ಮುದ್ದೇಬಿಹಾಳ: ಪಟ್ಟಣದ ಬಜಾರ ಮುಖ್ಯ ರಸ್ತೆಯಲ್ಲಿರುವ ಡ್ರೈನೇಜ್ ಸಂತೆಯ ದಿನವಾದ ಗುರುವಾರ ಓವರ್ ಫ್ಲೋ ಆಗಿ ದಾರಿಯುದ್ದಕ್ಕೂ ಹರಿದು ಸಾಕಷ್ಟು ತಾಪತ್ರೆಯ ತಂದೊಡ್ಡಿ ಸಂತೆಗೆ ಬಂದ ಜನ ಮೂಗು ಮುಚ್ಚಿಕೊಂಡೇ ತಿರುಗಾಡುತ್ತ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಮದ್ಯಾಹ್ನ ೩ಗಂಟೆಗೆ ಈ ಸಮಸ್ಯೆ ತಲೆದೋರಿದ್ದು ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು, ವಯೋವೃದ್ಧರು ತುಳಿಕೊಂಡೇ ತಿರುಗಾಡುವ ಅನಿವಾರ್ಯತೆ ಎದುರಾಗಿತ್ತು.
ಈ ವೇಳೆ ಪಟ್ಟಣದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಸುದೇವ ಶಾಸ್ತ್ರಿ ಮಾತನಾಡಿ, ನಮಗೆ ಈ ಸಮಸ್ಯೆ ಹೊಸದೇನೂ ಅಲ್ಲ. ಮೇಲಿಂದ ಮೇಲೆ ಮರುಕಳಿಸುತ್ತಲೇ ಇರುತ್ತೆ. ಈ ಬಗ್ಗೆ ಎಷ್ಟು ದೂರಿದರೂ ಯಾವುದೇ ಕ್ರಮವಾಗುತ್ತಿಲ್ಲ. ಒಳಚರಂಡಿ ಇಲಾಖೆಯವರಿಗೆ ದೂರಿದರೆ ಪುರಸಭೆಯವರ ಮೇಲೆ ಹಾಕುತ್ತಾರೆ. ಪುರಸಭೆಯವರಿಗೆ ತಿಳಿಸಿದರೆ ಒಳಚರಂಡಿ ಇಲಾಖೆಯತ್ತ ಬೆರಳು ತೋರಿಸುತ್ತಾರೆ. ಹೀಗಾದರೆ ಇದಕ್ಕೆ ಶಾಶ್ವತ ಪರಿಹಾರ ಯಾವಾಗ ಎಂಬ ಬಗ್ಗೆ ದೊಡ್ಡ ಚಿಂತೆ ನಮಗೆ ಕಾಡುತ್ತಿದೆ. ಚೇಂಬರ್ ನಿಂದ ಕೊಳಕು ನೀರು ಹೊರಬರುತ್ತಿದ್ದಂತೆಯೇ ರಸ್ತೆಯುದ್ದಕ್ಕೂ ಹರಿಯುತ್ತದೆ. ಇದರಿಂದ ಗಬ್ಬು ವಾಸನೆ ಅಲ್ಲದೇ ಇದರಿಂದ ಸಾಂಕ್ರಾಮಿಕ ರೋಗ ಹರಡುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರದ ಅವಶ್ಯಕತೆ ಅತೀ ಅವಶ್ಯ. ಜಿಲ್ಲಾಧಿಕಾರಿಗಳು ಕೂಡಲೇ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

