ಬಸವನಬಾಗೇವಾಡಿ: ತಾಲೂಕಿನ ಮುಳ್ಳಾಳ ಗ್ರಾಮದಲ್ಲಿ ಮರಗಮ್ಮದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ಶುಕ್ರವಾರ ನೆರವೇರಿತು. ಇಂಗಳೇಶ್ವರ ಬೃಂಗೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮರಗಮ್ಮದೇವಿ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಿದ ನಂತರ ಮೂರ್ತಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ನೂತನ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಳ್ಳಾಳ ಗ್ರಾಮ ಸಣ್ಣ ಗ್ರಾಮವಾದರೂ ಎಲ್ಲರೂ ಒಂದಾಗಿ ನೂತನ ದೇವಸ್ಥಾನವನ್ನು ನಿರ್ಮಾಣ ಮಾಡಿರುವುದು ಶ್ಲಾಘನೀಯ. ಇದು ಜನರ ಭಕ್ತಿಯ ಪ್ರತೀಕವಾಗಿದೆ. ಸರ್ಕಾರದ ನೆರವು ಪಡೆದುಕೊಂಡಿದ್ದರೂ ಎಲ್ಲರೂ ಕೂಡಿಕೊಂಡು ಅಚ್ಚುಕಟ್ಟಾಗಿ ಈ ಕಾರ್ಯ ಮಾಡಿರುವುದು ಮೆಚ್ಚುವಂತಹದ್ದು. ಆಧ್ಯಾತ್ಮದಿಂದ ನಾವೆಲ್ಲರೂ ನೆಮ್ಮದಿಯ ಜೀವನ ಸಾಗಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡೋಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಗೌಡ ಬಿರಾದಾರ, ಮುಖಂಡರಾದ ರಾಹುಲ ಕುಬಕಡ್ಡಿ, ರವಿ ಭಾವಿಕಟ್ಟಿ, ಸುರೇಶ ಹಾರಿವಾಳ, ಸಿದ್ದನಗೌಡ ಪಾಟೀಲ, ರಾಮನಗೌಡ ಪಾಟೀಲ, ವಸಂತ ಹಂಡಿ,ನಾಗಪ್ಪ ಕುಂಬಾರ, ಗ್ರಾಪಂ ಸದಸ್ಯರಾದ ರವಿ ಮ್ಯಾಗೇರಿ, ಶಂಕ್ರೆಪ್ಪ ಹುಲ್ಲೂರ, ಅಬ್ದುಲ ಮುಲ್ಲಾ, ವಿಜಯಲಕ್ಷ್ಮೀ ಪಾಟೀಲ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ಯೋಧರನ್ನು ಸನ್ಮಾನಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

