನು ನಮ್ಮ ಕಣ್ಣಮುಂದೆ ತರುತ್ತಾರೆ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವ ಪತ್ರಕರ್ತರ ಸೇವೆ ಅನನ್ಯವಾದುದು. “ಬೆಳಗಿನ ಜಾವ ಚಳಿ, ಮಳೆ ಎನ್ನದೆ ಕಷ್ಟಪಟ್ಟು ಮನೆಮನೆಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರ ಶ್ರಮವೂ ಶ್ಲಾಘನೀಯ. ಅವರ ಹಿತದೃಷ್ಟಿಯಿಂದ ಮಳೆಗಾಲದಲ್ಲಿ ಅನುಕೂಲವಾಗುವಂತೆ ರೇನ್‌ಕೋಟ್ ನೀಡಿ ಗೌರವಿಸುತ್ತಿರುವುದು ಅತ್ಯಂತ ಪುಣ್ಯದ ಮತ್ತು ಹೆಮ್ಮೆಯ ಕಾರ್ಯ” ಎಂದು ಹರಸಿದರು.

